Get Updates
Get notified of breaking news, exclusive insights, and must-see stories!

Assembly election 2023: ರಾಜಕೀಯ ಕುರುಕ್ಷೇತ್ರದಲ್ಲಿ ಕುಮಾರಸ್ವಾಮಿಯವರದ್ದು ಅರ್ಜುನನ ಪಾತ್ರವಿರಬೇಕು: ಅನಿತಾ ಕುಮಾರಸ್ವಾಮಿ

ರಾಜಕೀಯ ಕುರುಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರದ್ದು ಅರ್ಜುನನ ಪಾತ್ರವಿರಬೇಕು ಎಂದು ಅನಿತಾ ಕುಮಾರಸ್ವಾಮಿ ಹೇಳಿರುವುದರ ಉದ್ದೇಶ ಏನು ಅನ್ನುವುದನ್ನು ಇಲ್ಲಿ ನೀಡಲಾಗಿದೆ.

ರಾಮನಗರ, ಜನವರಿ, 31: ರಾಜಣಕಾರಣಕ್ಕೂ ಕುರುಕ್ಷೇತ್ರ ನಾಟಕಕ್ಕೂ ಬಹಳ ಹೋಲಿಕೆ ಇದೆ. ರಾಜಕೀಯ ಕುರುಕ್ಷೇತ್ರದಲ್ಲಿ ನಿಮ್ಮ ಮನೆ ಮಗ ಕುಮಾರಸ್ವಾಮಿ ಅವರದ್ದು ಯಾವ ಪಾತ್ರವೋ ನನಗೆ ಗೊತ್ತಿಲ್ಲ. ಬಹುಶಃ ಅವರದ್ದು ಅರ್ಜುನನ ಪಾತ್ರವಿರಬಹುದು ಅಂದುಕೊಂಡಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಧರ್ಮಪತ್ನಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಅನಿತಾ ಕುಮಾರಸ್ವಾಮಿಯವರು ಹಾರೋಹಳ್ಳಿಯ ಎಸ್.ಬಿ.ಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕುರುಕ್ಷೇತ್ರ ನಾಟಕದ ಪಾತ್ರಗಳು, ರಾಜಕೀಯ ಕುರುಕ್ಷೇತ್ರದಲ್ಲೂ ನೋಡಲು ಎಲ್ಲಾ ಪಾತ್ರಗಳು ಸಿಗುತ್ತವೆ. ಕುರುಕ್ಷೇತ್ರ ನಾಟಕದಲ್ಲಿ ಬರುವ ಕೃಷ್ಣ, ಅರ್ಜುನ, ಕರ್ಣ, ಭೀಮ, ಧರ್ಮರಾಯ, ಶುಕುನಿ, ದುರ್ಯೋಧನ ಸೇರಿದಂತೆ ಎಲ್ಲಾ ಪಾತ್ರಗಳು ರಾಜಕೀಯ ರಂಗದಲ್ಲಿದೆ. ಇನ್ನೇನು ರಾಜಕೀಯದಲ್ಲೂ ಪ್ರಾರಂಭವಾಗಲಿದೆ. ಇದು ಕುರುಕ್ಷೇತ್ರವನ್ನು ಮೀರಿಸುವ ಯುದ್ಧವಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಾಣೆಗೆ ಹೊಲಿಕೆ ಮಾಡಿದರು.

 ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ

ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ

ಕಲಾಸ್ತರು ಕುರುಕ್ಷೇತ್ರ ಪೌರಾಣಿಕ ನಾಟಕ‌ ಅಭಿನಯಿಸುತ್ತಿರುವುದು ಸಂತಸ ತಂದಿದೆ. ಕುರುಕ್ಷೇತ್ರ ಜೀವನದಲ್ಲಿ ಜನರು ಅಳವಡಿಸಿಕೊಳ್ಳಬೇಕಾದ ಆದರ್ಶಗಳನ್ನು ಸಾರುವಂತಹ ಗಮನ ಸೆಳೆಯುವ ನಾಟಕವಾಗಿದೆ. ನಾಟಕದಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ‌ ಜನರಲ್ಲಿ ಅರಿವು ಮೂಡಿಸುವುದು ಸಂತದ ತಂದಿದೆ. ‌‌‌ಯಾವಾಗಲೂ ಧರ್ಮ ಗೆಲ್ಲಬೇಕು. ಹಾಗಾಗಿ ಕುರುಕ್ಷೇತ್ರದಲ್ಲಿ ಪಾಂಡವರ ಗೆಲುವು ಸಾಧ್ಯವಾಯಿತು. ಪಾಂಡವರು ಧರ್ಮದ ಪರವಾಗಿದ್ದರು. ಹಾಗಾಗಿ ಅವರಿಗೆ ಕೃಷ್ಣನ ಬೆಂಬಲ ಸಿಕ್ಕು ಜಯಗಳಿಸಿದರು. ದುರ್ಯೋಧನ ಧರ್ಮದ ವಿರುದ್ಧ ಇದ್ದ ಕಾರಣ ಕೃಷ್ಣನ ಬೆಂಬಲವಿಲ್ಲದೇ ಕುರುಕ್ಷೇತ್ರ ಯುದ್ಧದಲ್ಲಿ ಸೋಲು ಕಂಡನು ಎಂದರು.

 ಜನರಿಗೆ ಮನವಿ ಮಾಡಿದ ಶಾಸಕಿ

ಜನರಿಗೆ ಮನವಿ ಮಾಡಿದ ಶಾಸಕಿ

‌‌ಕುರುಕ್ಷೇತ್ರದಲ್ಲಿ ಧರ್ಮ ಗೆದ್ದಂತೆ, ಈಗಲೂ ಅಷ್ಟೇ ಧರ್ಮ ಗೆಲ್ಲಬೇಕಿದೆ. ಆಗ ಮಾತ್ರ ಬಡವರು ಗೆಲ್ಲುವುದಕ್ಕೆ ಆಗವುದು. ಶೋಷಿತ, ರೈತಾಪಿ ವರ್ಗದವರು ಗೆಲ್ಲಲು ಸಾಧ್ಯವಾಗುತ್ತದೆ. ಮುಂದೆ ನಡೆಯುವ ಯುದ್ಧದಲ್ಲಿ ನೀವುಗಳು ಧರ್ಮವನ್ನು ಗೆಲ್ಲಿಸುವ ನಂಬಿಕೆ ನನಗಿದೆ. ನಿಮ್ಮೆಲ್ಲರ ಆಶೀರ್ವಾದ ನಿಮ್ಮ ಮನೆ ಮಗ ಕುಮಾರಣ್ಣ ಅವರ ಮೇಲೆ ಇರಲಿ‌ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

 ಯಾತ್ರೆಗೆ ಉತ್ತಮ ಜನಬೆಂಬಲ ವ್ಯಕ್ತ

ಯಾತ್ರೆಗೆ ಉತ್ತಮ ಜನಬೆಂಬಲ ವ್ಯಕ್ತ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆತಿದೆ. ಹೋದಲೆಲ್ಲ ಯಾತ್ರೆಗೆ ಉತ್ತಮವಾಗಿ ಜನಬೆಂಬಲ ವ್ಯಕ್ತವಾಗುತ್ತಿದೆ. ಪಂಚರತ್ನ ಯೋಜನೆ ಜನಪರ ಯೋಜನೆಯಾಗಿದೆ. ಮಿಷನ್ 123 ಗುರಿಯಿಟ್ಟು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಹೊರಟಿದ್ದಾರೆ. ಅವರ ಗುರಿ ಖಂಡಿತವಾಗಿ ಈಡೇರುತ್ತದೆ. ಪಂಚರತ್ನ ರಥಯಾತ್ರೆಗೆ ದೊರೆಯುತ್ತಿರುವ ಯಶಸ್ಸು ಇದಕ್ಕೆ ಸಾಕ್ಷಿಯಾಗಿದೆ.

 ಜನರು ಜೆಡಿಎಸ್​ ಪಕ್ಷವನ್ನು ಬೆಂಬಲಿಸುತ್ತಾರೆ

ಜನರು ಜೆಡಿಎಸ್​ ಪಕ್ಷವನ್ನು ಬೆಂಬಲಿಸುತ್ತಾರೆ

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಜನರು ಈ ಬಾರಿ ತಿರಸ್ಕರಿಸುತ್ತಾರೆ. ಜೆಡಿಎಸ್​ ಪಕ್ಷವನ್ನು ಜನರು ಬೆಂಬಲಿಸುವ ವಿಶ್ವಾಸ ನನಗಿದೆ. ಇಲ್ಲಿಯೂ ಅಷ್ಟೇ ನೀವುಗಳು ಹಿಂದಿನಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದೀರಿ. ನಿಮ್ಮ ಆಶೀರ್ವಾದದಿಂದ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಈ ಬಾರಿಯೂ ನೀವು ನಮಗೆ ಆಶೀರ್ವದಿಸುವ ನಂಬಿಕೆಯಿದೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಭವಿಷ್ಯ ನುಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+