ದೇವೇಗೌಡ್ರು ಅಧಿಕಾರವಿದ್ದಾಗ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ನೀಡ್ಬಹುದಿತ್ತಲ್ಲಾ?-ಎಚ್‌ಸಿ ಬಾಲಕೃಷ್ಣ

ರಾಮನಗರ, ಸೆಪ್ಟೆಂಬರ್‌ 27: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವ ಬಗ್ಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ವಿಚಾರದಲ್ಲಿ ಕಿಡಿಕಾರಿದ್ದಾರೆ.

ದೇವೇಗೌಡ್ರು ಒಂದು ವರ್ಷ ಈ ದೇಶದ ಪ್ರಧಾನಿ ಆಗಿದ್ರಲ್ಲ..? ಅದಕ್ಕಿಂತ ಉನ್ನತವಾದ ಹುದ್ದೆ ಯಾವುದೂ ಇಲ್ಲವಲ್ಲ..? ದೇವೇಗೌಡ್ರು ಪ್ರಧಾನಿ ಆಗಿದ್ದಾಗ 5 ನಿಮಿಷ ಯೋಚನೆ ಮಾಡಿದ್ದರೆ ಕಾವೇರಿ ವಿವಾದದಕ್ಕೆ ಒಂದು ಶಾಶ್ವತ ಪರಿಹಾರ ನೀಡಬಹುದಿತ್ತಲ್ಲ‌ ಎಂದರು.

Magadi MLA HC Balakrishna Reaction about Cauvery Dispute

ಪ್ರಧಾನಿ ಆಗಿದ್ದಾಗ ಮಾಡಿದ್ದರೆ ಯಾರು ಅಡ್ಡಬಂದಿದ್ದರು‌. ಬಿಜೆಪಿಯವರು, ಕಾಂಗ್ರೆಸ್‌ನವರು ಏನಾದರೂ ಅಡ್ಡ ಬಂದಿದ್ರಾ..? ಅಧಿಕಾರಿ ಇದ್ದಾಗ ಚಲಾಯಿಸುವುದುನ್ನು ಬಿಟ್ಟು ಈಗ ನೀರಿನ ವಿಚಾರ ಇಟ್ಕೊಂಡು ರಾಜಕೀಯ ಮಾಡೋದು ಎಷ್ಟು ಸಮಂಜಸ ಎಂದು ಜೆಡಿಎಸ್‌ ವರಿಷ್ಠರಾದ ದೇವೇಗೌಡರನ್ನು ಪ್ರಶ್ನಿಸಿದರು.

ನೀರಿಗಾಗಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ನೀರಾವರಿ ಪ್ರಾಧಿಕಾರ ಬಿಜೆಪಿ ಅವರ ಕಂಟ್ರೋಲ್‌ನಲ್ಲೇ ಇದೆ. ಇವರು ಈಗ ಮಂಡ್ಯದಲ್ಕಿ ಚಡ್ಡಿ ಮರೆವಣಿಗೆ ಮಾಡಲು ಹೊರಟಿದ್ದಾರೆ. ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಎಂದು ಹೇಳಿದ್ದಾರೆ.

ಪಾರ್ಲಿಮೆಂಟ್‌ನಲ್ಲಿ ನರೇಂದ್ರ ಮೋದಿ ಮುಂದೆ ಚಡ್ಡಿ ಮರೆವಣಿಗೆ ಮಾಡಬೇಕಿತ್ತು. ಮಂಡ್ಯದಲ್ಲಿ ಚಡ್ಡಿ ಮೆರವಣಿಗೆ ಮಾಡಿದ್ರೆ ಪ್ರಯೋಜನ ಏನು..? ಬಿಜೆಪಿಯವರು ಅಲ್ಲಿ ಹೇಳಿ ನೀರು ನಿಲ್ಲಿಸಿದರೆ ಒಳ್ಳೆಯದು. ನೀವು ಚಡ್ಡಿ ಮೆರವಣಿಗೆ ಮಾಡೊದಿದ್ದರೆ ನರೇಂದ್ರ ಮೋದಿ ಮುಂದೆ ಮಾಡಿ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

Magadi MLA HC Balakrishna Reaction about Cauvery Dispute

ರಾಜ್ಯದಿಂದ ಗೆದ್ದ ಬಿಜೆಪಿ ಸಂಸದರು ಏನು ಗೆಣಸು ಕೀಳುತ್ತಿದ್ದರಾ? ನರೇಂದ್ರ ಮೋದಿ ಹತ್ತಿರ ಹೋಗಿ ಇವರು ಮನವಿ ಮಾಡಬೇಕು. ಮುಂದೆ ಕಾಂಗ್ರೆಸ್‌ನವರು ಬಿಜೆಪಿ ಸಂಸದರ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್‌.ಸಿ ಬಾಲಕೃಷ್ಣ ಎಚ್ಚರಿಕೆ ನೀಡಿದರು.

ನೀವು ನರೇಂದ್ರ ಮೋದಿ ಮುಂದೆ ಮಾತಾಡಬೇಕು. ಆದರೆ ಅವರಿಗೆ ಧೈರ್ಯನೇ ಇಲ್ಲ. ಇಲ್ಲಿ ಬಂದು ನಳೀನ್ ಕುಮಾರ್ ಕಟೀಲ್ ಅವರು ಇವರು ಎಲ್ಲಾ ಬೊಗಳುತ್ತಾರೆ. ಇವರೆಲ್ಲಾ ಹೋಗಿ ಪ್ರಧಾನಿ ಮೋದಿ ಮುಂದೆ ಹೋರಾಟ ಮಾಡಲಿ. ಒಂದು ಕಡೆ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಲಿಲ್ಲ. ಇನ್ನೊಂದು ಕಡೆ ಬಿಜೆಪಿಯವರು ಏನು ಮಾಡಲಿಲ್ಲ. ಜನ ದಡ್ಡರಲ್ಲ, ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್‌ ಶಾಸಕ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+