ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ- ಶಾಸಕ ಹೆಚ್.ಸಿ.ಬಾಲಕೃಷ್ಣ
ರಾಮನಗರ, ಅಕ್ಟೋಬರ್ 29: ಮಂತ್ರಿಗಿರಿಯಿಂದ ವಂಚಿತರಾದ ಶಾಸಕರಿಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಶಾಸಕರ ಅತೃಪ್ತಿ ತಣಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಮುಂದಾಗಿದ್ದು , ಈಗಾಗಲೇ ಪ್ರಭಾವಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ಲಾಭಿ ಪ್ರಾರಂಭಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಬಿಡಿಎ ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅದರಲ್ಲೂ ಎ.ಗ್ರೇಡ್ ನಿಗಮ ಸ್ಥಾನ ಕೊಟ್ಟರ ಮಾತ್ರ ಪಡೆಯುತ್ತೇನೆ ಎನ್ನುವ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಹೆಚ್.ಸಿ.ಬಾಲಕೃಷ್ಣ, ಸರ್ಕಾರ ರಾಜ್ಯದ ಹಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ. ಸರ್ಕಾರ ಈಗಾಗಲೇ ನಿಗಮ ಮಂಡಳಿ ಹಂಚಿಕೆಯನ್ನು ಎ.ಬಿ.ಸಿ ಗ್ರೇಡ್‌ನಲ್ಲಿ ವಿಂಗಡನೆ ಮಾಡಿದೆ ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ನಿಗಮ ಮಂಡಳಿಯಲ್ಲಿ ಎಬಿಸಿ ಅಂತಾ ಇದೆ. ಎ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಎಬಿಸಿ ಯಾವುದು ಅಂತಾ ಸರ್ಕಾರದಲ್ಲಿ ಗೊತ್ತಿದೆ ಎಂದು ಪರೋಕ್ಷವಾಗಿ ನಾನು ಪ್ರಭಾವಿ ನಿಗಮ ಮಂಡಳಿ ಆಕಾಂಕ್ಷಿ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ ಮಾಧ್ಯಮಗಳ ಮೂಲಕ ಶಾಸಕ ಹೆಚ್.ಸಿ.ಬಾಲಕೃಷ್ಣ ರವಾನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ
ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾತ್ರ ಅಲ್ಲ ನಮ್ಮ ಪ್ರಧಾನಿ ಅಭ್ಯರ್ಥಿ ಕೂಡ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ಪ್ರಧಾನಿ ಮಾಡುತ್ತೇವೆ ಎಂದರು.

ಪರಮೇಶ್ವರ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ಹಿರಿಯ ಸಚಿವರು ಊಟಕ್ಕೆ ಆಹ್ವಾನ ಮಾಡಿದ್ದರು ಹಾಗಾಗಿ ಸಿದ್ದರಾಮಯ್ಯ ಅವರು ಊಟಕ್ಕೆ ಹೋಗಿ ಅವರ ಯೋಗ ಕ್ಷೇಮ ವಿಚಾರಿಸುವ ದೊಡ್ಡತನ ಪ್ರದರ್ಶನ ಮಾಡಿದ್ದಾರೆ. ಅವರು ಹೋದಾಗ ಸರ್ಕಾರದ ಬಗ್ಗೆ ಹಾಗೂ ಕೆಲ ವಿಚಾರಗಳ ಬಗ್ಗೆ ಚರ್ಚೆ ಆಗಿರಬಹುದು ಎಂದರು.
ಸೀತೆಯಂತೆ ಕುಮಾರಸ್ವಾಮಿ ಪ್ರಮಾಣ ಮಾಡಲಿ
ಇನ್ನು ಆಣೆ ಪ್ರಮಾಣಕ್ಕೆ ನಾನು ಸಿದ್ಧ ಅವರ ನಾಯಕರನ್ನು ತರೆತರಲಿ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ವಾಲ್ಮೀಕಿ ರಾಮಯಾಣದಲ್ಲಿ ಸೀತೆ ತನ್ನ ನಾನು ಪತಿವೃತೆ ಎಂದು ಅಗ್ನಿ ಪ್ರವೇಶ ಮಾಡಿ ಸಾಬೀತು ಮಾಡಿಲ್ಲವೇ, ಅದೇ ರೀತಿ ಮಾಜಿ ಕುಮಾರಸ್ವಾಮಿ ನಾನು ವರ್ಗಾವಣೆ ಸೇರಿದಂತೆ ಯಾವುದೇ ದುಡ್ಡು ತಿಂದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಹಾಗೂ ನಮ್ಮ ನಾಯಕರನ್ನು ನೋಡುವುದು ಕಳ್ಳರ ರೀತಿ. ಹಾಗಾಗಿ ನಾವು ಕಳ್ಳರು ನೀವು ಯಾವುದೇ ತಪ್ಪು ಮಾಡಿಲ್ಲ, ಯಾವುದೇ ಹಣ ತಿಂದಿಲ್ಲ ಎಂದು ನೀವು ಸಹ ಸೀತೆಯಂತೆ ಪರೀಕ್ಷೆಗೆ ತನ್ನನು ಒಡ್ಡಿಕೊಂಡ ಹಾಗೆ ಧರ್ಮಸ್ಥಳದಲ್ಲಿ ಆಣೆ ಮಾಡಿ. ಒಂದು ವೇಳೆ ಅವರು ಅಣೆ ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ಶಾಸಕ ಹೆಚ್.ಸಿ.ಬಾಲಕೃಷ್ಣ ಸವಾಲು ಹಾಕಿದರು.












Click it and Unblock the Notifications