ನಮ್ಮ ಕುಟುಂಬ ಯಾವತ್ತೂ ಸೋಲಿನಿಂದ ಕುಗ್ಗಿಲ್ಲ; ಎಚ್ ಡಿಕೆ
ರಾಮನಗರ, ಜೂನ್ 10: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, "ನಮ್ಮ ಕುಟುಂಬ ಯಾವತ್ತೂ ಸೋಲಿಗೆ ಕುಗ್ಗಿಲ್ಲ, ಗೆಲುವಿಗೆ ಹಿಗ್ಗಿಲ್ಲ. ಜನರ ಸೇವೆಗಾಗಿ ಇರುವ ಕುಟುಂಬ ನಮ್ಮದು" ಎಂದಿದ್ದಾರೆ.
Recommended Video
ಚನ್ನಪಟ್ಟಣ- ಕೆಸ್ತೂರು ರಾಜ್ಯ ಹೆದ್ದಾರಿಯ ತಿಟ್ಟಮಾನಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ NH-275 ಹೈವೆಯಲ್ಲಿ ಎಕ್ಸಿಟ್ ಪೋಲ್ ವಿಚಾರವಾಗಿ ಸ್ಥಳಕ್ಕೆ ಭಟಿ ನೀಡಿ ಎನ್.ಎಚ್.ಅಧಿಕಾರಗಳು ಮತ್ತು ಗ್ರಾಮಸ್ಥರೂಂದಿಗೆ ಸಮಾಲೋಚನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

"ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಾಡಿರುವ ಕುಚೋದ್ಯಗಳನ್ನು ಗಮನಿಸಿದ್ದೇನೆ. ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಪ್ರವೇಶ ದೇವರ ಇಚ್ಛೆ. ಅವರು ಈ ಹಿಂದೆಯೇ ಲೋಕಸಭೆಯಲ್ಲಿ ವಿದಾಯ ಹೇಳಿದ್ದರು. ಇದೇ ನನ್ನ ಕೊನೆಯ ಭಾಷಣ ಎಂದಿದ್ದರು. ನಂತರ ಜನರ ಒತ್ತಾಯಕ್ಕೆ ಮಣಿದು ತುಮಕೂರಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದರು. ಆದರೆ ಅಲ್ಲಿಯ ಜನರು ಚುನಾವಣೆಯಲ್ಲಿ ಸೋಲಿಸಿದರು. ಈಗ ಅವರ ಅನುಭವದ ದೃಷ್ಟಿಯಿಂದ ರಾಜ್ಯಸಭೆಗೆ ಹೋಗಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿಯ ಮುಂದೆ ಗಟ್ಟಿ ಧ್ವನಿ ಬೇಕಿದೆ. ಹಾಗಾಗಿ ದೇವೇಗೌಡರು ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ, ಇದರಲ್ಲಿ ಬೇರೆ ಉದ್ದೇಶ ಇಲ್ಲ" ಎಂದು ಹೇಳಿದರು.












Click it and Unblock the Notifications