ಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗೋಶಾಲೆ, ಚಿತ್ರನಗರಿ
ರಾಂಚಿ, ನವೆಂಬರ್ 25: ಜಾರ್ಖಾಂಡ್ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಭಾನುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ತನ್ನ ಭರವಸೆಯ ಪಟ್ಟಿಯಲ್ಲಿ ಎಲ್ಲಾ ವರ್ಗದವರಿಗೆ ಸರಣಿ ಮೊತ್ತ, ಕೃಷಿ ಸಾಲ ಮನ್ನಾ, ಗೋ ಶಾಲೆಗಳನ್ನು ತೆರೆಯುವುದು ಎಂದು ಹೇಳುವುದರ ಮೂಲಕ ಜಾರ್ಖಂಡ್ ಮತದಾರರನ್ನು ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ.
ಸ್ಥಳೀಯ ಸಿನಿಮಾವನ್ನು ಅಭಿವೃದ್ದಿಪಡಿಸಲು ರಾಜ್ಯಕ್ಕೆ ಚಿತ್ರ ನಗರಿ ಭರವಸೆ ನೀಡಿದೆ. ಗೋ ಶಾಲೆಗಳ ನಿರ್ಮಾಣ ಮಾಡುವುದು, ಗೌಚರ್ ಅಭಿವೃದ್ದಿ ಮಂಡಳಿ, ಬುಡಕಟ್ಟು ಜನಾಂಗದವರಿಗೆ ಭೂ ಹಕ್ಕುಗಳನ್ನು ನೀಡುವುದು, ಕೃಷಿ ಸಾಲ ಮನ್ನಾ, ಪಿಂಚಣಿ, ಮಹಿಳಾ ಸಬಲೀಕರಣ ಮತ್ತು ಜನಸಮೂಹದ ಹಿಂಶಾಚಾರದ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವುದಾಗಿ ತನ್ನ ಭರವಸೆಗಳನ್ನು ಪ್ರಣಾಳಿಕೆ ಮೂಲಕ ಅಸಂಖ್ಯಾತ ಸಮುದಾಯಗಳ ಮುಂದಿಟ್ಟಿದೆ.
ಜಾರ್ಖಂಡ್ ನ 81 ಕ್ಷೇತ್ರಗಳಲ್ಲಿ ನವೆಂಬರ್ 30ರಿಂದ 5 ಹಂತಗಳಲ್ಲಿ ಮತ ಚಲಾಯಿಸಲಿದೆ. ಕಾಂಗ್ರೆಸ್ 2014ರಲ್ಲಿ ಕೇವಲ 6 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 31 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದು ಜಾರ್ಖಂಡ್ ಮುಕ್ತಿ ಮೋರ್ಚಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಸಾಮಾಜಿಕ ನ್ಯಾಯದ ಭರವಸೆಯನ್ನು ನೀಡಿದೆ.

ಜೆಮ್ಶೆಡ್ ಪುರ್ ಪೂರ್ವದ ಬಿಜೆಪಿ ಹಾಲಿ ಮುಖ್ಯಮಂತ್ರಿ ರಘುವರ್ ದಾಸ್ ವಿರುದ್ದ ಅದು ತನ್ನ ವಕ್ತಾರ ಗೌರವ್ ವಲ್ಲಭ್ ರನ್ನು ಕಣಕ್ಕಿಳಿಸಿದೆ.
೨ಲಕ್ಷ ರೂ, ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದು, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವುದಾಗಿ ಹೇಳಿದೆ. ಇದರಲ್ಲಿ ವಿದ್ಯುತ್ ಗೆ ಸಬ್ಸಿಡಿ ನೀಡುತ್ತದೆ ಮತ್ತು ರೈತರ ಮೇಲಿನ ಹೊರೆ ಸರಾಗವಾಗಿಸಲು ಭತ್ತದಂತಹ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ.
ಗೋ ಶಾಲಾ ಅಭಿವೃದ್ದಿ ಮಂಡಳಿಯಲ್ಲಿ ಗೋ ಶಾಲೆ ಪಾಲನೆಗಾಗಿ ಸಕಷ್ಟು ಬಜೆಟ್ ಮೀಸಲಿಡಕಾಗುವುದು, ಗೋ ಶಾಲೆಗಳಿಗೆ ಅಗತ್ಯ ಶೆಡ್, ವೈದ್ಯಕೀಯ ಸೇವೆ, ನೀರು ಮತ್ತು ಮೇವುಗಳನ್ನು ನಿಡಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.












Click it and Unblock the Notifications