'ಬಾಲಕೃಷ್ಣ ಅವರಿಂದ ಒಳ್ಳೆ ಮಾತು ನಿರೀಕ್ಷೆ ಮಾಡಲು ಸಾಧ್ಯವೇ?'
ರಾಮನಗರ, ಮಾರ್ಚ್ 02 : 'ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರದ್ದು ಲಂಗು-ಲಗಾಮು ಇಲ್ಲದ ನಾಲಿಗೆ. ಅವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷೆ ಮಾಡಲು ಸಾಧ್ಯವೇ?' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ರಾಮನಗರದ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ಅವರು ನನಗೆ ಹಳೆಯ ಸ್ನೇಹಿತರೇ, ಅವರ ನಡುವಳಿಕೆ ಏನು ಅಂತಾ ಗೊತ್ತು. ಅವರದ್ದು ಲಂಗು ಲಗಾಮಿಲ್ಲದ ನಾಲಿಗೆ' ಎಂದರು.
ತಾಲೂಕು ಪಂಚಾಯಿತಿಯ ಸದಸ್ಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ವಿರುದ್ದ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 'ಬಾಲಕೃಷ್ಣ ಅವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ?' ಎಂದು ಪ್ರಶ್ನಿಸಿದರು.

'ಒಬ್ಬರು ಜನಪ್ರತಿನಿಧಿಯಾಗಿ ಮಾತನಾಡಬೇಕಾದರೆ ಹತ್ತು ಬಾರಿ ತೂಕ ಮಾಡಿ ಮಾತನಾಡಬೇಕು. ಅಲ್ಲದೇ ನಾಲಿಗೆ ಇದೆ ಅಂತಾ ಬಳಸುವ ಪದಬಳಕೆಯಿಂದಾಗುವ ಆಗು ಅನಾಹುತದ ಬಗ್ಗೆ ಅರಿತುಕೊಳ್ಳಲಿ' ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

'ಮಾಗಡಿ ಕ್ಷೇತ್ರಕ್ಕೆ ಎಚ್.ಡಿ ಕುಮಾರಸ್ವಾಮಿಯವರ ಕೊಡುಗೆ ಶೂನ್ಯ' ಎಂದು ಆರೋಪಿಸಿದ್ದ ಬಾಲಕೃಷ್ಣಗೆ ತಿರುಗೇಟು ನೀಡಿದ ಕುಮಾರಸ್ವಾಮಿ, 'ತಾವು ಅಧಿಕಾರದಲ್ಲಿದ್ದ ವೇಳೆ ನೀಡಿದ ಅನುದಾ ಎಷ್ಟು?. ಈಗಿನ ಸಿಎಂ ಸಿದ್ದರಾಮಯ್ಯ ಸರ್ಕಾರ ನೀಡಿದ ಅನುದಾನ ಎಷ್ಟು? ಎನ್ನುವುದನ್ನು ತಿಳಿದುಕೊಳ್ಳಲಿ. ನಾನು ಅವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ? ' ಎಂದು ಪ್ರಶ್ನಿಸಿದರು.












Click it and Unblock the Notifications