Channapattana Result: ''ನಿಖಿಲ್ ಸೋಲಿಗೆ ಕುಮಾರಸ್ವಾಮಿನೇ ಕಾರಣ''
ರಾಮನಗರ ನವೆಂಬರ್ 23: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ಸಂಶಯ ವ್ಯಕ್ತಪಡಿಸಿದ್ದರಿಂದ ಭಾರೀ ಖುಷಿಯಲ್ಲಿದ್ದ ಎನ್‌ಡಿಎ ಪಕ್ಷಕ್ಕೆ ಸದ್ಯ ಅಘಾತವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ 17ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು 25,903 ಮತಗಳ ಅಂತರದಲ್ಲಿ ಸಿಪಿ ಯೋಗೇಶ್ವರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಭರ್ಜರಿ ಗೆಲುವು ಸಾಧಿಸುವುದು ಪಕ್ಕಾ ಆಗಿದೆ. ಈ ವೇಳೆ ಮಾತನಾಡಿದ ಸಿಪಿ ಯೋಗೇಶ್ವರ್ ಎನ್‌ಡಿಎ ಸೋಲಿಗೆ ಕಾರಣಗಳನ್ನು ಹೇಳಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ 99,320 ಮತಗಳಿಂದ ಮುನ್ನಡೆಯುತ್ತಿದ್ದರೆ ಬಿಜೆಪಿ 73,417 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 20 ಸುತ್ತಿನಲ್ಲಿ ಮತ ಎಣಿಕೆಯಲ್ಲಿ ಈಗಾಗಲೇ 17 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್ ಗೆಲುವು ಖಚಿತ ಆಗಿದೆ. ಇದೇ ಸಂತಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್, 'ನಿಖಿಲ್ ಸೋಲಿಗೆ ಕುಮಾರಸ್ವಾಮಿನೇ ಕಾರಣ. ಮಂಡ್ಯದಲ್ಲಿ ನಿಖಿಲ್ ಸೋಲಲು ಕುಮಾರಸ್ವಾಮಿ ಕಾರಣ. ಕ್ಷೇತ್ರ ಬಿಟ್ಟು ಕೇಂದ್ರಕ್ಕೆ ಹೋಗುವ ಅವಶ್ಯಕತೆ ಏನಿತ್ತು. ಕುಮಾರಸ್ವಾಮಿಗೆ ಅತಿ ಆಸೆ ಇದೆ. ಕೇಂದ್ರಕ್ಕೆ ಹೋದ್ರು ಕಣ್ಣೀರು ಹಾಕಿ ಮತ್ತೆ ನಿಖಿಲ್ ಕರೆದುಕೊಂಡು ಬಂದರು. ಹೀಗಾಗ ಜನ ಒಪ್ಪಲಿಲ್ಲ' ಎಂದಿದ್ದಾರೆ.

'ಸ್ವಾರ್ಥ ಇತ್ತು ಹೀಗಾಗಿ ವರ್ಕೌಟ್ ಆಗಿಲ್ಲ' ಸಿಪಿ ಯೋಗೇಶ್ವರ್
ಮೈತ್ರಿ ಪಕ್ಷದಲ್ಲಿ ಸ್ವಾರ್ಥ ಇತ್ತು. ಜನ ಅವರ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ಚನ್ನಪಟ್ಟಣದಲ್ಲಿ ವರ್ಕೌಟ್ ಆಗಿಲ್ಲ. ಯಡಿಯೂರಪ್ಪ ತನ್ನ ಮಗ ಮತ್ತು ಕುಮಾರಸ್ವಾಮಿ ತನ್ನ ಮಗನನ್ನು ಬೆಳೆಸಬೇಕು ಅಂತ ಹೋರಾಡುತ್ತಿದ್ದರು. ಇವರ ಷಡ್ಯಂತ್ರದಿಂದ ನಾನು ಎನ್‌ಡಿಎ ಪಕ್ಷದಿಂದ ಹೊರ ಬರಬೇಕಾಯಿತು. ಆದರೆ ಕ್ಷೇತ್ರದ ಜನ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಕೈ ಬಿಡಲಿಲ್ಲ ಎಂದು ಸಿಪಿ ಯೋಗೇಶ್ವರ್ ಹೇಳಿದರು.
'ನಿಖಿಲ್ ಮಾತು ಹಿಡಿತದಲ್ಲಿ ಇರಬೇಕು'
ಬಿಜೆಪಿ ಹಾಗೂ ಜೆಡಿಎಸ್ ಕುಟುಂಬದ ಹೋರಾಟವನ್ನು ರಾಜ್ಯದ ಜನ ಅಂತ್ಯ ಗೊಳಿಸಿದ್ದಾರೆ. ನಿಖಿಲ್ ತುಂಬಾ ಸಣ್ಣ ಹುಡುಗ, ಅವರ ಮಾತು ಹಿಡಿತದಲ್ಲಿ ಇರಬೇಕು. ಅವರಿಗೆ ಒಳ್ಳೆದಾಗಲಿ. ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಜನ ತೀರ್ಪು ನೀಡಿದ್ದಾರೆ. ಜನ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಿದ್ದಾರೆ ಎಂದರು.
ಫಲಿತಾಂಶಕ್ಕೂ ಮುನ್ನ ಗೆಲುವಿನ ಬಗ್ಗೆ ಸಂಶಯ ಬರಲು ಇದೇ ಕಾರಣ...!
ಫಲಿತಾಂಶಕ್ಕೂ ಮುನ್ನ ಗೆಲುವಿನ ಬಗ್ಗೆ ಸಂಶಯ ಉಂಟಾಗಲು ಕಾರಣ ಇದೆ ಎಂದ ಸಿಪಿ ಯೋಗೇಶ್ವರ್, 'ಪದೇ ಪದೇ ದೇವೇಗೌಡರು ದೈತ್ಯ ಶಕ್ತಿ ಅಂತ ನಾನು ಹೇಳಿದ್ದೆ. ಆದರೆ ದೇವೇಗೌಡ ಅವರಿಗೆ ವಯಸ್ಸಾಗಿದೆ. ಅವರಿಗೆ ಈಗ ರಾಜಕಾರಣ ಮಾಡುವಷ್ಟು ಶಕ್ತಿ ಇಲ್ಲ. ಅವರು ಚುನಾವಣಾ ಅಖಾಡಕ್ಕೆ ಇಳಿದಾಗ, ನಿಖಿಲ್ ಹಾಗೂ ಕುಮಾರಸ್ವಾಮಿ ಕಣ್ಣೀರು ನನಗೆ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸುವಂತೆ ಮಾಡಿತ್ತು. ಆದರೆ ದೇವೇಗೌಡರು ರಾಜಕೀಯ ಮಾಡುವ ಬದಲು ವಿಶ್ರಾಂತಿ ಪಡೆಯಬೇಕು ಎಂದು ಸಿಪಿವೈ ಹೇಳಿದರು.
ಸರ್ಕಾರದ ಯೋಜನೆಗಳಿಗೆ ಮಣೆ..
ಇನ್ನೂ ಮುಂದುವರೆದು ಮಾತನಾಡಿದ ಸಿಪಿವೈ, ಸಂಕಷ್ಟ ಸಮಯದಲ್ಲಿ ಬಿಜೆಪಿ ಬರಲಿಲ್ಲ. ಯಡಿಯೂರಪ್ಪ ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದಾರೆ. ಆದರೆ ಗೆಲುವು ನಮ್ಮದಾಗಿದೆ. ಸರ್ಕಾರದ ಯೋಜನೆಗಳನ್ನು ಒಪ್ಪಿ ಜನ ಬೆಂಬಲ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಅವರು ಚುನಾವಣೆಯುದ್ದಕ್ಕೂ ನನ್ನೊಂದಿಗೆ ಇದ್ದರು. ಇದರಿಂದ ನನಗೆ ಸಹಾಯವಾಗಿದೆ ಎಂದು ಸಿಪಿ ಯೋಗೇಶ್ವರ್ ಗೆಲುವಿನ ಬಳಿಕೆ ಹೇಳಿದರು.












Click it and Unblock the Notifications