ಕುಖ್ಯಾತ ರೌಡಿಗೆ ಗುಂಡು ಹಾರಿಸಿದ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್
ರಾಮನಗರ, ಮಾರ್ಚ್ 15: ಕುದೂರು ಠಾಣೆ ಪೊಲೀಸ್ ಪೇದೆ ವೀರಭದ್ರ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ ವೇಳೆ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಕುಖ್ಯಾತ ರೌಡಿ ಕಿರಣ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.
20 ದಿನಗಳ ಕೆಳಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿ ಲೋಕನಾಥ್ ಎಂಬುವವರ ಮನೆಯಲ್ಲಿ ಕಿರಣ್ ಅಲಿಯಾಸ್ ತಮಾಣೆ ಡಕಾಯಿತಿ ಮಾಡಿದ್ದನು.

13 ಜನರು ಲೋಕನಾಥ್ ಎಂಬುವವರ ಮನೆಯಲ್ಲಿ ಡಕಾಯಿತಿ ಮಾಡಿದ್ದು, ಡಕಾಯಿತಿ ಪ್ರಕರಣ ಸಂಬಂಧ ತನಿಖೆಗೆ ಬಂದಿದ್ದ ಕಿರಣ್ ಬಂಧನವಾಗಿತ್ತು. ತನಿಖೆಗೆ ಕರೆದುಕೊಂಡು ಹೋಗುವಾಗ ಕುದೂರು ಠಾಣೆ ಪೊಲೀಸ್ ಪೇದೆ ವೀರಭದ್ರ ಮೇಲೆ ಹಲ್ಲೆ ಮಾಡಿದ್ದನು. ಆಗ ಸಿಪಿಐ ಮಂಜುನಾಥ್ ಬೆಂಗಳೂರು ಹೊರವಲಯದ ಕೆಂಗೇರಿ ಸಮೀಪದ ಸೂಲಿಕೆರೆ ಅರಣ್ಯದ ಬಳಿ ಬೆಳಿಗ್ಗೆ 7 ಗಂಟೆಗೆ ಫೈರಿಂಗ್ ಮಾಡಿದ್ದಾರೆ.

2016 ರಲ್ಲಿ ಕೆಂಗೇರಿಯ ಮಾರ ಹನುಮ ಅಲಿಯಾಸ್ ಚಿಚಿ ಎಂಬಾತನನ್ನು ಕಿರಣ್ ಮರ್ಡರ್ ಮಾಡಿದ್ದನು. ಕಿರಣ್ ಮೇಲೆ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಪ್ರಕರಣಗಳು ಇವೆ.












Click it and Unblock the Notifications