Get Updates
Get notified of breaking news, exclusive insights, and must-see stories!

ಕರ್ನಾಟಕಕ್ಕೆ ಕೇಂದ್ರದಿಂದ 50 ಸಾವಿರ ಕೋಟಿ ಅನುದಾನಕ್ಕೆ ವಾಟಾಳ್ ಒತ್ತಾಯ

Recommended Video

      Karnataka Flood: 50 ಸಾವಿರ ಕೋಟಿ ರೂ.ನೀಡಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ ವಾಟಾಳ್

      ರಾಮನಗರ, ಆಗಸ್ಟ್ 9: "ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಆಗಿರುವ ಅನಾಹುತ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕು. ಹಾಗೂ ನೆರೆ ಸಂತ್ರಸ್ತರ ನೆರವಿಗೆ 50 ಸಾವಿರ ಕೋಟಿ ಪರಿಹಾರವನ್ನು ನೀಡಬೇಕು" ಎಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಶುಕ್ರವಾರ ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು.

      ಐಜೂರು ವೃತ್ತದಲ್ಲಿನ ಕೆಎಸ್ ಆರ್‌ ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿದ ಕೊಡ ಹಾಗೂ ಹಂಡೆಗಳನ್ನು ಇಟ್ಟು ಪ್ರತಿಭಟನೆ ನಡೆಸಿದ ಅವರು, ಉತ್ತರ ಕರ್ನಾಟಕದ ನೆರವಿಗೆ 50 ಸಾವಿರ ಕೋಟಿ ನೀಡಬೇಕು, ಮಂತ್ರಿ ಮಂಡಲ ರಚಿಸಿ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಅಲ್ಲದೇ ರಾಜ್ಯದ ಎಲ್ಲ ಜನರು ಕೂಡಾ ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು ಎಂದು ಘೋಷಣೆ ಕೂಗಿದರು.

      ಇದೇ ವೇಳೆ ಮಾತನಾಡಿ, ಉತ್ತರ ಭಾರತದಲ್ಲಿ ನೆರೆ ಹಾವಳಿ ಉಂಟಾದರೆ ಪ್ರಧಾನಿಯವರು ವೈಮಾನಿಕ ವೀಕ್ಷಣೆ ಮಾಡುತ್ತಾರೆ, ಅಕ್ಕಪಕ್ಕದ ಆಂಧ್ರಪ್ರದೇಶ, ತಮಿಳುನಾಡಿಗೆ ಭೇಟಿ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಆಗಿರುವ ಅನಾಹುತದ ಪ್ರಮಾಣ ವೀಕ್ಷಿಸಲು ಇನ್ನೂ ಭೇಟಿ ನೀಡಿಲ್ಲ. ರಾಜ್ಯ ಸರಕಾರವು ಸಂತ್ರಸ್ತರ ನೆರವಿಗೆ ಸರಿಯಾದ ಕೆಲಸ ಮಾಡುತ್ತಿಲ್ಲ, ಎಲ್ಲ ಶಾಸಕರು ಆಯಾ ಕ್ಷೇತ್ರಗಳ ಜನರ ನೆರವಿಗೆ ಮುಂದಾಗಬೇಕು ಎಂದರು.

      Vatal Nagaraj Urges Central Government To Release 50 Thousand Crore Grant To Karnataka

      ಕೇಂದ್ರ ಸರಕಾರ ಕೂಡಲೇ 50 ಸಾವಿರ ಕೋಟಿ ಅನುದಾನವನ್ನು ಘೋಷಣೆ ಮಾಡಬೇಕು. ನವ ಕರ್ನಾಟಕದ ನಿರ್ಮಾಣ ಆಗಬೇಕಿದೆ. ಇನ್ನು ಮಂತ್ರಿ ಮಂಡಲವನ್ನು ರಚನೆ ಮಾಡದ ಸಿಎಂ ಯಡಿಯೂರಪ್ಪನವರು ಏನೂ ರಾವಣನಲ್ಲ. ಅವರಿಗೆ ಹತ್ತು ತಲೆ, ಇಪ್ಪತ್ತು ಕೈಗಳೇನೂ ಇಲ್ಲ. ಎಲ್ಲ ಶಾಸಕರು ಸಂತ್ರಸ್ತರ ನೆರವಿಗೆ ಮುಂದಾಗಬೇಕು. ರಾಜ್ಯದ ಜನರು ಕೂಡ ಉತ್ತರ ಕರ್ನಾಟಕದ ಜನರ ನೆರವಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಬೇಕು ಎಂದು ಮನವಿ ಮಾಡಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+