ಅಕ್ರಮ ಸಂಬಂಧದ ಗಲಾಟೆಯಲ್ಲಿ 75 ವರ್ಷದ ವೃದ್ಧರ ಕೊಲೆಯಾಯಿತಾ?
ಮಾಗಡಿ (ರಾಮನಗರ ಜಿಲ್ಲೆ), ಜುಲೈ 26: ಹಾಡಹಗಲೇ ವೃದ್ಧರೊಬ್ಬರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮಾಗಡಿ ತಾಲೂಕಿನ ಮೋಟಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದಕಲ್ಲು ಬಳಿಯ ಜಮಿನಿನಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಗ್ರಾಮದ ನಿವಾಸಿ ನಡುಕೆರಯ್ಯ (75) ಕೊಲೆಯಾದವರು. ಕಂಬದಕಲ್ಲಿನ ಬಳಿ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು, ಎಲ್ಲರಿಗೂ ವಿವಾಹವಾಗಿದೆ.
ಶುಕ್ರವಾರ ಬೆಳಗ್ಗೆ ನಡುಕೆರಯ್ಯ ಹಾಗೂ ಅವರ ಪತ್ನಿ ಕೆಂಪಮ್ಮ ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇವರಿಗೆ ಬದು ನಿರ್ಮಿಸಲು ಸಹಾಯ ಮಾಡಿದ್ದ. ಆ ನಂತರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಅಪರಿಚಿತ ವ್ಯಕ್ತಿ ಕುಡುಗೋಲಿನಿಂದ ನಡುಕೆರಯ್ಯ ಅವರ ಕತ್ತು ಹಾಗೂ ಬುರುಡೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ.

ಆ ನಂತರ ನಡುಕೇರಯ್ಯ ಅವರ ಪತ್ನಿ ಕೆಂಪಮ್ಮ ಮೇಲೂ ಕುಡುಗೋಲಿನಿಂದ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಚಿನ್ನದ ಗುಂಡು, ಮಾಂಗಲ್ಯದ ಸರ ಹಾಗೂ ಕಾಲಿನ ಚೈನ್ ಸೇರಿದಂತೆ ಸುಮಾರು 70 ಸಾವಿರ ರುಪಾಯಿ ಬೆಲೆ ಬಾಳುವ ಒಡವೆಗಳನ್ನು ಕಸಿದುಕೊಂಡ ನಂತರ, "ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲೆ ಮಾಡುವೆ" ಎಂದು ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಗೊಳ್ಳಗಾದ ಕೆಂಪಮ್ಮ ಸುಮಾರು 2 ಕಿ.ಮೀ. ನಡೆದು, ಗ್ರಾಮದ ಬಳಿ ಬಂದವರು ಅಪರಿಚಿತ ವ್ಯಕ್ತಿ ತನ್ನ ಪತಿಯನ್ನು ಕೊಲೆ ಮಾಡಿದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ತಾವರೆಕೆರೆ ಪೊಲೀಸರು ಸ್ಥಳ ಹಾಗೂ ಶವದ ಪರಿಶೀಲನೆ ನಡೆಸಿದರು. ಆ ನಂತರ ಮೃತ ನಡುಕೆರಯ್ಯನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಮೃತನ ಸಂಬಂಧಿಕರ ಹೇಳಿಕೆ ಪಡೆದು, ಎಫ್ ಐಆರ್ ದಾಖಲಿಸಿದ್ದಾರೆ.

ಅಕ್ರಮ ಸಂಬಂಧ ಶಂಕೆ
ಮೃತ ನಡುಕೆರಯ್ಯ ಅವರ ಮಗ ಬೆಂಗಳೂರಿನ ಉಲ್ಲಾಳದ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈ ಯುವತಿಯು ಕೊತ್ತಗಾನಹಳ್ಳಿಯ ಯುವಕನೊಬ್ಬನೊಂದಿಗೆ ಆಕ್ರಮ ಸಂಬಂಧವ ಇಟ್ಟುಕೊಂಡಿದ್ದು, ನಡುಕೆರಯ್ಯ ಹಾಗೂ ಅವರ ಪತ್ನಿಯ ಗಮನಕ್ಕೆ ಬಂದಿತ್ತು.
ಈ ಬಗ್ಗೆ ಮನೆಯಲ್ಲಿ ಹಲವು ಬಾರಿ ಗಲಾಟೆ ನಡೆದಿದ್ದು, 4 ತಿಂಗಳ ಹಿಂದೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಿಸಲಾಗಿತ್ತು ಎಂದು ಮೃತರ ಸಂಬಂಧಿಕರು ತಿಳಿಸಿದ್ದು, ಕೊಲೆಗೆ ಈ ಘಟನೆಯೂ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications