ರಾಮನಗರದಲ್ಲಿ ಕೊರೊನಾ ಭಯ; ಪತ್ರಕರ್ತರ ಪರೀಕ್ಷೆಗೆ ಎಸ್ಪಿ ಮನವಿ

ರಾಮನಗರ, ಏಪ್ರಿಲ್ 25: ಪಾದರಾಯನಪುರ ಗಲಭೆಕೋರರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪತ್ರಕರ್ತರು ಮುಂಜಾಗ್ರತೆಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ಮನವಿ ಮಾಡಿದ್ದಾರೆ.

ಪಾದರಾಯನಪುರದ ಕೈದಿಗಳನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡಿದ ಎರಡು ದಿನ ಹಾಗೂ ನೆನ್ನೆ ಕೊರೊನಾ ಸೋಂಕಿತ ಕೈದಿಗಳು ಹಾಗೂ ಉಳಿದ ಕೈದಿಗಳನ್ನು ರಾಮನಗರದಿಂದ ಬೆಂಗಳೂರು ಶಿಫ್ಟ್ ಮಾಡಿದ ಸಂದರ್ಭದಲ್ಲಿ ವರದಿಗಾರರು ಹಾಗೂ ಕ್ಯಾಮೆರಾಮ್ಯಾನ್ ಗಳು ಬಹಳ ಹತ್ತಿರದಿಂದ ಓಡಾಡಿದ್ದು ಕಂಡುಬಂದಿದೆ. ಅಲ್ಲದೆ ಬಸ್ ಮುಟ್ಟಿರುವ ಅಥವಾ ಇತರ ವಸ್ತುಗಳನ್ನು ಮುಟ್ಟಿರುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

SP Anup Shetty Requested Journalist To Coronavirus Test

ಮಾಧ್ಯಮದವರು ಆದಷ್ಟು ಜಾಗರೂಕತೆಯಿಂದ ಇರಲು ಕೋರಲಾಗಿದೆ. ಯಾರಿಗಾದರೂ ಆರೋಗ್ಯದಲ್ಲಿ ತೊಂದರೆಯಿದ್ದಲ್ಲಿ ಅಥವಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಹಾಗೂ ಯಾರಿಗಾದರೂ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಆದಷ್ಟು ನಿಮ್ಮ ಕುಟುಂಬಸ್ಥರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಪತ್ರಕರ್ತರಿಗೆ ಎಸ್ಪಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+