ಚನ್ನಪಟ್ಟಣದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮಗು ಸಾವು
ರಾಮನಗರ, ಜುಲೈ 20: ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಏಳು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣದಲ್ಲಿ ಇಂದು ನಡೆದಿದೆ.
Recommended Video
ಅಜ್ಜಿಯ ಬಳಿ ದುಡ್ಡಿನ ರಾಶಿ ನೋಡಿ ಎಲ್ಲರೂ ಫುಲ್ ಶಾಕ್ | Oneindia Kannada
ನಗರದ ಪೇಟೆಚೇರಿ ನಿವಾಸಿ ಪ್ರದೀಪ್ ಅವರ ಏಳು ತಿಂಗಳ ಮಗುವಿಗೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ದಂಪತಿಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆ ಆಸ್ಪತ್ರೆಯಲ್ಲಿ, ಮಕ್ಕಳ ವೈದ್ಯರು ಇಲ್ಲಿಲ್ಲ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಮಕ್ಕಳ ತಜ್ಞರ ಬಳಿ ಹೋದಾಗಲೂ, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಬೇರೆಡೆ ಹೋಗಲು ತಿಳಿಸಿದ್ದಾರೆ. ಅಲ್ಲಿಂದ ಮತ್ತೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮಗುವನ್ನು ಕಳೆದುಕೊಂಡಿದ್ದಾರೆ ಈ ದಂಪತಿ.
ಚಿಕಿತ್ಸೆ ನೀಡದೇ ಆಸ್ಪತ್ರೆಗೆ ಅಲೆದು ಅಲೆದು ಮಗುವಿನ ಸಾವಿಗೆ ಕಾರಣವಾಗಿದೆ.












Click it and Unblock the Notifications