ರಾಮನಗರ: ಶಾರ್ಟ್ ಸರ್ಕಿಟ್ ಗೆ ಅಂಗಡಿ ಭಸ್ಮ, 12 ಲಕ್ಷಕ್ಕೂ ಹೆಚ್ಚು ನಷ್ಟ
ರಾಮನಗರ, ಮಾರ್ಚ್ 17: ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗುಲಿ ವಾಹನದ ಬಿಡಿ ಭಾಗಗಳ ಅಂಗಡಿ ಬೆಂಕಿಗೆ ಆಹುತಿಯಾಗಿರೋ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಚನ್ನಪಟ್ಟಣದ ಸಾತನೂರು ವೃತ್ತದ ಬಳಿ ಇರೋ ಮಂಡ್ಯ ಮೂಲದ ರಘು ಎಂಬುವರಿಗೆ ಸೇರಿದ ವಿವಿಧ ವಾಹನಗಳ ಬಿಡಿ ಭಾಗ, ಆಯಿಲ್ ಸೇರಿದಂತೆ ಪ್ಲಾಸ್ಟಿಕ್ ಪರಿಕರಗಳ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿದೆ. ಇದರಿಂದ 12ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳು ಸೇರಿದಂತೆ ಕ್ಯಾಶ್ ಬಾಕ್ಸ್ ನಲ್ಲಿಟ್ಟಿದ್ದ 30 ಸಾವಿರ ಹಣ ಬೆಂಕಿಯಲ್ಲಿ ಸುಟ್ಟಿದೆ.

ಆಯಿಲ್ ದಾಸ್ತಾನು ಹೆಚ್ಚಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಕೊನೆಗೂ ಬೆಂಕಿ ನಂದಿಸಿದ ಅಗ್ನಿಶಾಮಕದಳ ಅಕ್ಕಪಕ್ಕದ ಅಂಗಡಿಗಳು ಹಾಗೂ ಮನೆಗಳಿಗೆ ಬೆಂಕಿ ತಗುಲದಂತೆ ತಡೆಯುವಲ್ಲಿ ಯಶಸ್ವಿಯಾಯಿತು. ಇದರಿಂದ ಆತಂಕ ನಿವಾರಣೆಯಾಯಿತು.













Click it and Unblock the Notifications