ಕನಕಪುರ ಕ್ಷೇತ್ರದ ಫಲಿತಾಂಶ 2023: ಡಿಕೆಶಿಗೆ 1 ಲಕ್ಷ ಮತಗಳ ಗೆಲುವು

ಕನಕಪುರ: 'ಬಂಡೆ' ಎಂದೇ ರಾಜಕಾರಣದಲ್ಲಿ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದರೂ ಉಲ್ಟಾ ಆಗಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಹೋಗಿ ಬಿಜೆಪಿ ಸೋತಿದೆ. 2023ರ ಚುನಾವಣೆಯಲ್ಲಿ ದಿಲ್ಲಿಯಲ್ಲೇ ಕನಕಪುರ ರಾಜಕೀಯ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಎಲ್ಲಾ ಉಲ್ಟಾ ಹೊಡೆದಿದ್ದು, 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ.

ಸತತ 7 ಗೆಲುವು ಸಾಧಿಸಿದ್ದ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ಶಪಥ ಮಾಡಿದಂತೆ ಈ ಚುನಾವಣೆ ಭಾಸವಾಗಿತ್ತು. ಆರ್.ಅಶೋಕ್ ಪದ್ಮನಾಭನಗರ ಕ್ಷೇತ್ರದ ಜತೆ ಕನಕಪುರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಮೇ 10ರಂದು ರಾಮನಗರ ಜಿಲ್ಲೆಯಲ್ಲಿ ಶೇ.85ರಷ್ಟು ಮತದಾನವಾಗಿತ್ತು. ಈ ಪೈಕಿ ಕನಕಪುರ ಕ್ಷೇತ್ರದಲ್ಲಿ ಶೇ.84.52ರಷ್ಟು ವೋಟಿಂಗ್ ನಡೆದಿತ್ತು. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಆರ್.ಅಶೋಕ್ ವಿರುದ್ಧ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ.

kanakapura Assembly Election Result 2023

ಕನಕಪುರ ಜೊತೆ ಹಳೇ ಮೈಸೂರು ಟಾರ್ಗೆಟ್?

ಕನಕಪುರ ಕ್ಷೇತ್ರದಲ್ಲಿ ಕೇವಲ ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವಿಗೆ ಬಿಜೆಪಿ ರಣತಂತ್ರವನ್ನ ರೂಪಿಸಿರಲಿಲ್ಲ BJP ಕನಕಪುರ ಗೆಲ್ಲುವ ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ತಂತ್ರ ಇದರಲ್ಲಿತ್ತು. ಎಲ್ಲರಿಗೂ ಗೊತ್ತಿರುವಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವಾಗಿದೆ. JDS ಬಿಟ್ಟು ಕಾಂಗ್ರೆಸ್ ಮಾತ್ರ ಅವರ ವಿರುದ್ಧ ಗುಡುಗುವ ಶಕ್ತಿ ಹೊಂದಿದೆ. ಆದೇ ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಿದರೆ, ಹಳೇ ಮೈಸೂರು ಭಾಗದಲ್ಲೂ ಬಿಜೆಪಿಗೆ ಬಲ ಬರುವ ಲೆಕ್ಕಾಚಾರ ಕೂಡ ಇತ್ತು. ಆದರೆ ಬಿಜೆಪಿ ರಣತಂತ್ರ ವರ್ಕೌಟ್ ಆಗಿಲ್ಲ.

ಡಿಕೆಶಿ ಪರ ಕನಕಪುರ ಮತದಾರರ ಬಲ

ಒಟ್ಟು 2,20,391 ಮತದಾರರನ್ನು ಹೊಂದಿರುವ ಕನಕಪುರ ಕ್ಷೇತ್ರದಲ್ಲಿ 1,09, 876 ಪುರುಷರು, 1,10,500 ಮಹಿಳಾ ಮತದಾರದ್ದರೆ, ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ 99,567 ವೋಟ್ ಇಲ್ಲಿದೆ. ದಲಿತ ಸಮುದಾಯದ 44 ಸಾವಿರ ಮತಗಳು, ಮುಸ್ಲಿಮರ 22,500, ಲಿಂಗಾಯತರ 18,500 ಮತಗಳು ಇವೆ. ಇನ್ನುಳಿದಂತೆ ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000 & ಇತರೆ ಸಮುದಾಯದ 9400 ಮತದಾರರಿದ್ದರು. ಈ ಪೈಕಿ ಕನಕಪುರ ಮತದಾರರು ಮತ್ತೆ ಡಿಕೆಶಿಗೆ ಆಶೀರ್ವಾದ ಮಾಡಿದ್ದಾರೆ.

ಒಕ್ಕಲಿಗರ ಮತಗಳೇ ಇಲ್ಲಿ ನಿರ್ಣಾಯಕ

ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರ ಮತವಿಲ್ಲದೆ ಕನಕಪುರದಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ಡಿಸೈಡ್ ಮಾಡಲು ಆಗಲ್ಲ. ಸುಮಾರು 1 ಲಕ್ಷದಷ್ಟು ಒಕ್ಕಲಿಗರ ಮತಗಳು ಇರುವ ಕಾರಣ, ಇರುವ 2 ಲಕ್ಷ 20 ಸಾವಿರ ವೋಟ್ ಪೈಕಿ ಒಕ್ಕಲಿಗರ ಮತಗಳೇ ಗೇಮ್ ಡಿಸೈಡರ್. ಆದರೆ ಕಾಂಗ್ರೆಸ್ & ಬಿಜೆಪಿ ಒಕ್ಕಲಿಗ ಅಭ್ಯರ್ಥಿ ಕಣದಲ್ಲಿ ಇಳಿಸಿ ಹೊಸ ಗೇಮ್ ಶುರು ಮಾಡಿತ್ತು. ಈ ಆಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಗೆದ್ದು, ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಸೋಲು ಕಂಡಿದ್ದಾರೆ.

ಬಿಜೆಪಿ ಭರ್ಜರಿ ಪ್ರಚಾರ ವರ್ಕೌಟ್ ಆಗಲಿಲ್ಲ

ಆರ್.ಅಶೋಕ್ ದಿಲ್ಲಿ ವರಿಷ್ಠರ ಮಾತಿಗೆ ಅದೆಷ್ಟು ಬೆಲೆ ಕೊಟ್ಟಿದ್ದರು ಎಂದರೆ, ತಮ್ಮ ತವರು ಪದ್ಮನಾಭ ಕ್ಷೇತ್ರದ ಕಡೆ ಅಷ್ಟಾಗಿ ಗಮನ ಹರಿಸದೆ ಸಂಪೂರ್ಣವಾಗಿ ಕನಕಪುರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಅಲ್ಲದೆ ಕನಕಪುರದ ಪ್ರತಿ ಗಲ್ಲಿ ಸುತ್ತಿ ಮತ ಕೇಳಿದ್ದರು. ಹಾಗೇ ಭರ್ಜರಿ ರೋಡ್ ಶೋ ಹಾಗೂ ಪ್ರಚಾರ ಸಭೆ ನಡೆಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಕೂಡ ಬಿಜೆಪಿಗೆ ಠಕ್ಕರ್ ಕೊಡುವ ರೀತಿ ಪ್ರಚಾರ ಸಭೆ ನಡೆಸಿತ್ತು. ಆದ್ರೆ ಕನಕಪುರದ ಮತದಾರ ಪ್ರಭು ತನ್ನ ಮತವನ್ನ ಕಾಂಗ್ರೆಸ್‌ಗೆ ನೀಡಿ, ಡಿಕೆಶಿಗೆ ಗೆಲುವು ನೀಡಿದ್ದಾನೆ.

ಕನಕಪುರ ಕೋಟೆಯ ಸೋಲು ಗೆಲುವಿನ ಲೆಕ್ಕಾಚಾರ ಕಾಂಗ್ರೆಸ್ ಗೆದ್ದು ಬೀಗಿದೆ. ಡಿ.ಕೆ. ಶಿವಕುಮಾರ್ ಮತ್ತೆ ತಮ್ಮ ಕ್ಷೇತ್ರದ ಹಿಡಿತವನ್ನ ತೋರಿಸಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಭರ್ಜರಿ ಗೆಲುವಿನ ಕಡೆಗೆ ಹೆಜ್ಜೆ ಇಟ್ಟಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಫಲಿತಾಂಶ ಫೈನಲ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+