DK Shivakumar assets: ಸಾವಿರಾರು ಕೋಟಿ ಒಡೆಯ ಕನಕಪುರ ಬಂಡೆ ಘೋಷಿಸಿಕೊಂಡ ಆಸ್ತಿಯಿಷ್ಟು!

ರಾಮನಗರ, ಏಪ್ರಿಲ್. 18: ಕನಕಪುರ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿಯ ವಿವರಗಳನ್ನು ಘೋಷಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಚರಾಸ್ತಿ, ಸ್ಥಿರಾಸ್ತಿ ಮೌಲ್ಯ ಒಟ್ಟು 1,214 ಕೋಟಿ ರೂಪಾಯಿಯಿದ್ದು. ತಾವು ಸಾವಿರಾರು ಕೋಟಿಯ ಒಡೆಯ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಮತ್ತು ಕುಟುಂಬಸ್ಥರ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಎಂಎ ಪದವೀಧರರಾಗಿ ಸಾವಿರ ಕೋಟಿ ಒಡೆಯರಾಗಿರುವ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಇರುವ ಚರಾಸ್ತಿ ಮತ್ತು ಸ್ಥಿರಾಸ್ತಿ, ಕುಟುಂಬದವರ ಹೆಸರಿನಲ್ಲಿರುವ ಆಸ್ತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka elections 2023: Check here KPCC President DK Shivakumar assets details

*ಡಿಕೆಶಿ ಕುಟುಂಬದ ಚರಾಸ್ತಿ*

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರಿನಲ್ಲಿ 244.93 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ , ಪತ್ನಿ ಉಷಾ ಹೆಸರಿನಲ್ಲಿ 20.30 ಕೋಟಿ ಮತ್ತು ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿ 12.99 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

*ಡಿಕೆಶಿ ಕುಟುಂಬದ ಸ್ಥಿರಾಸ್ತಿ*

ಡಿಕೆ ಶಿವಕುಮಾರ್ ಹೆಸರಿನಲ್ಲಿ 970 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಉಷಾ ಹೆಸರಿನಲ್ಲಿ 113.38 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಪುತ್ರ ಆಕಾಶ್ ಹೆಸರಿನಲ್ಲಿ 54.33 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ.

ಡಿಕೆ ಶಿವಕುಮಾರ್ ಹೆಸರಿನಲ್ಲಿ ಒಟ್ಟು ಸ್ಥಿರಾಸ್ತಿ, ಚರಾಸ್ತಿ ಮೌಲ್ಯ 1, 214 ಕೋಟಿ ರೂಪಾಯಿಯಿದ್ದು, ಪತ್ನಿ ಉಷಾ ಅವರ ಆಸ್ತಿ ಮೌಲ್ಯ 133 ಕೋಟಿ ರೂಪಾಯಿ, ಮಗ ಆಕಾಶ್ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ 66 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 61 ಕೋಟಿ ರೂಪಾಯಿ ಇದೆ. ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,414 ಕೋಟಿ ರೂಪಾಯಿಯಿದೆ.

Karnataka elections 2023: Check here KPCC President DK Shivakumar assets details

ಡಿಕೆ ಶಿವಕುಮಾರ್ ಹೆಸರಿನಲ್ಲಿ 226 ಕೋಟಿ ರೂಪಾಯಿ ಸಾಲ, ಪತ್ನಿ ಉಷಾ ಹೆಸರಿನಲ್ಲಿ 34 ಕೋಟಿ ರೂಪಾಯಿ ಸಾಲವಿದೆ. ಡಿಕೆ ಶಿವಕುಮಾರ್ 23 ಲಕ್ಷ ರೂಪಾಯಿ ಮೌಲ್ಯದ ಯೂಬ್ಲೇಟ್ ವಾಚ್, 9 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಹೊಂದಿದ್ದಾರೆ.

ಡಿಕೆಶಿ ಅವರ ಪತ್ನಿ ಹೆಸರಿನಲ್ಲಿ 2.600 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿಯಿದೆ. ಡಿಕೆ ಶಿವಕುಮಾರ್ ಅವರು 2.184 ಕೆ.ಜಿ ಚಿನ್ನ, 12.600 ಕೆಜಿ ಬೆಳ್ಳಿ, 1.066 ಕೆಜಿ ಚಿನ್ನಾಭರಣ, 324 ಗ್ರಾಂ ಡೈಮಂಡ್, 24 ಗ್ರಾಂ ರೂಬಿಗಳು, 195 ಗ್ರಾಂ ವಜ್ರ, 87 ಗ್ರಾಂ ರೂಬಿ ಹೊಂದಿದ್ದಾರೆ. ಮಗ ಆಕಾಶ್ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಕುಟುಂಬದ ಆಸ್ತಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ ಎಂದು ಘೋಷಿಸಿದ್ದಾರೆ.

2013ರಲ್ಲಿ ಕುಟುಂಬದ ಆಸ್ತಿ ಮೌಲ್ಯ 251 ಕೋಟಿಯಿದ್ದು, ಇದು 2018ರಲ್ಲಿ ಒಟ್ಟು ಕುಟುಂಬದ ಆಸ್ತಿ‌ಮೌಲ್ಯ 840 ಕೋಟಿಗೆ ಏರಿಕೆಯಾಗಿತ್ತು. ಸದ್ಯ 2023ರಲ್ಲಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,414 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಡಿಕೆ ಶಿವಕುಮಾರ್ ಅವರ ಕುಟುಂಬ ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಷೇರು, ಉದ್ದಿಮೆಗಳಿಂದ ಆದಾಯ ಹೊಂದಿದೆ.h

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+