Breaking:ಪ್ರೀತಿ ನಿರಾಕರಿಸಿದ ಯುವತಿಗೆ ಚಾಕು ಇರಿದು, ತಾನೂ ಕುತ್ತಿಗೆ ಕೊಯ್ದಕೊಂಡು ಪಾಗಲ್ ಪ್ರೇಮಿ
ರಾಮನಗರ, ಸೆಪ್ಟೆಂಬರ್ 13: ಪಾಗಲ್ ಪ್ರೇಮಿಯೊಬ್ಬ ತನ್ನನ್ನು ಪ್ರೀತಿ ಮಾಡಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು, ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣದ ಕೋಟೆ ಬಡವಾಣೆಯಲ್ಲಿ ನಡೆದಿದೆ.
ರಾಮನಗರದ ಸಂಗೀತ ಮೊಬೈಲ್ಸ್ ಶೋ ರೂಂ ಮೇಘನಾ ಜೊತೆ ಕೆಲಸ ಮಾಡುತ್ತಿದ್ದ ರಾಮನಗರದ ನಿವಾಸಿ ವೆಂಕಟೇಶ್ ಎಂಬಾತ ಯುವತಿಗೆ ಚಾಕು ಹಾಕಿ ತಾನು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನೂ ಹಲ್ಲೆಗೊಳಗಾದ ಯುವತಿ ಮೇಘನಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.
ಬೊಂಬೆ ನಾಡು ಖ್ಯಾತಿಯ ಚನ್ನಪಟ್ಟಣದ ಕೋಟೆ ಬಡವಾಣೆಯ ವರದರಾಜ ಸ್ವಾಮಿ ದೇವಾಲಯದ ಸಮೀಪದಲ್ಲಿರುವ ಮೇಘನಾ ಎಂಬ ಯುವತಿ ಮನೆಗೆ ನುಗ್ಗಿದ ಹುಚ್ಚು ಪ್ರೇಮಿ ವೆಂಕಟೇಶ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಮೇಘನಾ ಪ್ರೀತಿ ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿ ವೆಂಕಟೇಶ್ ಚಾಕುವಿನಿಂದ ಯುವತಿಯ ಹೊಟ್ಟೆಗೆ ಹಾಗೂ ಬೆನ್ನಿನ ಭಾಗಕ್ಕೆ ಇರಿದು ತಾನು ಕೂಡ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿ ಚಿಂತಾ ಜನಕವಾಗಿದ್ದ ವೆಂಕಟೇಶನನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚನ್ನಪಟ್ಟಣ ಸಿಟಿ ಪೊಲೀಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು- ಮೂರು ವರ್ಷಗಳ ಹಿಂದೆ ಮೊಬೈಲ್ ಶೋರೂಂ ನಲ್ಲಿ ವೆಂಕಟೇಶ್ ಮತ್ತು ಮೇಘನ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮೇಘನಾಳನ್ನು ಇಷ್ಟಪಟ್ಟಿದ್ದ ವೆಂಕಟೇಶ್, ಮೇಘನಾ ಬಳಿ ಹಲವಾರು ಬಾರಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದ. ಆದರೆ, ಮೇಘನಾ ವೆಂಕಟೇಶನ ಪ್ರೀತಿಯನ್ನು ನಿರಾಕರಿಸಿದ್ದಳು.
ವೆಂಕಟೇಶನ ಒತ್ತಾಯಿಸಿದ ಹಿನ್ನಲೆಯಲ್ಲಿ ಮೇಘನಾ ಇತ್ತೀಚೆಗೆ ಮೊಬೈಲ್ ಶೋರೂಂ ನಲ್ಲಿ ಕೆಲಸ ಬಿಟ್ಟು ಬೆಂಗಳೂರಿನ ಜ್ಯುವೆಲರಿ ಶಾಪ್‌ಗೆ ಕೆಲಸಕ್ಕೆ ತೆರಳುತ್ತಿದ್ದಳು ಮಂಗಳವಾರ ಮೇಘನಾ ಮನೆಯಲ್ಲಿರುವ ವಿಚಾರ ತಿಳಿದು ಮನೆಗೆ ತೆರಳಿದ ವೆಂಕಟೇಶ ಕೃತ್ಯ ಎಸಗಿದ್ದಾನೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications