ರಾಮನಗರ: ತರಬೇತಿ ಪಡೆಯುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಕುಸಿದು ಬಿದ್ದು ಸಾವು; ಪ್ರತಿಭಟನೆ

ರಾಮನಗರ, ಆಗಸ್ಟ್ 12: ತರಬೇತಿ ಪಡೆಯುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದ್ದು, ಬುಧವಾರ ತಡರಾತ್ರಿ ತರಬೇತಿ ಪೊಲೀಸ್ ಪೇದೆಗಳು ಪ್ರತಿಭಟನೆ ನಡೆಸಿದ್ದಾರೆ.

ಚನ್ನಪಟ್ಟಣದ ಪೊಲೀಸ್ ತರಬೇತಿ ಪಡೆಯುತ್ತಿದ್ದ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಎಲ್ಲಪ್ಪ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೂಲತಃ ಗದಗ ಜಿಲ್ಲೆ ನರಗುಂದ ತಾಲೂಕಿನವರಾದ ಎಲ್ಲಪ್ಪ, ಎರಡೂವರೆ ತಿಂಗಳಿನಿಂದ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ವಂದರಾಗುಪ್ಪೆ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು.

"ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ನಂತರ ಎಲ್ಲಪ್ಪ, ಪೊಲೀಸ್ ತರಬೇತಿ ಪಡೆಯುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪೊಲೀಸ್ ತರಬೇತಿ ಶಾಲೆಯ ಅಧಿಕಾರಿಗಳು ಸೂಕ್ತ ಚಿಕಿತ್ಸೆ ಕೊಡಿಸಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಘಟನೆಯನ್ನು ಖಂಡಿಸಿ ಉಳಿದ ಪೇದೆಗಳು ಪಿಟಿಎಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ," ಒತ್ತಾಯ ಮಾಡಿದ್ದಾರೆ.

Ramanagara: Policeman Died After Collapses While Training; Protest

ಅಧಿಕಾರಿ ಅಮಾನತ್ತಿಗೆ ಮಾಜಿ ಸೈನಿಕರ ಆಗ್ರಹ
ಮಾಜಿ ಸೈನಿಕ ಎಲ್ಲಪ್ಪ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸೈನಿಕರ ಸಂಘ, ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿ ಆಮಾನತ್ತಿಗೆ ಆಗ್ರಹಿಸಿ ಪೊಲೀಸ್ ತರಬೇತಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು‌.

ಮೃತ ಪೊಲೀಸ್ ಕಾನ್‌ಸ್ಟೆಬಲ್ ಎಲ್ಲಪ್ಪ ನೋವಿನಿಂದ ಎರಡು ಗಂಟೆ ನರಳಾಡಿದರೂ, ಅಧಿಕಾರಿಗಳು ಚಿಕಿತ್ಸೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಸೈನಿಕರ ಸಂಘ ಸದಸ್ಯರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

"ಪೊಲೀಸ್ ತರಬೇತಿ ಶಾಲೆಯಲ್ಲಿ ಸುಮಾರು 700 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ವೈದ್ಯರನ್ನು ನೇಮಕ ಮಾಡಿಕೊಂಡಿಲ್ಲ. ಅಲ್ಲದೇ ಕೇವಲ ಒಬ್ಬರು ನರ್ಸ್ ಮಾತ್ರ ಇದ್ದಾರೆ. 700 ಜನ ವಿಧ್ಯಾರ್ಥಿಗಳಿಗೆ ಒಬ್ಬರು ನರ್ಸ್ ಸಾಕೇ?," ಎಂದು ಪ್ರಶ್ನಿಸಿದರು.

Ramanagara: Policeman Died After Collapses While Training; Protest

"ಪೊಲೀಸ್ ತರಬೇತಿ ಶಾಲೆಯ ಪರೀಕ್ಷಾರ್ಥಿಗಳ ಮಾಹಿತಿ ಪ್ರಕಾರ, ಮೃತ ಎಲ್ಲಪ್ಪ ತನಗೆ ಅನಾರೋಗ್ಯವಿದೆ ಎಂದು ಅಧಿಕಾರಿಗಳ ಬಳಿ ಹೇಳಿದ್ದರು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ಮೃತನ ಕುಟುಂಬದವರು ಎಲ್ಲಪ್ಪನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ," ಎಂದು ಮಾಜಿ ಸೈನಿಕರ ಸಂಘದ ಸದಸ್ಯರು ಆರೋಪ ಮಾಡಿದ್ದಾರೆ.

"ರಾಜ್ಯದಲ್ಲಿರುವ ಎಲ್ಲಾ ಪೊಲೀಸ್ ತರಬೇತಿ‌ ಶಾಲೆಗಳಲ್ಲಿ ವೈದ್ಯರನ್ನು ನೇಮಕ ಮಾಡಬೇಕೆಂದು ಮಾಜಿ ಸೈನಿಕರು ಆಗ್ರಹಿಸಿದರು. ಅಲ್ಲದೇ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ಬಹಳಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ತರಬೇತಿ ಪಡೆಯುತ್ತಿರುವ ಪೊಲೀಸ್ ವಿದ್ಯಾರ್ಥಿಗಳು ನಮಗೆ ತಿಳಿಸಿದ್ದಾರೆ."

Ramanagara: Policeman Died After Collapses While Training; Protest

Recommended Video

      ಭಾರತದ ಹೆಲಿಕಾಪ್ಟರ್ ಗಳನ್ನ ವಶಪಡಿಸಿಕೊಂಡ ತಾಲಿಬಾನ್!! | Oneindia Kannada

      ಹಾಗಾಗಿ ಪೊಲೀಸ್ ಕಾನ್‌ಸ್ಟೆಬಲ್ ಎಲ್ಲಪ್ಪ ಸಾವಿನ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಒತ್ತಾಯಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+