ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆಗಿದ್ದು ಇಷ್ಟು, ಇಲ್ಲಿದೆ ವಿವರ
ರಾಮನಗರ, ಮೇ, 11: ಮೇ 10ರಂದು ವಿಧಾನಸಭೆ ಚುನಾವಣೆಯ ಮತದಾನ ನಡೆದಿದ್ದು, ಹಾಗಾದರೆ ರಾಮನಗರ ಜಿಲ್ಲೆಯ ಒಟ್ಟು 4 ವಿಧಾನಸಭೆ ಕ್ಷೇತ್ರಗಳಲ್ಲಿ ಎಷ್ಟು ಮತದಾನ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮತದಾರ ಅಭ್ಯರ್ಥಿಗಳ ಭವಿಷ್ಯವನ್ನು ಮತಪಟ್ಟಿಗೆಯಲ್ಲಿ ಭದ್ರ ಮಾಡಿದ್ದಾನೆ. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಜನಪದ ಲೋಕದ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಪೆಟ್ಟಿಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಕಳೆದ ದಿನ ನಡೆದ ಚುನಾವಣಯಲ್ಲಿ ಜಿಲ್ಲೆಯಲ್ಲಿ ಶೇಕಡಾ 85.04 ರಷ್ಟು ಮತದಾನ ನಡೆದಿದ್ದು, ಒಟ್ಟು 7,69,338 ಮತದಾರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇದರಲ್ಲಿ 3,82,580 ಪುರುಷ ಮತದಾರರು, 3,85,674 ಮಹಿಳಾ ಮತದಾರರು ಹಾಗೂ 21 ಇತರೆ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತಪೆಟ್ಟಿಗೆಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್ ಸುತ್ತಲು ಪ್ಯಾರಾಮಿಲಟರಿ ಪಡೆ ಜೊತೆಗೆ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಮೇ 13, ಶನಿವಾರದಂದು ಮತ ಏಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಎನ್ನುತ್ತಲೇ ಇರುತ್ತದೆ.
ಜಿಲ್ಲೆಯ 4 ಕ್ಷೇತ್ರಗಳ ಮತದಾನ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಾಗಡಿ ವಿಧಾನಸಭಾ ಕ್ಷೇತ್ರ
ಕ್ಷೇತ್ರದದಲ್ಲಿ ಒಟ್ಟು 2,33,358 ಜನ ಮತದಾರರಿದ್ದಾರೆ. ಇದರಲ್ಲಿ ಪುರುಷರು-1,00988, ಮಹಿಳೆಯರು-1,00117 ಜನ, ಮತ್ತು ಇತರೆ 6 ಜನ ಇದ್ದಾರೆ.
ಒಟ್ಟು 2,01,111 ಜನ ಮತದಾನ ಮಾಡಿದ್ದು, ಶೇಕಡವಾರು 86.18% ಜನ ಮತದಾನ ಮಾಡಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರ
ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ: 2,16,061
ಪುರುಷರು: 90416
ಮಹಿಳೆಯರು: 90210
ಇತರೆ: 6
ಒಟ್ಟು ಮತದಾನ: 1,81,695 (ಶೇಕಡಾ 84.89%)
ಕನಕಪುರ ವಿಧಾನಸಭಾ ಕ್ಷೇತ್ರ
ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ: 224956
ಪುರುಷರು: 95,015
ಮಹಿಳೆಯರು: 95,107
ಇತರೆ: 2
ಒಟ್ಟು ಮತದಾನ: 1,90,124 (ಶೇಕಡಾ 85.58%)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ: 2,30,327
ಪುರುಷರು: 96,161
ಮಹಿಳೆಯರು: 1,00240
ಇತರರ: 7
ಒಟ್ಟು ಮತದಾನ: 1,96,408 (ಶೇಕಡಾ 86.22%)












Click it and Unblock the Notifications