ನಿಖಿಲ್ ಮದುವೆಗೆ ಕೊರೊನಾ ಭೀತಿ: ಎಚ್ಡಿಕೆ ಕನಸು ಭಗ್ನ
ರಾಮನಗರ, ಮಾರ್ಚ್ 18: ರಾಮನಗರ ಮತ್ತು ಚನ್ನಪಟ್ಟಣ ಜನರ ಮಧ್ಯೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಮಾಡಲು ಆಶಯ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಕೊರೊನಾ ಭೀತಿಯಿಂದಾಗಿ ಮದುವೆ ಸ್ಥಳಾಂತರ ತಯಾರಿ ಆರಂಭವಾಗಿದೆ.
ಈಗಾಗಲೇ ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದಲ್ಲಿ ಮದುವೆ ನಿಶ್ಚಯವಾಗಿತ್ತು, ಅದಕ್ಕೆ ಪೂರ್ವ ತಯಾರಿಯೂ ಜೋರಾಗಿ ನಡೆದಿತ್ತು. ಕಳೆದ ಒಂದು ತಿಂಗಳಿನಿಂದ ಮದುವೆ ಸ್ಥಳದ ಸಿದ್ದತಾ ಕಾಮಗಾರಿಗಳು ನಡೆದಿದ್ದವು.
ಆದರೆ ಇದೀಗ ಮದುವೆಗೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ, ರಾಜಕೀಯ ತವರೂರಾದ ರಾಮನಗರ ಜಿಲ್ಲೆಯಲ್ಲಿ ತಮ್ಮ ಮಗನ ಮದುವೆ ಮಾಡಬೇಕೆಂದುಕೊಂಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಕನಸು ಭಗ್ನಗೊಂಡಿದೆ.

ಇದೇ ಏಪ್ರಿಲ್ 17 ರಂದು ಮದುವೆ ನಿಶ್ಚಿಯವಾಗಿದ್ದ ನಿಖಿಲ್ ಮದುವೆಯನ್ನು ಚನ್ನಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಎಚ್ಡಿಕೆ ಕುಟುಂಬ ಮುಂದಾಗಿದೆ.
ನಿಖಿಲ್ ಕುಮಾರಸ್ವಾಮಿಯ ಮದುವೆ ಸ್ಥಳಾಂತರದ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿತ್ತು. ಇದೀಗ ಮದುವೆ ಸ್ಥಳಾಂತರ ಬಹುತೇಕ ಖಚಿತಗೊಂಡಿದೆ.

ಮದುವೆ ಸಿದ್ಧತೆಗೆ ಹಾಕಿದ್ದ ಶೆಟರ್ ಗಳನ್ನು ಕೆಲಸಾಗರರು ಖಾಲಿ ಮಾಡುತ್ತಿದ್ದಾರೆ. ಬಹುತೇಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಿದ್ಧತೆ ತಯಾರಿ ನಡೆದಿದೆ ಎನ್ನಲಾಗಿದೆ.












Click it and Unblock the Notifications