ಜೆಡಿಎಸ್ ಅಧಿಕಾರಕ್ಕೆ ಬರುತ್ತೆ, ಇದೇ ಸೈಟ್‌ನಲ್ಲಿ ಮನೆ ನಿರ್ಮಿಸಿಕೊಡ್ತೇವೆ: ಎಚ್‌ಡಿಕೆ ಭರವಸೆ

ರಾಮನಗರ, ಆಗಸ್ಟ್‌ 5: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಘೋಷಣೆ ಮಾಡಿರುವಂತೆ ಪಂಚ ರತ್ನ ಯೋಜನೆಗಳಲ್ಲಿ ಒಂದಾದ ವಸತಿ ಯೋಜನೆ ಮೂಲಕ ವಸತಿ ರಹಿತರಿಗೆ ಸೂರು ಒದಗಿಸುವುದು ನನ್ನ ಕನಸು. ನಿಮ್ಮ ಆಶೀರ್ವಾದ ಬಲದಿಂದ ನಾನದನ್ನು ಸಾಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ತಾಲ್ಲೂಕಿನ ಕೂಡ್ಲೂರು ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ, ವಸತಿ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್‍ ಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಮುಖ್ಯಮಂತ್ರಿಗಳ ವಸತಿ ಯೋಜನೆಗಳ ವತಿಯಿಂದ ಎರಡನೇ ಹಂತದಲ್ಲಿ 112 ಮಂದಿ ವಸತಿ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಿದ ನಂತರ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ 2023ಕ್ಕೆ ಜನತಾ ದಳ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಕಳೆದ ಸುಮಾರು 20 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ನಿವೇಶನದ ಹಕ್ಕು ಪತ್ರ ವಿತರಣೆಯನ್ನು ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ಕಳೆದ ಕೆಲವು ತಿಂಗಳುಗಳ ಹಿಂದೆ ಮೂದಲನೇ ಹಂತದಲ್ಲಿ 80 ಮಂದಿ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದ್ದು. ಇಂದು 112 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನೂ ನೂರಕ್ಕೆ ಹೆಚ್ಚು ಮಂದಿ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗಿದ್ದು ಅವರಿಗೂ ಮುಂದೆ ಹಕ್ಕು ಪತ್ರ ನೀಡಲಾಗುವುದು ಎಂದು ಮಾಜಿ ಸಿಎಂ ಹೆಚ್ಡಿಕೆ ತಿಳಿಸಿದರು.

JDS Party Will Come to Power in 2023 at Karnataka:HD Kumaraswamy

ನಿವೇಶದ ಹಕ್ಕು ಪತ್ರ ಪಡೆದ ಫಲಾನುಭವಿಗಳು ತಮ್ಮ ಕುಟುಂಬದಲ್ಲಿ ಯಾವುದೇ ಕಷ್ಟ ಬಂದರೂ ನಿವೇಶ ಮಾರಾಟ ಮಾಡದೆ ಜೋಪಾನ ಮಾಡಿಕೊಳ್ಳಿ, ಕೆಲವೇ ತಿಂಗಳು ಎಂದರೆ 2023ರಲ್ಲಿ ನಮ್ಮ ಜೆಡಿಎಸ್ ನೇತೃತ್ವದ ಸರ್ಕಾರ ಬರುವುದು ಖಚಿತವಾಗಿದ್ದು, ಸರ್ಕಾರದ ವತಿಯಿಂದಲೇ ಗ್ರಾಮದಲ್ಲಿ ಸುಸ್ಸಜ್ಜಿತವಾಗಿ ಮನೆಗಳನ್ನು ನಿರ್ಮಾಣ ಮಾಡಿ ಕೊಡುವುದಾಗಿ ಆಶ್ರಯ ನಿವೇಶನದ ಫಲಾನುಭವಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಕೊಡಗಿನ ಮಾದರಿ ಮನೆ ನಿರ್ಮಾಣ
ಜೆಡಿಎಸ್ ನೇತೃತ್ವದ ಸರಕಾರ ರಚನೆಯಾದರೆ ಪಂಚ ರತ್ನ ಯೋಜನೆಯಡಿ ರಾಜ್ಯದ ಎಲ್ಲಾ ನಿವೇಶನ ರಹಿತ ಬಡವರಿಗೆ ಸರ್ಕಾರದಿಂದ ಮಾಡಲ್ ಗ್ರಾಮಮಾಡಿ ನಾನೇ ಮನೆ ಮನೆ ನಿರ್ಮಾಣ ಮಾಡುವ ಮೂಲಕ ನೂಂದವರಿಗೆ ಸೂರು ಒದಗಿಸುವುದು ನನ್ನ ಕನಸು. ಅದನ್ನು ಅನುಷ್ಠಾನಕ್ಕೆ ತಂದೇ ತರುತ್ತೇನೆ ಎಂದರು.

JDS Party Will Come to Power in 2023 at Karnataka:HD Kumaraswamy

ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡಿದ್ದ ಕೊಡಗಿನ ಜನರಿಗೆ ಕೇವಲ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಸುಂದರವಾದ ಮನೆಗಳನ್ನು ನಿರ್ಮಾಣ ಮಾಡಿ ಮನೆ ಕಳೆದುಕೊಂಡವರಿಗೆ ವಿತರಿಸಿದ್ದೇವೆ ಅದೇ ಮಾದರಿಯ ಸುಸಜ್ಜಿತ ಮನೆಗಳನ್ನು ಸರ್ಕಾರದ ವತಿಯಿಂದ ನಿರ್ಮಾಣ ಮಾಡಿ ರಾಜ್ಯದ ಬಡ ನಿವೇಶನ ರಹಿತ ಫಲಾನುಭವಿಗಳಿಗೆ ವಿತರಣೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+