ಜಮೀನು ವಿವಾದದಲ್ಲಿ ಸಂಬಂಧಿಯಿಂದಲೇ ಗುಂಡೇಟು; ಆಸ್ಪತ್ರೆಗೆ ದಾಖಲು
ರಾಮನಗರ, ಆಗಸ್ಟ್ 4: ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಗುಂಡೇಟು ಬಿದ್ದ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆ ಸಮೀಪದ ದೊಡ್ಡೇರಿ ಕಾಲೋನಿಯಲ್ಲಿ ಭಾನುವಾರ ನಡೆದಿದೆ. ಕುಮಾರನಾಯ್ಕ್ ಎಂಬುವವರಿಗೆ ಸಂಬಂಧಿ ಚಂದ್ರನಾಯ್ಕ್ ನಿಂದ ಗುಂಡೇಟು ಬಿದ್ದಿದೆ.
ಡಬಲ್ ಬ್ಯಾರೆಲ್ ಬಂದೂಕಿನಿಂದ ವ್ಯಕ್ತಿಗೆ ಗುಂಡು ಬಿದ್ದಿದೆ. ಜಮೀನಿನ ಬಳಿ ಗುಂಡು ಹಾರಿಸಿ ಹತ್ಯೆಗೆ ಯತ್ನ ನಡೆದಿದೆ. ಕುಮಾರನಾಯ್ಕ್ ತೊಡೆಗೆ ಗುಂಡೇಟು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜರಾಜೇಶ್ವರಿ ಆಸ್ಪತ್ರೆಗೆ ಕುಮಾರನಾಯ್ಕ್ ಅವರನ್ನು ರವಾನೆ ಮಾಡಲಾಗಿದೆ. ಗುಂಡು ಹಾರಿಸಿದ ಚಂದ್ರನಾಯ್ಕ್ ಪರಾರಿ ಆಗಿದ್ದಾನೆ.

ಕುಮಾರನಾಯ್ಕ್ ನ ಹತ್ಯೆ ಮಾಡಲು ಯತ್ನಿಸಿದಾಗ ಕುಮಾರನಾಯ್ಕ್ ನ ಸಂಬಂಧಿಕರು ಚಂದ್ರನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಂದಹಾಗೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.












Click it and Unblock the Notifications