ರಾಮನಗರದಲ್ಲಿ ನಡೆದಿತ್ತು ಬೌದ್ಧಗುರು ದಲೈಲಾಮ ಹತ್ಯೆಗೆ ಸಂಚು
Recommended Video

ರಾಮನಗರ, ಅ.1: ಬೌದ್ಧಗುರು ದಲೈಲಾಮಾ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ರಾಮನಗರದಲ್ಲಿ ಬಂಧಿತನಾದ ಉಗ್ರ ಮುನೀರ್ ಹೊರಹಾಕಿದ್ದಾನೆ.
ಆಗಸ್ಟ 5ರ ರಾತ್ರಿ ರಾಮನಗರದಲ್ಲಿ ಜಾರ್ಖಂಡ್ ಮೂಲದ ಉಗ್ರ ಮುನೀರ್ ನನ್ನು ಬಂಧಿಸಲಾಗಿತ್ತು, ಆತನ ಬಳಿ ಇದ್ದ ಲ್ಯಾಪ್ ಟಾಪ್, ಕರ್ನಾಟಕದ ಹಲವು ದೇವಾಲಯಗಳ ಚಿತ್ರ, ಪ್ರವಾಸಿ ತಾಣಗಳ ನಕ್ಷೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ದಲೈಲಾಮಾರನ್ನ ಬಾಂಬ್ ನಿಂದ ಸ್ಫೋಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಬಂಧಿತ ಉಗ್ರರ ವಿಚಾರಣೆ ವೇಳೆ ತಿಳಿದುಬಂದಿದೆ. ಉಗ್ರರು 2018ರ ಆರಂಭದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ರಾಮನಗರದಲ್ಲಿ ಹತ್ಯೆಗೆ ಸ್ಕೆಚ್ ನಡೆದಿತ್ತು.

ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಮುನೀರ್ ಶೇಖ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಬೌದ್ಧ ಧರ್ಮಗುರು ದಲೈಲಾಮಾ ಅವರು ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರು. ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರಿಂದ ಜೆಎಂಬಿ ಉಗ್ರ ಸಂಘಟನೆ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.












Click it and Unblock the Notifications