ಚನ್ನಪಟ್ಟಣ; ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ

ರಾಮನಗರ, ಏಪ್ರಿಲ್ 2; ಕಾಡಾನೆಗಳ ಹಿಂಡು ರೈತರ ಜಮೀನಿನ ಮೇಲೆ ದಾಳಿ ಮಾಡಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Recommended Video

      ರಾಮನಗರ:ಕಾಡಾನೆಗಳ ದಾಳಿಗೆ ರೈತರು ಕಂಗಾಲು | Oneindia Kannada

      ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಮತ್ತು ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಆನೆಗಳ ಹಿಂಡು ಬೆಳೆ ನಾಶ ಮಾಡಿವೆ. ಎರಡು ಗ್ರಾಮಗಳ 5-6 ರೈತರ ಜಮೀನುಗಳ ಮೇಲೆ 10 ಕಾಡನೆಗಳ ಹಿಂಡು ದಾಳಿ ಮಾಡಿ, ನಷ್ಟ ಉಂಟು ಮಾಡಿವೆ.

      ಬಾಳೆ, ಮಾವು, ರಾಗಿ, ಟೊಮೆಟೊ ಸೇರಿದಂತೆ ಬೆಳೆಗಳನ್ನು ನಾಶ ಮಾಡಿವೆ. ರೈತರ ಪಂಪ್‌ಸೆಟ್ ಪರಿಕರಗಳು ಸಹ ಆನೆದಾಳಿಯಿಂದಾಗಿ ಹಾನಿಗೊಂಡಿವೆ. ಈ ಕಾಡನೆಗಳ ಹಿಂಡು ಪದೇ ಪದೇ ಈ ಎರಡು ಗ್ರಾಮಗಳಲ್ಲಿ ಬೆಳೆಗಳನ್ನು ನಾಶ ಪಡಿಸುತ್ತಿವೆ.

      Wild Elephants Destroy Crops In Chennapatna Villages

      ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರು ವರ್ಷವಿಡೀ ಶ್ರಮವಹಿಸಿ ಮಳೆ ಹಾಗೂ ವಿದ್ಯುತ್ ಅಭಾವದ ನಡುವೆಯೂ ಕಷ್ಟ ಪಟ್ಟು‌ ಬೆಳೆದ ಬೆಳೆ ಆನೆಗಳ ಪಾಲಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

      ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆನೆಗಳು ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಿಂದ ಬರುತ್ತಿವೆ. ಈಗಾಗಲೇ ಆ ಅರಣ್ಯ ಪ್ರದೇಶದಲ್ಲಿ ಹಂತ ಹಂತವಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ರೈತರಿಗೆ ತಿಳಿಸಿದರು. ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+