ಕನಕಪುರ : 250 ಕೋಟಿ ಆಸ್ತಿಯ ಹಾಸ್ಟೆಲ್ ವಾರ್ಡನ್ ಅಮಾನತು!

ರಾಮನಗರ, ಡಿಸೆಂಬರ್ 18 : ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್ ಅಮಾನತುಗೊಂಡಿದ್ದಾರೆ. 250 ಕೋಟಿ ರೂ. ಮೀರಿದ ಆಸ್ತಿಯನ್ನು ಅವರು ಹೊಂದಿದ್ದು, ನ್ಯಾಯಾಲಯ ಎಸಿಬಿ ತನಿಖೆಗೆ ಆದೇಶ ನೀಡಿದೆ.

ಜೂನಿಯರ್ ವಾರ್ಡನ್ ಆಗಿ 250 ಕೋಟಿ ರೂ. ಆಸ್ತಿಗಳಿಸಿದ್ದ ಬಿ.ನಟರಾಜ್‌ನನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ನಟರಾಜ್ ವಿರುದ್ಧ ದೂರು ಸಲ್ಲಿಸಿದ್ದರು.

ಆದಾಯ ಮೀರಿ ಆಸ್ತಿಗಳಿಸಿರುವ ನಟರಾಜ್ ವಿರುದ್ಧ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಕನಕಪುರದ ನ್ಯಾಯಾಲಯ ನಟರಾಜ್ ಅವರ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಎಸಿಬಿ ಪೊಲೀಸರಿಗೆ ಸೂಚನೆ ನೀಡಿದೆ.

Junior hostel warden

ಕನಕಪುರದ ನಿವಾಸಿಯಾದ ನಟರಾಜ್ ಗುತ್ತಿಗೆ ಆಧಾರದ ಮೇಲೆ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದು, ಮೊದಲು ಅವರಿಗೆ 7200 ರೂ. ವೇತನ ಇತ್ತು. ಈಗ ಅವರು 24 ಸಾವಿರ ರೂ.ವ ವೇತನ ಪಡೆಯುತ್ತಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯ ಟೆಂಡರ್‌ಗಳನ್ನು ಅಕ್ರಮವಾಗಿ ಪಡೆದು ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಆಸ್ತಿ ವಿವರಗಳು : ಜೂನಿಯರ್ ವಾರ್ಡನ್ ಬಿ.ನಟರಾಜ್ 250 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 18 ಎಕರೆ, ಕನಕಪುರದ ಏರಂಗೆರೆಯಲ್ಲಿ 28 ಎಕರೆ, ಕೊಳ್ಳೇಗಾಲದಲ್ಲಿ 15.5 ಎಕರೆ ಭೂಮಿಯನ್ನು ಅವರು ಹೊಂದಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಣಿಜ್ಯ ಸಂಕೀರ್ಣ, ಜೆ.ಪಿ.ನಗರ 6ನೇ ಹಂತದಲ್ಲಿ 3 ಮಹಡಿ ಮನೆ, ಕನಕಪುರದಲ್ಲಿ ಮನೆ, ಎರಡು ಕಾರು ಮತ್ತು ಬೈಕ್ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+