ಕಾಂಗ್ರೆಸ್ ಬಿಟ್ಟ ಜೇಡ್ರಳ್ಳಿ ಕೃಷ್ಣಪ್ಪ ಅಂತೂ ಜೆಡಿಎಸ್ ಸೇರಿದ್ರಪ್ಪಾ

Recommended Video

      ಕರ್ನಾಟಕ ವಿಧಾನಸಭಾ ಚುನಾವಣೆ 2018 : ಕೊನೆಗೂ ಜೆಡಿಎಸ್ ಸೇರಿದ ಜೇಡ್ರಳ್ಳಿ ಕೃಷ್ಣಪ್ಪ | Oneindia Kannada

      ಮಾಗಡಿ (ರಾಮನಗರ), ಮಾರ್ಚ್ 26: "ಜೆಡಿಎಸ್ ಸೇರ್ತೀನಿ, ಇಲ್ಲ ರೀ ನಾನು ಬರೀ ಅದೊಂದು ದಿನ ಹೋಗಿದ್ದೆ ಅಷ್ಟೇ" ಎಂದು ಎರಡು ದಿನ ಸುದ್ದಿಯಲ್ಲಿದ್ದ ಜೇಡ್ರಳ್ಳಿ ಕೃಷ್ಣಪ್ಪ ಭಾನುವಾರ ಮಾಗಡಿಯಲ್ಲಿ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಅಂತೂ ಜೆಡಿಎಸ್ ಗೆ ಸೇರ್ಪಡೆ ಆಗಿದ್ದಾರೆ.

      ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕರಾಗಿದ್ದ ಎಚ್.ಎಂ.ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಸಾಮಾಜಿಕ ಜಾಲತಾಣದ ಮೂಲಕ, "ನಾನು ಜೆಡಿಎಸ್ ಸೇರಿಲ್ಲ. ಕೇವಲ ವದಂತಿ ಅಷ್ಟೆ. ಕಾರ್ಯಕರ್ತರ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆದ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ" ಎಂದು ಹೇಳಿದ್ದರು.

      ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

      ಆದರೆ, ಭಾನುವಾರ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಮಾಗಡಿಯಲ್ಲಿ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಕೈ ಪಾಳಯದಿಂದ ಜೆಡಿಎಸ್ ಅಂಗಳಕ್ಕೆ ಜಿಗಿದಿದ್ದಾರೆ.

      Finally Jedralli Krishnappa joined JDS

      ನಾನು ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ನನ್ನ ಸಾಮಾಜಿಕ ಕಳಕಳಿಯನ್ನು ಕಂಡು ಪಕ್ಷಕ್ಕೆ ಆಹ್ವಾನ ನೀಡಿದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

      ಮಾಗಡಿ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತೇನೆ. ಪಕ್ಷ ಸಂಘಟನೆ ಮಾಡಿ, ಜೆಡಿಎಸ್ ಅಭ್ಯರ್ಥಿ ಎ.ಮಂಜು ಪರ ಕೆಲಸ ಮಾಡಿ, ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+