ಚನ್ನಪಟ್ಟಣ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಏನು?: ಸಿ.ಪಿ.ಯೋಗೇಶ್ವರ್ ಪ್ರಶ್ನೆ
ಚನ್ನಪಟ್ಟಣ, ಜನವರಿ, 24: ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ 5 ವರ್ಷದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಕೊಡುಗೆ ಎನು?. ಅವರ ಮಗ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಪ್ರವಾಸದ ವೇಳೆ ಸುಮಾರು 1,500 ಕೋಟಿ ರೂಪಾಯಿ ಅನುದಾನವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆ ರೀತಿ ಏನಾದರೂ ಇದ್ದರೆ ಅದನ್ನು ಶ್ವೇತ ಪತ್ರ ಹೊರಡಿಸಲಿ ಎಂದು ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ಸವಾಲ್ ಹಾಕಿದ್ದಾರೆ.
ಇಂದು ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಒಂದೇ ಒಂದು ರಸ್ತೆಗಳು ಸರಿಯಾಗಿಲ್ಲ. ಅವರು ನಗರದಲ್ಲಿ ಒಂದು ಬಾರಿ ರೌಂಡ್ಸ್ ಹಾಕಲಿ, ರಸ್ತೆಗಳು ಹಾಳಾಗಿರುವುದು ಗೊತ್ತಾಗುತ್ತದೆ. ಅವರು ಹೇಳುವಂತೆ ಅನುದಾನ ಬಂದಿದ್ದರೆ ಬಹುಶ: ಆ ಹಣ ಕಂಟ್ರ್ಯಾಕ್ಟರ್‌ಗಳ ಜೇಬಿನಲ್ಲಿರಬೇಕು ಟಾಂಗ್ ನೀಡಿದರು.
Makar Sankranti 2023: ರಾಸುಗಳಿಗ ಚರ್ವಗಂಟು ರೋಗ ಬೀತಿ: ರಾಮನಗರದಲ್ಲಿ ಸರಳ ಸಂಕ್ರಾಂತಿ ಹಬ್ಬ ಆಚರಣೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸುವ ಕಮಿಟ್ಮೆಂಟ್ ಇರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಬಹುಮತ ಪಡೆದು ಸಿಎಂ ಆಗಿಲ್ಲ, ಕೆಲವೇ ಕೆಲವು ಸ್ಥಾನ ಪಡೆದಿದ್ದ ಅವರು ಲಾಟರಿ ಸಿಎಂ ಆಗಿದ್ದರು ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಜೊತೆ ಗಲಾಟೆ ಮಾಡಿದ್ದರು
ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸಲು ಅವರ ಕೈಲಿ ಆಗಲಿಲ್ಲ. ಅವರಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಗಳ ಇತ್ತು. ಎಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಜೊತೆ ಗಲಾಟೆ ಮಾಡಿಕೊಂಡು ಸರ್ಕಾರ ಕಳೆದುಕೊಂಡರು. ಅದಕ್ಕೆ ನಾನು ಹೊಣೆಗಾರನಾದೆ ಅಷ್ಟೇ. ಅದರಲ್ಲಿ ನಾನು ಅಮಾಯಕ ಎಂದರು.

ಪಂಚರತ್ನ ರಥಯಾತ್ರೆ ಬಗ್ಗೆ ಸಿಪಿವೈ ಹೇಳಿದ್ದೇನು?
ಜೆಡಿಎಸ್ ಪಕ್ಷ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಇವರು ಚುನಾವಣೆಗಾಗಿ ಜನರ ಬದುಕನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲೂ ಇದೇ ಭರವಸೆ ನೀಡಿದ್ದರು.

ಮಹಿಳೆಯರು ಒಡವೆ ಕೆಳೆದುಕೊಂಡಿದ್ದಾರೆ
ಖಾಸಗಿ ಬ್ಯಾಂಕ್‌ಗಳಲ್ಲಿ ಒಡವೆ ಗಿರಿವಿ ಇಟ್ಟು ಸಾಲ ಮಾಡಿದ್ದವರಿಗೂ ಋಣಮುಕ್ತ ಮಾಡುವ ಭರವಸೆ ನೀಡಿದ್ದರು. ಇವರ ಮಾತು ನಂಬಿ ಸಾಲ ಮಾಡಿಕೊಂಡಿದ್ದ ಮಹಿಳೆಯರು ತಮ್ಮ ಒಡವೆಗಳನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಡೇಂಜರ್ ವಿಷಯ, ಇವರನ್ನು ನಂಬಿ ಸಾಕಷ್ಟು ಜನರು ಬೀದಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು.

ಎಚ್.ಡಿ.ಕೆ ವಿರುದ್ಧ ಸಿಪಿವೈ ಆಕ್ರೋಶ
ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿ ವಿಫಲರಾಗಿದ್ದಾರೆ, ಇನ್ನು ಅವರು ಮುಖ್ಯಮಂತ್ರಿಯಾಗಿ ಏನು ಮಾಡುತ್ತಾರೆ?. ಶಾಸಕರಾಗಿ ಅಭಿವೃದ್ಧಿ ಮಾಡಲು ಸಾದ್ಯವಿಲ್ಲವೇ?. ಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆವರಣೆಯಂತ ಸರ್ಕಾರಿ ಕಾರ್ಯಕ್ರಮಗಳಿಗೆ ಕುಮಾರಸ್ವಾಮಿ ಒಂದೇ ಒಂದು ಬಾರಿ ಬಂದಿಲ್ಲ ನೋಡೋಣ ಇದೇ ಜ.26 ರಂದು ಗಣರಾಜ್ಯೋತ್ಸವ ಇದೆ
ಇದು ಅವರ ಕ್ಷೇತ್ರದ ಶಾಸಕ ಅವದಿಯ ಕೊನೆಯ ಸರ್ಕಾರಿ ಕಾರ್ಯಕ್ರಮ ಇದರಲ್ಲಿ ಪಾಲ್ಗೊಳ್ಳುತ್ತಾರೂ ಅಥಬಾ ದೆಹಲಿಗೆ ತೆರಳುತ್ತಾರೂ ಎಂದು ವಿಧಾನ ಪರಿಷತ್ ಸದಸ್ಯ ಸಿಪಿವೈ ವ್ಯಂಗ್ಯವಾಡಿದರು.