ಮಗನ ಸಾವಿಗೆ ಸಿಂಧೂರಿ ಹೊಣೆಯಲ್ಲ, ಅವರಿಬ್ಬರೂ ಮದುವೆ ಆಗಬಹುದಿತ್ತು ಎಂದ ಡಿ.ಕೆ.ರವಿ ತಾಯಿ
ಮಗನ ಸಾವಿಗೆ ಸಿಂಧೂರಿ ಹೊಣೆಯಲ್ಲ: ಅವರಿಬ್ಬರೂ ಮದುವೆ ಆಗಬಹುದಿತ್ತು ಎಂದು ಡಿ.ಕೆ.ರವಿ ತಾಯಿ ಡಿ. ರೂಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ, ಫೆಬ್ರವರಿ, 20: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟದಲ್ಲಿ ನನ್ನ ಮಗನ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟು 8 ವರ್ಷಗಳು ಕಳೆದಿವೆ. ನಿಮ್ಮ ಜಗಳದಿಂದ ನನ್ನ ಮಗನ ಹರಸರಿಗೆ ಮಸಿ ಹಚ್ಚಬೇಡಿ ಎಂದು ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿಕಾರಿದರು.
₹25 ಲಕ್ಷ ಖರ್ಚು ಮಾಡಿ ಸೆರೆ ಹಿಡಿದ ಪುಂಡಾನೆ ರಾಮನಗರ ಜಿಲ್ಲೆಗೆ ವಾಪಸ್: ಹೆಚ್ಚಿದ ಆತಂಕ
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಲ ಗ್ರಾಮದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಮಾಧ್ಯಮಗಳೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ , ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೆಲ ಪೋಟೋಗಳನ್ನು ಪೋಸ್ಟ್ ಮಾಡಿದಲ್ಲದೇ ದಿ.ಡಿ.ಕೆ.ರವಿ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಕಿಡಿಕಾರಿದರು.

ಮಗನ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ
"ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು, ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಹಾಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ "ಆ" ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು. ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ," ಎಂದು ಡಿ.ಕೆ.ರವಿ ತಾಯಿ ಗೌರಮ್ಮ ತಿಳಿಸಿದರು.
ಡಿ. ರೂಪ ವಿರುದ್ಧ ಡಿ.ಕೆ. ರವಿ ತಾಯಿ ಆಕ್ರೋಶ
"ನಮ್ಮ ಮನೆಗೆ ರೋಹಿಣಿ ಸಿಂಧೂರಿ ಮೂರು ಬಾರಿ ಬಂದಿದ್ದಾರೆ. ಡಿ.ಕೆ. ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡಿ, ನೀವೆ ಆಗಲಿ, ರಾಜಕಾರಣಿಗಳೇ ಆಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತರಬೇಡಿ," ಎಂದು ಗೌರಮ್ಮ ಎಚ್ಚರಿಕೆ ನೀಡಿದರು.

ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ
ನನ್ನ ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ. ನಿಮ್ಮಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲಕ ಜೀವನ ರೂಪಿಸಿ. ನನ್ನ ಮಗ ನಡೆದ ದಾರಿಯಲ್ಲಿ ನಡೆಯಿರಿ. ಅದರೆ ನಿಮ್ಮ ಜಗಳದಲ್ಲಿ, ಸಿಂಧೂರಿ ಅವರ ಮೇಲೆ ಅಪವಾದ ಹೊರಿಸಿದ್ದೀರಿ. ಹಾಗೆಯೇ ನನ್ನ ಮಗನ ಹೆಸರು ತಂದು ಅವನ ಹೆಸರಿಗೆ ಮಸಿ ಹಚ್ವುವ ಕೆಲಸ ಮಾಡಬೇಡಿ ರೂಪಾ ಅವರೇ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು.
ನಾನು ಮುಖ್ಯಮಂತ್ರಿ ಯಾಗುತ್ತೇನೆ, ಮನೆಗೊಬ್ಬರಿಗೆ ಕೆಲಸ ಕೊಡುತ್ತೇನೆ ಎಂದು ಹೇಳುತ್ತಿದ್ದ ನನ್ನ ಮಗ ಅಪರಂಜಿ. ಅವನ ನಡೆ, ನುಡಿಗಳನ್ನು ಜನರು ಕೊಂಡಾಡುತ್ತಿದ್ದಾರೆ. ಇದೀಗ ನಿಮ್ಮಿಬ್ಬರ ರಂಪಾಟ ನೋಡಿ ಜನರು ನನಗೆ ರಾಜ್ಯದ ವಿವಿಧ ಭಾಗದಿಂದ ಫೋನ್ ಮಾಡಿ ಡಿ.ಕೆ.ರವಿಯ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದರು. ನಿಮ್ಮ ನಡೆಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಡಿ.ಕೆ.ರವಿ ತಾಯಿ ಡಿ. ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications