ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಬಾರದ ಆರೋಗ್ಯ ಇಲಾಖೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್ 23: ಕೊರೊನಾ ವೈರಸ್ ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಬರದೇ ಬೇಜವಾಬ್ದಾರಿತನ ತೋರಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಬಿಡದಿಯ ಚೌಕಹಳ್ಳಿ ಕಾಲೊನಿಯಲ್ಲಿ 47 ವರ್ಷದ ಪುಟ್ಟಮ್ಮ ಕೋವಿಡ್ ಗೆ ಮೃತಪಟ್ಟಿದ್ದರು. ಮೃತ ಮಹಿಳೆಯ ಸಂಬಂಧಿಕರು ವೈದ್ಯರಿಗೆ ಕರೆ ಮಾಡಿದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನ ತೋರಿದ್ದಾರೆ.

ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಮನೆ ಮೇಲೆ ಪೊಲೀಸ್ ದಾಳಿರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಮನೆ ಮೇಲೆ ಪೊಲೀಸ್ ದಾಳಿ

ಜಿಲ್ಲಾಸ್ಪತ್ರೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ವೈದ್ಯ ಸಿಬ್ಬಂದಿಗಳಿಲ್ಲ, ಕೊರತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಬ್ಬಂದಿ ಕಳುಹಿಸಿದರೆ ಅವರ ಎಲ್ಲ ಖರ್ಚು, ವೆಚ್ಚ ನೀವೇ ನೋಡಿಕೊಳ್ಳಬೇಕು ಎಂದು ಭೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ.

Ramanagara: The Health Department Which Does Not Attend The Funeral Of A Woman Who Died From Coronavirus

ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಗಳನ್ನು ನೀವೇ ನೀಡಬೇಕು ಎಂದಿದ್ದಾರೆ. ಆದರೆ ಅಂತ್ಯಸಂಸ್ಕಾರಕ್ಕೆ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಧಾವಿಸಿದ್ದು, ಪುಟ್ಟಮ್ಮ ಅಂತ್ಯಸಂಸ್ಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆ್ಯಬುಲೆನ್ಸ್ ನಿಂದ ಹೊರತಂದು ಅಂತ್ಯಸಂಸ್ಕಾರ ನಡೆಸಿದ್ದಾರೆ. ಮೃತ ಮಹಿಳೆಯ ಸಂಬಂಧಿಕರಿಂದ ಪಿಎಫ್ಐ ಕಾರ್ಯಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
In Ramanagar district, an irresponsible by health department officials which does not attended the funeral of a woman who died From coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X