ಬೈಕ್‌ಗೆ ಸಾರಿಗೆ ಬಸ್‌ ಡಿಕ್ಕಿ: ಅಪ್ಪ-ಮಗ ಸಾವು, 30 ಜನರ ಪ್ರಾಣ ಕಾಪಾಡಿದ ಕೆರೆ ತಡೆಗೋಡೆ

ರಾಮನಗರ, ನವೆಂಬರ್‌ 13: ಬಸ್ ಸಾರಿಗೆ ಬಸ್‌ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೊಂಬೆನಾಡು ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (65) ಹಾಗೂ ಅವರ ಮಗ ಅರುಣ್ (28) ಮೃತ ದುರ್ದೈವಿಗಳು

ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ಗ್ರಾಮದ ಬಳಿಯ ರಾಮಮ್ಮನ ಕೆರೆ ಏರಿಯ ಮೇಲೆ ಸ್ಟೇರಿಂಗ್‌ ಕಟ್‌ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ಬೈಕ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತ ಸ್ಥಳಕ್ಕೆ ಚನ್ನಪಟ್ಟಣದ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ksrtc-bus-and-bike-accident

ಚನ್ನಪಟ್ಟಣ ಬಸ್ ನಿಲ್ದಾಣದಿಂದ ಭೈರನಾಯಕನಹಳ್ಳಿ ಗ್ರಾಮಕ್ಕೆ ತೆರಳುತಿದ್ದ ಕೆಎಸ್‌ಆರ್‌ಟಿಸಿ ಬಸ್ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ರಾಮಮ್ಮನಕೆರೆ ಏರಿಯ ಮೇಲೆ ಹೋಗುತ್ತಿದ್ದ ಸಮಯದಲ್ಲಿ ಸಾರಿಗೆ ಬಸ್ಸಿನ ಸ್ಟೇರಿಂಗ್‌ ರಾಡಿನ ಬೋಲ್ಟ್ ತುಂಡಾಗಿದೆ. ಅದಕ್ಕೆ ಅಳವಡಿಸಿದ ಪಿನ್ನು ಕಳಚಿ ಬಿದ್ದಿದ್ದರಿಂದ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಎಡಭಾಗದಲ್ಲಿ ಚಲಿಸುತ್ತಿದ್ದ ಬಸ್ಸು ಏಕಾಏಕಿ ಬಲ ಬದಿಗೆ ನುಗ್ಗಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಅಡ್ಡಾದಿಡ್ಡಿ ಚಲಿಸಿ ರಸ್ತೆಯ ಬಲ ಬದಿಯಲ್ಲಿ ಕೋಟಮಾರನಹಳ್ಳಿ ಗ್ರಾಮದಿಂದ ಚನ್ನಪಟ್ಟಣಕ್ಕೆ ಬರುತ್ತಿದ್ದ ಅಪ್ಪ ಮತ್ತು ಮಗನ ಮೇಲೆ ಹರಿದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಅಪ್ಪ ಸಿದ್ದಯ್ಯ ಮತ್ತು ಮಗ‌ ಅರುಣ್ ಇಬ್ಬರು ಮೃತಪಟ್ಟಿದ್ದಾರೆ. ಮೃತದೇಹ ಇರಿಸಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂದೆ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ksrtc-bus-and-bike-accident

30 ಪ್ರಯಾಣಿಕರ ಜೀವ ಉಳಿಸಿದ ರಸ್ತೆ ತಡೆಗೋಡೆ

ಅಪ್ಪ ಮತ್ತು ಮಗನ್ನು ಬಲಿ ಪಡೆದ ಸಾರಿಗೆ ಬಸ್‌ನಲ್ಲಿ 30 ಜನರು ಪ್ರಯಾಣ ಮಾಡುತ್ತಿದ್ದರರು. ಸ್ಟೇರಿಂಗ್‌ ಕಟ್‌ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ಸ್ಕೂಟರ್ ಡಿಕ್ಕಿ ಹೊಡೆದು ನಂತರ ಕರೆ‌ ಎರಿಯಲ್ಲಿ ಅಳವಡಿಸಿದ್ದ ಉಕ್ಕಿನ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ಕೆರೆ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಬಸ್ ಕೆರೆಗೆ ಬೀಳುವ ಸಂಭವ ಹೆಚ್ಚಾಗಿತ್ತು.

ರಾಜ್ಯದಲ್ಲಿ ತಡೆಗೋಡೆಯಿಲ್ಲದ ಕೆರೆಗಳಿಗೆ ಹಲವು ವಾಹನಗಳು ಬಿದ್ದು ಹಲವರು ಮೃತಪಟ್ಟ ಘಟನೆಗಳು ಸಂಭವಿಸಿದ ಹಿನ್ನಲೆಯಲ್ಲಿ ರಾಮಮ್ಮನ ಕೆರೆ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ಒಂದು ವರ್ಷದ ಹಿಂದೆ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿತ್ತು. ಕೆರೆ ಅಳವಡಿಸಿದ ಉಕ್ಕಿನ ತಡೆಗೋಡೆ ಇಂದು ನಡೆದ ಅಪಘಾತದಲ್ಲಿ 30 ಜನ ಪ್ರಯಾಣಿಕರ ಪ್ರಾಣ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+