ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ಕ್ವಾರಂಟೈನ್‌ಗೆ ಮುಖ್ಯಮಂತ್ರಿ; ಟ್ವೀಟರ್‌ನಲ್ಲಿ ಮಾಹಿತಿ

|
Google Oneindia Kannada News

ರಾಂಚಿ, ಜುಲೈ 08 : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 3056.

ಬುಧವಾರ ಹೇಮಂತ್ ಸೊರೇನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಸಂಪುಟದ ಒಬ್ಬರು ಸದಸ್ಯರು ಮತ್ತು ಪಕ್ಷದ ಶಾಸಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮುಂಜಾಗ್ರಕಾ ಕ್ರಮವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ" ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತೆ ಎಂದು ಒಪ್ಪಿಕೊಂಡ WHO ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತೆ ಎಂದು ಒಪ್ಪಿಕೊಂಡ WHO

"ಸಚಿವರು ಮತ್ತು ಶಾಸಕರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾನು ಕೆಲವು ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತೇನೆ. ಮನೆಯಿಂದಲೇ ಕೆಲಸ ಮಾಡುತ್ತೇನೆ" ಎಂದು ಹೇಮಂತ್ ಸೊರೇನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿಯಾಗಬಹುದು: ಎಚ್ಚರಿಕೆ ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿಯಾಗಬಹುದು: ಎಚ್ಚರಿಕೆ

Hemant Soren

"ಸಾರ್ವಜನಿಕ ಸ್ಥಳಕ್ಕೆ ಹೋಗುವುದನ್ನು ಆದಷ್ಟು ತಡೆಯಿರಿ. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ. ಮಾಸ್ಕ್ ಇಲ್ಲವಾದಲ್ಲಿ ಮೂಗು, ಬಾಯಿ ಮುಚ್ಚುವಂತಹ ಬಟ್ಟೆಯನ್ನು ಕಟ್ಟಿಕೊಳ್ಳಿ, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಿ" ಎಂದು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.

ಜಾರ್ಖಂಡ್ ಸಿಎಂ ಆದ ಹೇಮಂತ್ ಸೊರೆನ್, ಬಿಜೆಪಿಯಿಂದ ರಾಜ್ಯ ಕಸಿದ ತೃಪ್ತಿ ಕಾಂಗ್ರೆಸ್‌ಗೆಜಾರ್ಖಂಡ್ ಸಿಎಂ ಆದ ಹೇಮಂತ್ ಸೊರೆನ್, ಬಿಜೆಪಿಯಿಂದ ರಾಜ್ಯ ಕಸಿದ ತೃಪ್ತಿ ಕಾಂಗ್ರೆಸ್‌ಗೆ

ಜೆಎಂಎಂ ಪಕ್ಷದ ಶಾಸಕರು, ಸಚಿವರು ಬೇಗ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾರೈಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೇಮಂತ್ ಸೊರೇನ್ ಅವರಿಗೆ ಇಂದು ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡುವ ಸಾಧ್ಯತೆ ಇದ್ದು, ಸಂಜೆ ಮಾದರಿಯನ್ನು ಪಡೆದುಕೊಳ್ಳಲಾಗುತ್ತದೆ.

English summary
Jharkhand Chief Minister Hemant Soren is isolating himself after his two colleagues tested positive for Coronavirus. CM tweeted about it on July 8, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X