Kanakapura Constituency: ಸೋಲಿಲ್ಲದ ಸರದಾರನಿಗೆ ಎದುರಾಳಿಗಳೇ ಇಲ್ಲ.ಇಲ್ಲಿದೆ ವರದಿ

ಈ ಹಿಂದೆ ಪಿ ಜಿ ಆರ್ ಸಿಂದ್ಯಾ ಕೂಡ ಸತತ ಗೆಲ್ಲುವು ಪಡೆದಿದ್ದರು ಸಾತನೂರು ಕ್ಷೇತ್ರ ಹೋದ ನಂತರ ಕನಕಪುರಕ್ಕೆ ಬಂದ ಡಿಕೆ ಶಿವಕುಮಾರ್ ಇಲ್ಲಿ ತಮ್ಮ ಗೆಲ್ಲುವಿನ ನಾಗ ಲೋಟ ಮುಂದುವರೆಸಿದ್ದಾರೆ.

ರಾಮನಗರ,ಫೆಬ್ರವರಿ22: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕನಕಪುರ ವಿಧಾನ ಸಭಾ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ. ಅರ್ಕಾವತಿ ನದಿ ದಂಡೆಯಲ್ಲಿರುವ ಕರ್ನಾಟಕದ ರಾಮನಗರ ಜಿಲ್ಲೆಗೆ ಸೇರಿದ ಒಂದು ಪಟ್ಟಣ ಕನಕಪುರ ಈ ಹಿಂದ ಕನಾಕನಹಳ್ಳಿ ಅಂತ ಸಹ ಕರೆಯುತ್ತಿದ್ದರು. ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ತಾಲೂಕು 'ರೇಷ್ಮೆ ಕಣಿವೆ' ಎಂದೇ ಖ್ಯಾತಿಇದೆ. ಇಲ್ಲಿನ ಗ್ರಾನೈಟ್ ವಿದೇಶಗಳಲ್ಲಿ ಸಹ ಖ್ಯಾತಿ ಹೊಂದಿದೆ.

ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುತ್ತ ಬಂದಿದ್ದು, ಸತತವಾಗಿ ಗೆಲುವು ಪಡೆಯುತ್ತಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಮತ್ತೆಂದೂ ಸೋಲನ್ನ ಕಂಡಿಲ್ಲ. ಸದ್ಯಕ್ಕೆ ರಾಜಕೀಯವಾಗಿ ಡಿಕೆ ಶಿವಕುಮಾರ್ ಗೆ ಅಂಥ ಎದುರಾಳಿಗಳಿಲ್ಲ ಕ್ಷೇತ್ರದಲ್ಲಿ ಸಹೋದರ ಸುರೇಶ್ ಪ್ರಭಾವವೂ ಇರುವುದರಿಂದ ಜನರ ಒಲವು ಗಳಿಸುವುದು ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚು ಕಷ್ಟವಾಗುವುದಿಲ್ಲ.

Karnataka Assembly Elections 2023: Kanakapura Assembly Constituency Analysis

ಈ ಹಿಂದೆ ಪಿ ಜಿ ಆರ್ ಸಿಂದ್ಯಾ ಕೂಡ ಸತತ ಗೆಲ್ಲುವು ಪಡೆದಿದ್ದರು ಸಾತನೂರು ಕ್ಷೇತ್ರ ಹೋದ ನಂತರ ಕನಕಪುರಕ್ಕೆ ಬಂದ ಡಿಕೆ ಶಿವಕುಮಾರ್ ಇಲ್ಲಿ ತಮ್ಮ ಗೆಲ್ಲುವಿನ ನಾಗ ಲೋಟ ಮುಂದುವರೆಸಿದ್ದಾರೆ

ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರಿರುವ ಡಿ.ಕೆ.ಶಿವಕುಮಾರ್ ಸದ್ಯ ಕೆಪಿಸಿಸಿ ಅಧ್ಯಕ್ಷ ಕೂಡ ಆಗಿದ್ದಾರೆ ಸಿಎಂ ಅಭ್ಯರ್ಥಿ ಅಂತ ಬಿಂಬಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರಭಾವಿ ನಾಯಕರೆಂದು ಹೆಸರು ಮಾಡಿದ್ದ ಪಿ.ಜಿ.ಆರ್. ಸಿಂಧ್ಯಾ ರವರು ಈಗ ರಾಜಕೀಯ ದಿಂದ ಸ್ವಲ್ಪ ದೂರ ಆಗಿದ್ದಾರೆ ಈ ಹಿಂದೆ ರಾಮಕೃಷ್ಣ ಹೆಗಡೆ ಸಹ ಗೆದ್ದಿದ್ದರು. ಈ ಹಿಂದೆ ನಾಲ್ಕು ಬಾರಿ ಶಿವಕುಮಾರ್ ಅವರನ್ನು ಗೆಲ್ಲಿಸಿದ್ದ ಸಾತನೂರು ವಿಧಾನಸಭಾ ಕ್ಷೇತ್ರ, 2008 ರಲ್ಲಿ ಕ್ಷೇತ್ರ ಪುರ್ನವಿಂಗಡಣೆ ಆದಾಗ ಕನಕಪುರಕ್ಕೂ ಚನ್ನಪಟ್ಟಣಕ್ಕೂ ಸೇರಿತು.

Karnataka Assembly Elections 2023: Kanakapura Assembly Constituency Analysis

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ ಶಿವಕುಮಾರ್ ಎದುರಿಗೆ ಈಗ ಪ್ರಬಲ ಎದುರಾಳಿಗಳೇ ಇಲ್ಲ. ಬಿಜೆಪಿಗಂತೂ ಇಲ್ಲಿ ನೆಲೆಯೇ ಇಲ್ಲ.ಇನ್ನು ಈ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಸಹ ಪ್ರಬಲವಾದ ಹಿಡಿತ ಹೊಂದಿದ್ದಾರೆ ಅಣ್ಣಾ ಡಿಕೆ ಶಿವಕುಮಾರ್ ಗೆಲ್ಲುವಿನಲ್ಲಿ ಸಂಸದ ಸುರೇಶ ಅವರ ಪಾತ್ರ ಬಹಳ ಮುಖ್ಯವಾಗಿದೆ.

ಸದ್ಯಕ್ಕೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿಲ್ಲ ಆದ್ರೂ ಸ್ಥಳೀಯ ಮುಖಂಡ ಬಾಲ ನರಸಿಂಹ ಜೆಡಿಎಸ್ ಅಭ್ಯರ್ಥಿ ಅಂತ ಹೇಳ್ತಾಯಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಾರನ್ನ ಕಣಕ್ಕೆ ಇಳಿಸುತ್ತೆ ಕಾದು ನೋಡಬೇಕು ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕವಾಗಿದೆ.

Karnataka Assembly Elections 2023: Kanakapura Assembly Constituency Analysis

ಕ್ಷೇತ್ರಕ್ಕೆ ಕಾಲಿಡದ ಹೆಚ್ಡಿಕೆ, ಜೆಡಿಎಸ್ ಪರಿಸ್ಥಿತಿ ಶೋಚನೀಯ

ಡಿ.ಕೆ. ಶಿವಕುಮಾರ್ ಗೆಲ್ಲುವಿನ ಓಟಕ್ಕೆ ಏನಾದರೂ ತಡೆ ಹಾಕಬಹುದಾದ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ಆದರೂ ಕುಮಾರ ಸ್ವಾಮಿ ಈ ಕ್ಷೇತ್ರದ ವಿಚಾರದಲ್ಲಿ ತಲೆಹಾಕಿದ್ದು ಕಡಿಮೆಯೇ. ರಾಮನಗರ ಜಿಲ್ಲೆಯ ಮನೆ ಮಗ ಎಂದು ಹೇಳಿಕೊಳ್ಳುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ, ರಾಮನಗರ, ಮಾಗಡಿಯಲ್ಲಿ ಹಿಡಿತ ಹೊಂದಿದ್ದಾರೆ. ಆದರೆ ರಾಮನಗರ ಜಿಲ್ಲೆಯಲ್ಲೇ ಇರುವ ಕನಕಪುರ ಕ್ಷೇತ್ರದ ಕಡೆ ಮಾತ್ರ ತಲೆ ಹಾಕುವುದಿಲ್ಲ.

ಅಷ್ಟು ಮಾತ್ರವಲ್ಲದೆ ಚುನಾವಣೆ ಸಮಯದಲ್ಲಿ ಡಿ.ಕೆ ಶಿವಕುಮಾರ್‌ರವರಿಗೆ ಸಹಾಯ ಮಾಡಲು ಅವರ ಎದುರು 'ಡಮ್ಮಿ' ಅಭ್ಯರ್ಥಿ ಹಾಕುತ್ತಾರೆ ಎಂಬ ಆರೋಪವೂ ಅವರ ಮೇಲಿದೆ. ಇನ್ನೂ ಜೆಡಿಎಸ್ ನ ಹೆಚ್ಚಿನ ಕಾರ್ಯಕರ್ತರು ಕಾಂಗ್ರೆಸ್ ಕಡೆ ಹಾರಿದ್ದಾರೆ. ಒಂದಷ್ಟು ಗ್ರಾ.ಪಂ ಮತ್ತು ಜಿ.ಪಂನಲ್ಲಿ ಜೆಡಿಎಸ್ ಗೆಲ್ಲುತ್ತದೆ. ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲುವುದಿರಲಿ ಪೈಪೋಟಿ ಸಹ ನೀಡಲು ಆಗುವುದಿಲ್ಲ. ಹಾಗಾಗಿ ಜೆಡಿಎಸ್ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಹೇಳಲಾಗಿದೆ.

ಕ್ಷೇತ್ರದ ಅಂದಾಜು ಮತದಾರರು

ಒಟ್ಟು ಮತದಾರರು: 2,37,918

ಪುರುಷರು: 1,20,951

ಮಹಿಳೆಯರು: 1,16,967

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+