ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಸ್ವಾವಲಂಬನೆ ಸಾಧಿಸಿದ ಬಿಡದಿ ಟೊಯೋಟಾ ಘಟಕ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 20; ಏಷ್ಯಾದಲ್ಲೇ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ತನ್ನ ರಾಮನಗರ ಜಿಲ್ಲೆಯ ಬಿಡದಿ ತಯಾರಿಕಾ ಘಟಕಕ್ಕೆ ಬೇಕಾದ ವಿದ್ಯುತ್ ಅನ್ನು ತಾನೇ ಉತ್ಪಾದನೆ ಮಾಡಿಕೊಳ್ಳುತ್ತದೆ.

"ಸೌರ ವಿದ್ಯುತ್ ಮತ್ತು ನವೀಕರಿಸುವ ಶಕ್ತಿ ಮೂಲಗಳಿಂದ ಘಟಕ ವಿದ್ಯುತ್ ಪಡೆದುಕೊಳ್ಳುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಶೇ 100ರಷ್ಟು ಸ್ವಾವಲಂಬನೆ ಸಾಧಿಸಲಾಗಿದೆ" ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಜನರಲ್ ಮ್ಯಾನೇಜರ್ ರಾಜೇಂದ್ರ ಹೆಗ್ಡೆ ಹೇಳಿದರು.

43 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ 43 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆವರಣದಲ್ಲಿ ಮಾತನಾಡಿದ ಅವರು, "ಕಳೆದ ಜೂನ್ 2021ರಿಂದ ಈ ಸಾಧನೆಯನ್ನು ಘಟಕ ಮಾಡಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಿಂದ ವಿದ್ಯುತ್ ಸರಬರಾಜಿ ಮೇಲೆ ಅವಲಂಬನೆ ಕಡಿಮೆಯಾಗಿದೆ" ಎಂದರು.

Toyota Kirloskar Plant At Bidadi Generating 100 Per Cent Of Power

"2050 ರ ವೇಳೆಗೆ ತಮ್ಮ ಕಾರ್ಖಾನೆಯ ತಯಾರಿಕಾ ವ್ಯವಸ್ಥೆಯಲ್ಲಿ ಇಂಗಾಲದ ಡೈ ಆಕ್ಷೈಡ್ ಉತ್ಪಾದನೆ ಶೂನ್ಯಕ್ಕೆ ಇಳಿಸುವುದು ಟೊಯೋಟಾದ ಗುರಿ. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಗಳು ಆಗುತ್ತಿದೆ" ಎಂದರು.

ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ

"ಟೊಯೋಟಾ ಕಾರ್ಖಾನೆಗೆ ಸೇರಿದ 432 ಎಕರೆ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದೇ ನೀರನ್ನು ಸಂಸ್ಕರಿಸಿ ವಾಹನ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕಾವೇರಿ ನೀರು ಸರಬರಾಜನ್ನು ಕೇವಲ ಮಾನವ ಬಳಕೆಗೆ ಮಾತ್ರ ಸೀಮಿತವಾಗಿದೆ. ಕಾರ್ಖಾನೆಗೆ ಬೇಕಾದ ಶೇ 90 ರಷ್ಟು ನೀರನ್ನು ಪುನರ್ ಬಳಕೆಯಿಂದಲೇ ಪಡೆಯಲಾಗುತ್ತಿದೆ" ಎಂದು ವಿವರಿಸಿದರು.

ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ಬಿಡದಿ ಟೊಯೋಟಾ ಘಟಕ ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ಬಿಡದಿ ಟೊಯೋಟಾ ಘಟಕ

ಸದ್ಯ ಬಿಡದಿ ಕಾರ್ಖಾನೆಯಲ್ಲಿ ಪ್ರತಿ 2.38 ನಿಮಿಷಕ್ಕೆ ಒಂದು ಇನ್ನೋವಾ ಅಥವಾ ಫಾರ್ಚುನರ್ ಕಾರು ಉತ್ಪಾದನೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಇಂಧನ ಚಾಲಿತ ವಾಹನಗಳ ಬೇಡಿಕೆ ಕಡಿಮೆಯಾಗಲಿದೆ. ವಿದ್ಯುತ್ ಚಾಲಿತ ಕಾರುಗಳು ಮುಂದಿನ ಭವಿಷ್ಯವಾಗಲಿದೆ. ಹೀಗಾಗಿ ಸಂಸ್ಥೆಯೂ ಸಹ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

Toyota Kirloskar Plant At Bidadi Generating 100 Per Cent Of Power

ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಶಂಕರ್ ಮಾತನಾಡಿ, "ಕಳೆದ ಮೂರು ವರ್ಷಗಳಲ್ಲಿ ಟೊಯೋಟಾ ಸುಮಾರು 17 ಸಾವಿರ ಕೋಟಿ ರೂ. ಮೊತ್ತವನ್ನು ವಿವಿಧ ತೆರಿಗೆ ರೂಪದಲ್ಲಿ ಪಾವತಿಸಿದೆ. ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳು ಬಿಡದಿ ಸುತ್ತಮುತ್ತಲ ಪ್ರದೇಶಗಳು ಮತ್ತು ಜಿಲ್ಲಾ ವ್ಯಾಪ್ತಿಗೆ ಹೆಚ್ಚು ನಡೆಯುತ್ತಿದೆ" ಎಂದರು.

"ಶಿಕ್ಷಣ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ತರಬೇತಿ, ವೈಯಕ್ತಿಕ ಸ್ವಚ್ಛತೆ, ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 30 ಮಾದರಿ ಅಂಗನವಾಡಿ ಕೇಂದ್ರಗಳು, 11 ಶಾಲಾ ಕಟ್ಟಡಗಳು, ಪೊಲೀಸರಿಗಾಗಿ ಟ್ರಾಫಿಕ್ ತರಬೇತಿ ಕೇಂದ್ರ, 43 ಶುದ್ದ ಕುಡಿಯುವ ನೀರಿನ ಘಟಕಗ ಸ್ಥಾಪಿಸಲಾಗಿದೆ. ಕೋವಿಡ್ ಸೋಂಕು ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ತಮ್ಮ ಸಂಸ್ಥೆ ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಸಹಕಾರ ನೀಡುತ್ತಿದೆ. 9.5 ಕೋಟಿ ರೂ ವೆಚ್ಚದಲ್ಲಿ ಸಾಧನ, ಸಲಕರಣೆಗಳನ್ನು ಒದಗಿಸಿದೆ" ಎಂದು ಹೇಳಿದರು.

ಟೊಯೋಟಾ ತನ್ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕ್ಷೇಮಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಕಾರ್ಮಿಕರು ತಮ್ಮ ಕುಟುಂಬದೊಂದಿಗೂ ಹೆಚ್ಚು ಸಮಯ ವ್ಯಯಿಸಬೇಕಾಗಿದೆ, ಹೀಗಾಗಿ ವರ್ಷದಲ್ಲಿ 275 ದಿನಗಳ ಮಾತ್ರ ಅವರಿಗೆ ಕೆಲಸವಿರುತ್ತದೆ.

Recommended Video

ಕ್ಯಾಚ್ ಡ್ರಾಪ್ ಮಾಡಿ ಬ್ರಾವೋ ಮೇಲೆ ರೇಗಾಡಿದ ಧೋನಿ ವಿಡಿಯೋ | Oneindia Kannada

20 ವರ್ಷಗಳ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಬಡ್ತಿ ಪಡೆದು ಮಾಸಿಕ ಸುಮಾರು 1 ಲಕ್ಷ ರೂ ವೇತನ ಪಡೆಯುತ್ತಿದ್ದಾರೆ. ಕೋವಿಡ್ ಕಾರಣ ಕಳೆದೆರೆಡು ವರ್ಷಗಳಲ್ಲಿ ಬೇಡಿಕೆ ಮತ್ತು ಉತ್ಪಾದನೆ ಕುಸಿದಿದ್ದರೂ ಸಹ ಕಾರ್ಮಿಕರಿಗೆ ಬೋನಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

English summary
Toyota Kirloskar Motors Plant at Bidadi, Ramanagara generating power with the help of solar and renewable energy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X