ಚನ್ನಪಟ್ಟಣ ಗಲಾಟೆಗೂ ನನಗೂ ಸಂಬಂಧವಿಲ್ಲ: ಅನಿತಾ ಕುಮಾರಸ್ವಾಮಿ

Recommended Video

      ಅನಿತಾ ಕುಮಾರಸ್ವಾಮಿ : ಗಲಾಟೆಗೂ ನನಗೂ ಸಂಬಂಧವಿಲ್ಲ | Oneindia Kannada

      ರಾಮನಗರ, ಡಿಸೆಂಬರ್ 6: ಚನ್ನಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದಿದ್ದ ಜಗಳಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

      ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸ್ವಕ್ಷೇತ್ರವಾದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪಕ್ಷದ ಕಚೇರಿಯಲ್ಲಿಯೇ ಬುಧವಾರ ಜೆಡಿಎಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿಕೊಂಡಿದ್ದರು. ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿತ್ತು.

      ಈ ಗಲಾಟೆ ಅನಿತಾ ಕುಮಾರಸ್ವಾಮಿ ಅವರ ಕಾರಣದಿಂದ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

      ramanagara jds anitha kumaraswamy fight in jds channapatna office

      ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಅವರನ್ನು ಪಕ್ಷ ನಿರ್ಲಕ್ಷಿಸುತ್ತಿತ್ತು. ಅನಿತಾ ಅವರು ಜಯಮುತ್ತು ಅವರನ್ನು ದೂರವಿಟ್ಟು ಇತರೆ ಮುಖಂಡರಿಗೆ ಆದ್ಯತೆ ನೀಡುತ್ತಿದ್ದರು. ಇದರ ವಿರುದ್ಧ ಜಯಮುತ್ತು ಬೇಸರ ವ್ಯಕ್ತಪಡಿಸಿದ್ದರು. ಇದರಿಂದ ಉಂಟಾಗಿದ್ದ ಮನಸ್ತಾಪವೇ ಗಲಾಟೆಗೆ ಕಾರಣ ಎನ್ನಲಾಗಿದೆ.

      ಆದರೆ ಇದನ್ನು ನಿರಾಕರಿಸಿರುವ ಅನಿತಾ ಕುಮಾರಸ್ವಾಮಿ, ವೈಯಕ್ತಿಕ ವಿಚಾರದಲ್ಲಿ ಅವರಲ್ಲಿ ಜಗಳ ಉಂಟಾಗಿದೆ. ಈ ಗಲಾಟೆಗೂ ತಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

      ಈ ಹೊಡೆದಾಟದ ವಿಚಾರ ಪಕ್ಷದ ವರಿಷ್ಠರಾದ ದೇವೇಗೌಡರ ಗಮನಕ್ಕೆ ಬಂದಿದೆ. ಅವರೇ ಮಾತನಾಡಿ ಸರಿಪಡಿಸಲಿದ್ದಾರೆ. ಈ ಜಗಳದಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

      ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಮತ್ತು ಲಿಂಗೇಶ್ ಕುಮಾರ್ ನಡುವೆ ಹಾಲಿನ ಡೇರಿ ಚುನಾವಣೆ ವೇಳೆ ವೈಮನಸ್ಸು ಮೂಡಿತ್ತು. ಈ ವಿಚಾರವಾಗಿ ನ್ಯಾಯಾಲಯಕ್ಕೂ ಹೋಗಿದ್ದಾರೆ. ಅವರ ನಡುವೆ ಜಗಳವಾಗಿದೆ. ಅದಕ್ಕೆ ನಾವು ಹೊಣೆಯಲ್ಲ.

      ಇದರಿಂದ ಪಕ್ಷಕ್ಕೆ ಹಾನಿಯಾಗುವುದಿಲ್ಲ. ಬಿಕ್ಕಟ್ಟು ಸರಿಪಡಿಸುವಂತಹ ಸಮಸ್ಯೆಯೂ ಉಂಟಾಗಿಲ್ಲ. ಲಿಂಗೇಶ್ ಕುಮಾರ್ ತಮ್ಮ ಆಪ್ತರ ವಲಯದಲ್ಲಿ ಇರುವುದು ಜಯಮುತ್ತುಗೆ ಅಸಮಾಧಾನ ಮೂಡಿಸಿರಬಹುದು ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+