ಜಾರಕಿಹೊಳಿ ವಿರುದ್ಧದ ಕೇಸ್ ವಾಪಸ್ ಪಡೆದ ನಂತರ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ
ರಾಮನಗರ, ಮಾರ್ಚ್ 10: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ದೂರು ವಾಪಸ್ ಪಡೆದ ನಂತರ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಕನಕಪುರದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ದೂರು ವಾಪಸ್ ಪಡೆದಿದ್ದೇನೆ. ಐದು ಪುಟಗಳು ಸುದೀರ್ಘವಾಗಿ ಬರೆದಿದ್ದೇನೆ. ದೂರು ವಾಪಸ್ ಪಡೆಯಲು ಹಲವಾರು ಕಾರಣಗಳಿವೆ'' ಎಂದು ತಿಳಿಸಿದರು.
ಪೊಲೀಸರು ಮತ್ತೆ ವಿಚಾರಣೆಗೆ ಕರೆದರೆ ಕಾನೂನಾತ್ಮಕವಾಗಿ ಠಾಣೆಗೆ ಹೋಗುತ್ತೇನೆ, ಸುಮೊಟೋ ಕೇಸ್ ದಾಖಲು ಮಾಡುವುದು, ಬಿಡುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು, ಯಾವುದೇ ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲವೆಂದರು.

""ನಾನು ಯಾವುದೇ ಒತ್ತಡಗಳಿಗೆ ಮಣೆದಿಲ್ಲ, ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ಷಡ್ಯಂತ್ರ ಮಾಡಿದ್ದಾರೆ. ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕಿದೆ. ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ'' ಎಂದು ಹೇಳೀದರು.
ಯಾರಾದರೂ ದಾಖಲೆಗಳನ್ನು ಇಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ. ಕೆಲವರು ತೆವಲಿಗೆ ಮಾತನಾಡ್ತಿದ್ದಾರೆ ಅಷ್ಟೇ. ಮಾತನಾಡೋದು ಸುಲಭ, ಆದರೆ ಮಾತಿನಂತೆ ಹೋರಾಟ ಮಾಡಲು ಕಷ್ಟ ಇದೇ, ತೆವಲಿಗೆ ಮಾತನಾಡಬಾರದು ಎಂದು ಮಾಜಿ ಸಿಎಂ ಎಚ್ಡಿಕೆ ಹೆಸರು ಬಳಸದೇ ದಿನೇಶ್ ಕಲ್ಲಹಳ್ಳಿ ಟಾಂಗ್ ನೀಡಿದರು.
ನನ್ನ ಘನತೆಗೆ ಧಕ್ಕೆಯಾಗಿದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ, ಮಾಹಿತಿಗಳನ್ನು ಮಾತ್ರ ಅಧಿಕಾರಿಗಳಿಗೆ ಕೊಟ್ಟು ಸತ್ಯ ಇದ್ದರೆ ತನಿಖೆ ಮಾಡಿ ಎಂದು ಕೊಟ್ಟಿದ್ದೇನೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕ ಇದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಲ್ಲಹಳ್ಳಿ, ಯಾರು ಮಹಾ ನಾಯಕ ಎಂಬುದು ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವನ್ನು ಜೈಲಿಗೆ ಕಳುಹಿಸುವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಕನಕಪುರದ ಕಲ್ಲಹಳ್ಳಿ ನಿವಾಸದಲ್ಲಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದರು.












Click it and Unblock the Notifications