ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನೆ ನಡೆಸಿದ್ದ 45 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ ಟೊಯೊಟಾ ಕಂಪನಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 2: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ವಲಯದಲ್ಲಿರುವ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸುಮಾರು ನಾಲ್ಕು ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದ 66 ಕಾರ್ಮಿಕರ ಪೈಕಿ ಸುಮಾರು 45 ಕಾರ್ಮಿರನ್ನು ಟೊಯೊಟಾ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.

45 ಕಾರ್ಮಿಕರ ವಜಾ ಮಾಡಿರುವ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟೊಯೊಟಾ ಆಡಳಿತ ಮಂಡಳಿ, ತಾನು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ಸಮರ್ಥಿಸಿಕೊಂಡಿದೆ. ಇನ್ನುಳಿದ 21 ನೌಕರರ ವಿರುದ್ಧ ಸಣ್ಣ ಶಿಸ್ತಿನ ಕ್ರಮಗಳೊಂದಿಗೆ ಕೆಲಸಕ್ಕೆ ತೆಗೆದುಕೊಂಡಿದೆ.

ಕಾರ್ಖಾನೆ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿ, ನಿಂದನೆ ಮಾಡಿದ್ದ ಟೊಯೊಟಾ ಕಾರ್ಮಿಕ ಯೂನಿಯನ್ ಪದಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಕಂಪನಿ ನಿರ್ಧಾರದ ವಿರುದ್ಧ ಯೂನಿಯನ್ ಕಾನೂನುಬಾಹಿರ ಮುಷ್ಕರ ನಡೆಸಿದ್ದು ದುರಾದೃಷ್ಟಕರ. ಮುಷ್ಕರವನ್ನು ಸರ್ಕಾರ ನಿಷೇಧಿಸಿದ ಹೊರತಾಗಿಯೂ ಸಂಘವು ನಾಲ್ಕು ತಿಂಗಳುಗಳವರೆಗೆ ಮುಷ್ಕರವನ್ನು ವಿಸ್ತರಿಸಿತ್ತು.

Ramanagara: Toyota Company Dismissed 45 Workers Who Were Protested

ಕಾನೂನು ಬಾಹಿರ ಮುಷ್ಕರದ ಅವಧಿಯಲ್ಲಿ 66 ನೌಕರರು ಬೆದರಿಕೆ, ಕಂಪನಿಯ ಆಸ್ತಿಗೆ ಹಾನಿಗೆ ಯತ್ನ, ಮಾನನಷ್ಟ, ಹಲ್ಲೆ ಮುಂತಾದ ಗಂಭೀರ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ ಪರಿಣಾಮ, ಅವರನ್ನು ಅಮಾನತುಗೊಳಿಸುವ ವಿಚಾರಣೆಗೆ ಒಳಪಡಿಸಲಾಯಿತು.

ಟೊಯೊಟಾ ಕಂಪನಿಯು ಶಿಸ್ತಿನ ವಿಚಾರಣೆಯನ್ನು ಮೂರನೇ ವ್ಯಕ್ತಿಯಿಂದ, ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲಾಯಿತು. ವಿಚಾರಣೆಯ ಪ್ರಕ್ರಿಯೆಯಲ್ಲಿ ಅಮಾನತುಗೊಂಡ ಸದಸ್ಯರಿಗೆ ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಒದಗಿಸಲಾಯಿತು. ಈಗ ವಿಚಾರಣೆಗಳು ಪೂರ್ಣಗೊಂಡ ನಂತರ, ಆಡಳಿತ ಮಂಡಳಿ ಗಂಭೀರ ದುಷ್ಕೃತ್ಯದಲ್ಲಿ ತೊಡಗಿದ್ದ 45 ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.

ಇನ್ನುಳಿದ 21 ಸದಸ್ಯರನ್ನು ಸಣ್ಣ ಶಿಸ್ತಿನ ಕ್ರಮಗಳೊಂದಿಗೆ ಹಿಂತೆಗೆದುಕೊಳ್ಳಲಾಗಿದೆ. ಕಂಪನಿಯು ತನ್ನ ಉದ್ಯೋಗಿಗಳೊಂದಿಗೆ ಪರಸ್ಪರ ವಿಶ್ವಾಸ ಮತ್ತು ಗೌರವವನ್ನು ಬೆಳೆಸಲು ಮತ್ತು ಅವರ ಕುಟುಂಬಗಳು ಮತ್ತು ಸಮಾಜಕ್ಕೆ ಸಂತೋಷವನ್ನು ಹರಡುವ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಎಂದು ಟೊಯೊಟಾ ಕಾರ್ಖಾನೆಯ ಆಡಳಿತ ಮಂಡಳಿ ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ‌.

Ramanagara: Toyota Company Dismissed 45 Workers Who Were Protested

45 ನೌಕರರ ವಜಾಕ್ಕೆ ಕಾರ್ಮಿಕ ಸಂಘಟನೆ ಖಂಡನೆ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಮತ್ತೆ ತನ್ನ ಹಠಮಾರಿ ಧೋರಣೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಈ ಹಿಂದೆ ಪ್ರತಿಭಟನೆ ನಿರತ 66 ಕಾರ್ಮಿಕರನ್ನು ಅಮಾನತ್ತು ಮಾಡಲಾಗಿತ್ತು. ಮತ್ತು 8 ಜನ ಸದಸ್ಯರನ್ನು ಕೆಲಸದಿಂದ ವಜಾ ಮಾಡಿತ್ತು.

ಮುಷ್ಕರ ನಿರತ 66 ಜನ ಸದಸ್ಯರಲ್ಲಿ 45 ಸದಸ್ಯರನ್ನು ಸೇವೆಯಿಂದ ವಜಾ ಮಾಡುವ ಮೂಲಕ, ಟೊಯೊಟಾ ಕಾರ್ಖಾನೆ ಮತ್ತೊಮ್ಮೆ ತನ್ನ ದುರಹಂಕಾರದ ಪರಮಾವಧಿಯನ್ನು ನಿರೂಪಿಸಿದೆ. ಇದನ್ನು ಕಾರ್ಮಿಕ ಸಂಘವು ಅತಿ ಕಠಿಣವಾಗಿ ಖಂಡಿಸುತ್ತದೆ ಎಂದು ಕಾರ್ಮಿಕ ಸಂಘಟನೆ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

English summary
Of the 66 workers who protested for four months, about 45 workers were Dismissed by the Toyota Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X