ರಾಮನಗರ: ಕೊಲೆ ಆರೋಪಿ ಮೇಲೆ ಪೋಲಿಸರಿಂದ ಗುಂಡಿನ ದಾಳಿ
ರಾಮನಗರ, ಅಕ್ಟೊಬರ್ 24: ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಕನಕಪುರ ತಾಲೂಕಿನ ಬೋರೇಗೌಡನದೊಡ್ಡಿಯಲ್ಲಿ ಮಧ್ಯರಾತ್ರಿ ನಡೆದಿದೆ.
ತಿಂಗಳ ಹಿಂದೆ ವೃದ್ಧೆಯನ್ನು ಕೊಲೆ ಮಾಡಿ ಚಿನ್ನ ದೋಚಿ ಪರಾರಿಯಾಗಿದ್ದ ಚಂದ್ರಕುಮಾರ್ ನನ್ನು ಪೋಲಿಸರು ಬಂಧಿಸುವ ವೇಳೆ ಕನಕಪುರ ಟೌನ್ ಪಿಎಸ್ ಐ ಅನಂತ ರಾಮ್ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್ ಐ ಅನಂತ ರಾಮ್ ತಮ್ಮ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿ ಚಂದ್ರಕುಮಾರ್‌ನನ್ನು ಪೋಲೀಸರು ಬಂಧಿಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಆರೋಪಿಯ ದಾಳಿಯಿಂದ ಪಿಎಸ್ ಐ ಅನಂತ್ ರಾಮ್ ಅವರ ಕೈಗೆ ಗಾಯವಾಗಿದೆ.












Click it and Unblock the Notifications