ಶನಿವಾರ 10 ಗಂಟೆಯೊಳಗೆ ಬಿಗ್ ಬಾಸ್‌ನಿಂದ ಪ್ರಶಾಂತ್ ಸಂಬರಗಿ ಹೊರ ಹಾಕಲು ಗಡುವು

ರಾಮನಗರ, ನವೆಂಬರ್ 4: ಪದೇ ಪದೇ ಕನ್ನಡ ಪರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿಯನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲು ಒಂದು ದಿನದ ಗಡುವು ವಿಧಿಸಿರುವ ವಿವಿಧ ಕನ್ನಡ ಪರ ಹೋರಾಟಗಾರರು, ಇನ್ನೋವೇಟಿವ್ ಫಿಲ್ಮ್ ಸಿಟಿ ಸಿಟಿ ಮುಂದೆ ನಡೆಸುತ್ತಿರುವ ಆಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ಬೆಳಿಗ್ಗೆ 10 ಗಂಟೆ ಒಳಗೆ ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಕನ್ನಡ ವಿರೋಧಿ ಪ್ರಶಾಂತ್ ಸಂಬರಗಿಯನ್ನು ಹೋರ ಹಾಕಬೇಕು. ಒಂದು ವೇಳೆ ಶೋನಿಂದ ಹೊರಹಾಕದಿದ್ದರೆ ಕನ್ನಡ ಹೋರಾಟಗಾರರೇ ಚಿತ್ರೀಕರಣ ನಡೆಯುತ್ತಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಒಳಗೆ ನುಗ್ಗಿ ಬುದ್ಧಿ ಕಲಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಪ್ರತಿಭಟನೆ ಸ್ಥಳಕ್ಕೆ ಕಿಚ್ಚ ಸುದೀಪ್ ಬರಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದರು. ಅಲ್ಲದೇ ಪದೇ ಪದೇ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕನ್ನಡ ಹಾಗೂ ಕನ್ನಡ ಪರ ಹೋರಾಟಗಾರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಹೋರಾಟಗಾರರು ಕಾರ್ಯಕ್ರಮ ಮುಖ್ಯಸ್ಥರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

Kannada Activists Protest Demand for Eliminate Prashanth Sambaragi from Bigg Boss

ಘಟನೆ ಹಿನ್ನಲೆ?; ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ರಿಯಾಲಿಟಿ ಶೋನ ತುಣಕಿನಲ್ಲಿ ಪ್ರಶಾಂತ್ ಸಂಬರಗಿ ಆರ್ಯವರ್ದನ್ ಗುರೂಜಿಯೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ಇಡೀ ಕರುನಾಡಿಗೆ ಹಾಗೂ ಕನ್ನಡಿಗರ ಸ್ವಾಭಿಮಾನವಮ್ನ ಕೆಣಕಿದ್ದಾನೆ ಎಂದು ಕನ್ನಡ ಪರ ಹೋರಾಟಗಾರರು ಆರೋಪಿಸಿದ್ದಾರೆ.

ಪ್ರಶಾಂತ್ ಸಂಬರಗಿ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಪರ ಹೋರಾಟಗಾರರು,ಬಿಗ್ ಬಾಸ್ ಮನೆಯಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಓರ್ವ ಸ್ಪರ್ಧಿಯಾಗಿದ್ದಾರೆ. ರಿಯಾಲಿಟಿ ಶೋನ ನಿಯಮಗಳಂತೆ ಆರೋಗ್ಯಕರ ಚರ್ಚೆ ಹಾಗೂ ಆಟಗಳ ಮೂಲಕ ಶೋನಲ್ಲಿ ಗೆಲುವು ಸಾಧಿಸಬೇಕು ಅದರೆ ಸಂಬರಗಿ ಕೇವಲ ಕುಚೇಷ್ಟೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಿದ್ದಾನೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಹೋರಾಟಗಾರ ವಿ.ನರಸಿಂಹಮೂರ್ತಿ ಮಾತನಾಡಿ ಕನ್ನಡ ಕಲರ್ಸ್ ವಾಹಿನಿ ಕೇವಲ ಪ್ರಶಾಂತ್ ಸಂಬರಗಿಯಿಂದ ಕನ್ನಡ ಪರ ಹೋರಾಟಗಾರರ ಕ್ಷಮೆ ಕೇಳಿಸುತ್ತೇವೆ ಎನ್ನುತ್ತಿದ್ದಾರೆ. ಕೇವಲ ಕ್ಷಮೆ ಕೇಳಿಸಿದರೆ ಸಾಲದು ಆತನ್ನು ಬಿಗ್ ಬಾಸ್ ಸ್ಪರ್ಧೆಯಿಂದ ಹೊರ ಹಾಕಬೇಕು. ಇಲ್ಲವಾದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಬ್ಯಾನ್ ಮಾಡುವಂತೆ ಹೋರಾಟ ಮಾಡಬೇಕಾಗುತ್ತದೆ ಎಂದು ವಾಹಿನಿಗೆ ಎಚ್ಚಸಿದ್ದಾರೆ.

Kannada Activists Protest Demand for Eliminate Prashanth Sambaragi from Bigg Boss

ಇನ್ನೂ ಆಹೋರಾತ್ರಿ ಧರಣಿಯಲ್ಲಿ ಕರ್ನಾಟಕ ರಕ್ಷಣಾ ಪಡೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ. ಕಾರ್ಮಿಕ ಸಂಘಟನೆಗಳು , ಕಟ್ಟಡ ಕಾರ್ಮಿಕರ ಸಂಘಟನೆಗಳು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+