ರಾಮನಗರ: ಈಗಲ್ ಟನ್ ಗಾಲ್ಫ್ ರೆಸಾರ್ಟ್ ವಿಲ್ಲಾದಲ್ಲಿ ಚೆನ್ನೈ ಮೂಲದ ದಂಪತಿಗಳ ಹತ್ಯೆ
ರಾಮನಗರ, ಫೆಬ್ರವರಿ 08: ನಿವೃತ್ತ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿಡದಿ ಬಳಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್‌ನ ಖಾಸಗಿ ವಿಲ್ಲಾದಲ್ಲಿ ನಡದಿದೆ. ಜಿಲ್ಲೆಯ ಬಿಡದಿ ಬಳಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಆವರಣದ C21 ನಂ ವಿಲ್ಲಾದಲ್ಲಿ ವಾಸವಾಗಿದ್ದ ಚನ್ನೈ ಮೂಲದ ಆಶಾ (63), ರಘುರಾಜ್ (70) ದಂಪತಿಗಳನ್ನು ಕಿರಾತಕರು ಹತ್ಯೆ ಮಾಡಿದ್ದಾರೆ.
ಹತ್ಯೆಗೀಡಾದ ರಘುರಾಜ್ ಏರ್ ಫೋರ್ಸ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದು, ನಿವೃತ್ತಿಯ ನಂತರ ಪತ್ನಿಯೊಂದಿಗೆ ಈಗಲ್ ಟನ್ ಗಾಲ್ಫ್ ರೆಸಾರ್ಟ್ ವಿಲ್ಲಾದಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದರು. ಹಂತಕರು ದಂಪತಿಗಳನ್ನು ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಹತ್ಯೆ ಮಾಡಿದ್ದಾರೆ.
ಗಂಡ ಮತ್ತು ಹೆಂಡತಿಯನ್ನು ಬೇರೆ ಬೇರೆ ಕೊಣೆಯಲ್ಲಿ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಲಾಗಿದ್ದು, ವೃದ್ಧ ದಂಪತಿಗಳನ್ನು ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೃತರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಕಾಣೆಯಾಗಿದ್ದು ಆತನೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನೂ ಪ್ರಕರಣ ಬಿಡದಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ, ಸ್ಥಳಕ್ಕೆ ರಾಮನಗರ ಎಸ್ಪಿ ಸಂತೋಷ್ ಬಾಬು ಹಾಗೂ ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗನ ಪೋನ್ ಕಾಲ್ ನಿಂದ ಪ್ರಕರಣ ಬೆಳಕಿಗೆ
ಕೊಲೆಯಾದ ದಂಪತಿಗಳ ಮನೆಯಲ್ಲಿ ಬೆಕ್ಕು ಮತ್ತು ನಾಯಿ ನೋಡಿಕೊಳ್ಳಲು ಬಿಹಾರ ಮೂಲದ ವ್ಯಕ್ತಿ ಪ್ರತಿದಿನ ಬಂದು ಹೋಗುತ್ತಿದ್ದ. ರಘುರಾಜ್ ಅವರ ಮಗ ಕಳೆದರಾತ್ರಿಯಿಂದ ತನ್ನ ತಂದೆಗೆ ಪೋನ್ ಮಾಡಿದ್ದಾನೆ ಆದರೆ ತಂದೆ ಪೋನ್ ಪಿಕ್ ಮಾಡದ ಹಿನ್ನಲೆಯಲ್ಲಿ ಮನೆಯ ಸೆಕ್ಯುರಿಟಿ ಗಾರ್ಡ್ ಗೆ ಪೋನ್ ಮಾಡಿ ನೋಡುವಂತೆ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯ ಈಗಲ್ ರೆಸಾರ್ಟ್‌ನ 'ಸಿ' ಬ್ಲಾಕ್ನಲ್ಲಿ ಜೋಡಿ ಕೊಲೆ.
— oneindiakannada (@OneindiaKannada) February 8, 2022
ಆಶಾ (63), ರಘುರಾಜ್ (70) ಮೃತ ದಂಪತಿಗಳು. ರಘುರಾಜ್ ಭಾರತೀಯ ವಾಯುಪಡೆಯ ಮಾಜಿ ಪೈಲೆಟ್.#Ramanagara #Bidadi #KannadaNews pic.twitter.com/Q4FjTZWP4b
ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಮನೆ ಹತ್ತಿರ ಹೋಗಿ ವಿಚಾರಣೆ ಮಾಡಿದ್ದಾಗ ನಾಯಿ, ಬೆಕ್ಕು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅವರು ಬೆಳಗ್ಗೆಯೇ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೋದರು ಎಂದು ಹೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್‌ಗಳು ರಘುರಾಜನ್ ಅವರ ಮಗನಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ.
ಅನುಮಾನಗೊಂಡ ರಘುರಾಜನ್ ರವರ ಮಗ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ನೀವು ಮನೆ ಒಳಗೆ ಹೋಗಿ ನೋಡಿ ಎಂದು ತಿಳಿಸಿದ್ದಾರೆ. ನಂತರ ಸೆಕ್ಯುರಿಟಿ ಗಾರ್ಡ್ ಗಳು ಬಲವಂತವಾಗಿ ಮನೆ ಒಳಗೆ ಪ್ರವೇಶಮಾಡಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ . ಕೂಡಲೇ ಸೆಕ್ಯುರಿಟಿ ಗಾರ್ಡ್ ಗಳು ಮನೆ ಕೆಲಸದವನನ್ನು ಕೂಡಿ ಹಾಕಿ ಮನೆ ಹೊರಗಿನಿಂದ ಬೀಗ ಹಾಕಿದ್ದಾರೆ. ಶಂಕಿತ ಆರೋಪಿ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಎಸ್ಪಿ ಸಂತೋಷ ಬಾಬು ಪ್ರತಿಕ್ರಿಯೆ
ಈಗಲ್ ಟನ್ ಗಾಲ್ಫ್ ರೆಸಾರ್ಟ್ ಆವರಣದ C21 ನಂ ವಿಲ್ಲಾದಲ್ಲಿ ವಾಸವಾಗಿದ್ದ ಆಶಾ,ರಘುರಾಜ್ ದಂಪತಿಗಳ ಹತ್ಯೆಯಾಗಿದೆ. ಮೇಲಿನ ರೂಂ ನಲ್ಲಿ ರಘುರಾಜನ್ ಕೊಲೆಯಾಗಿದ್ದರೆ, ಕೆಳಗಿನ ರೂಂ ನಲ್ಲಿ ಆಶಾ ಅವರ ಕೊಲೆಯಾಗಿದೆ ದಂಪತಿಗಳಿಬ್ಬರನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಶ್ವಾನದಳದಿಂದ ಪರಿಶೀಲನೆ ನಡೆಸಿದ್ದೇವೆ.
ಕೊಲೆಯಾದ ದಂಪತಿಗಳ ಮಗ ಮತ್ತು ಮಗಳು ಇಬ್ಬರು ದೆಹಲಿಯಲ್ಲಿ ವಾಸವಾಗಿದ್ದು, ಮಗ ಪೋನ್ ಮಾಡಿದಾಗ ರಘುರಾಜನ್ ಪೋನ್ ಪಿಕ್ ಮಾಡಿಲ್ಲ ಹಾಗಾಗಿ ಸೆಕ್ಯುರಿಟಿ ಗಾರ್ಡ್ ಗಳಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರ ಮನೆಯಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ ಈ ನಿಟ್ಟಿನಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ಎಸ್ಪಿ ಸಂತೋಷ ಬಾಬು ತಿಳಿಸಿದರು.












Click it and Unblock the Notifications