47 ದಿನ ಪೂರ್ಣಗೊಳಿಸಿದ ಟೊಯೊಟೊ ಕಾರ್ಮಿಕರ ಪ್ರತಿಭಟನೆ
ರಾಮನಗರ, ಡಿಸೆಂಬರ್ 26: ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕ ನಡೆಸುತ್ತಿರುವ ಹೋರಾಟ 47 ದಿನಗಳನ್ನು ಪೂರ್ಣಗೊಳಿಸಿದೆ. ಶುಕ್ರವಾರದಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಹೋರಾಟದ ಭಾಗಿಯಾಗಿ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾಡುಮನೆಯಿಂದ-ಬಿಡದಿವರೆಗೆ ಸುಮಾರು 5 ಕಿ.ಮೀ ಬೃಹತ್ ಮಾನವ ಸರಪಳಿ ನಿರ್ಮಿಸಿ ಟೊಯೊಟೊ ಆಡಳಿತ ವರ್ಗ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಟೊಯೊಟೊ ಕಾರ್ಮಿಕ ಸಂಘಟನೆ ಮಾನವ ಸರಪಳಿ ಪ್ರತಿಭಟನೆಗೆ HAL ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಪನಿಯ ವ್ಯವಸ್ಥಾಪಕರು ಕಾರ್ಮಿಕ ಕಾನೂನಿಗಳಿಗೆ ಬೆಲೆ ನೀಡುತ್ತಿಲ್ಲ, ಕಾರ್ಮಿಕ ಶೋಷಣೆ ಕೇವಲ ಟೊಯೊಟೊ ಕಂಪನಿ ಮಾತ್ರವಲ್ಲ ಬಹುತೇಕ ಕಂಪನಿಗಳು ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.

ಮಾನವ ಸರಪಳಿಯ ರಚಿಸಿ ಸರ್ಕಾರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಮೆಯ ನಂತರ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನೆಡೆಯುತ್ತಿರುವ JCTU ಕರೆ ನೀಡಿದ್ದ "ದೆಹಲಿ ರೈತ ಚಲೋ' ಅಂದೋಲನಕ್ಕೆ ಟೊಯೊಟೊ ಕಾರ್ಮಿಕ ಸಂಘಟನೆ ಬೆಂಬಲ ನೀಡಿದರು.












Click it and Unblock the Notifications