ರಾಮನಗರ: ಅಂಧ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ದಿಗಂತ್

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಡಿಸೆಂಬರ್ 28: ಸ್ಯಾಂಡಲ್ ವುಡ್ ನ ಗುಳಿಕೆನ್ನೆ ನಟ ದಿಗಂತ್ ಇಂದು (ಡಿ.28) ತಮ್ಮ 34ನೇ ಹುಟ್ಟು ಹಬ್ಬವನ್ನು ಅಂಧ ಮಕ್ಕಳೂಂದಿಗೆ ಆಚರಿಸಿಕೊಂಡರು.

ಡ್ರಗ್ಸ್ ಆರೋಪ ನಿರಾಕರಿಸಿದ ನಟ ದಿಗಂತ್

ರಾಮನಗರದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಜಿಎಸ್ ಶಾಲೆಯ ಅಂಧ ಮಕ್ಕಳು ಮತ್ತು ತಮ್ಮ ಅಪಾರ ಅಭಿಮಾನಿಗಳೊಂದಿಗೆ ದಿಗಂತ್ ಹುಟ್ಟುಹಬ್ಬ ಆಚರಣೆಮಾಡಿಕೊಂಡರು. ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ತಿನಿಸಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ದಿಗಂತ್ ಗೆ ಫಾರ್ಚುನರ್ ಚಿತ್ರತಂಡ ಸಾಥ್ ನೀಡಿತ್ತು.

Kannada actor Diganth celebrates his 34th birthday with blind children at Ramanagara

ಇದೇ ವೇಳೆ ಮಾತನಾಡಿದ ದಿಗಂತ್, "ಈ ಬಾರಿಯ ಹುಟ್ಟುಹಬ್ಬ ಅಂಧ ಮಕ್ಕಳ ಜೊತೆ ಆಚರಣೆ ಮಾಡಿದ್ದು ಖುಷಿ ತಂದಿದೆ. ನನಗೂ ಕೂಡ ಶೂಟಿಂಗ್ ವೇಳೆ ಕಣ್ಣಿಗೆ ಪೆಟ್ಟಾಗಿ ದೃಷ್ಟಿ ದೋಷವಿದೆ. ಹಾಗಾಗಿ ಎಲ್ಲರು ಕಣ್ಣು ದಾನ ಮಾಡಬೇಕು. ಕಣ್ಣಿನ ಮಹತ್ವದ ಬಗ್ಗೆ ನಾನು ಕೂಡ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಇದೇ ವೇಳೆ ದಿಗಂತ್ ಅಭಿನಯದ ಪಾರ್ಚುನರ್ ಚಿತ್ರದ ಒಂದು ನಿಮಿಷದ ಟ್ರೇಲರ್ ನನ್ನು ಬಿಡುಗಡೆ ಮಾಡಿತ್ತು. ಫಾರ್ಚುನರ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಮಾರ್ಚ್ ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ.

2018 ನನಗೆ ಲಕ್ಕಿ ಇಯರ್ ಎಂದು ಭಾವಿಸಿದ್ದೇನೆ. ಇನ್ನು 2018ಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಣದ " ಕಥೆಯೊಂದು ಶುರುವಾಗಿದೆ " ಎಂಬ ಚಿತ್ರದಲ್ಲಿ ನಟಿಸಲಿದ್ದೇನೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada actor Diganth celebrates his 34th birthday with visually challenged children in BGS blind school at Ramanagara on December 28th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ