Get Updates
Get notified of breaking news, exclusive insights, and must-see stories!

ರಾಮನಗರ ಜಾನಪದ ಲೋಕದಲ್ಲಿ ಕೂರಿಸುವ ದಸರಾ ಬೊಂಬೆಗಳ ವಿಶೇಷತೆಗಳೇನು..?

ರಾಮನಗರ, ಅಕ್ಟೋಬರ್‌ 20: ನಾಡಹಬ್ಬ ದಸರಾಗೆ ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ. ಬೊಂಬೆ ಪ್ರದರ್ಶನ ಅಕ್ಟೋಬರ್ 15 ನವೆಂಬರ್ 15 ರವರೆಗೆ ಪ್ರಾವಾಸಿಗರ ತನುಮನ ತಣಿಸುತ್ತಿದೆ. 1996 ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮೊದಲ ಬಾರಿಗೆ ಬೊಂಬೆಗಳ ಪ್ರದರ್ಶನವನ್ನು ಪ್ರಾರಂಭಿಸಿತು.

ಪ್ರತಿ ವರ್ಷದಂತೆ ಈ ವರ್ಷವೂ ಗೊಂಬೆ ಪ್ರದರ್ಶನವನ್ನು ನವರಾತ್ರಿಯ ಮೊದಲ ದಿನ ಪ್ರಾರಂಭಿಸಲಾಗಿದೆ. ಈ ವರ್ಷದ ಬೊಂಬೆಗಳ ಪ್ರದರ್ಶನದಲ್ಲಿ ವಿಶೇಷವಾಗಿ ಭಾರತದ ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಶೀರ್ಷಿಕೆಯಡಿ ಸಂವಿಧಾನದ ಆಶಯದಂತೆ ಬುದ್ಧ, ಬಸವ, ಜೀಸಸ್, ಇಸ್ಲಾಂ ಗಾಂಧಿ, ಅಂಬೇಡ್ಕರ್, ಧರ್ಮದ ಕುರಿತ ಬೊಂಬೆಗಳ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

dasara-puppet-are-placed-in-ramanagara

ದಸರಾ ಬೊಂಬೆ ಪ್ರದರ್ಶನವನ್ನು ರಾಜ್ಯ ಪರಿಸರ ಪರಿಚಾಲಕರಾದ ಮುಕುಂದರಾವ್ ಲೋಕಂಡೆ, ಡಾ.ಎಸ್.ಕೆ.ಖರಿಂಖಾನ್ ಮೊಮ್ಮಗ ತನ್ವೀರ್ ಅಹಮದ್, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಶಿ ರಾಮಚಂದ್ರೇಗೌಡ, ಕಾರ್ಯಾಧ್ಯಕ್ಷರಾದ ಪ್ರೊ.ಹಿ.ಚಿ ಬೋರಲಿಂಗಯ್ಯ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಜಾನಪದ ಲೋಕದ ಸಿಬ್ಬಂದಿ ಉಪಸ್ಥಿತರಿದರು.

ದರಸಾ ಬೊಂಬೆಗಳ ಪ್ರದರ್ಶನದ ವಿಶೇಷತೆ

ಬೊಂಬೆ ಪ್ರದರ್ಶನದಲ್ಲಿ ಪಟ್ಟದ ಗೊಂಬೆಗಳಿಗೆ ಅಗ್ರಸ್ಥಾನವಿದ್ದು, ಸೆರಾಮಿಕ್, ಮಣ್ಣು, ಪಿಂಗಾಣಿ ಮತ್ತು ಮರದ ಬೊಂಬೆಗಳಿಗೆ ಪ್ರದರ್ಶನದಲ್ಲಿ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಆಟಿಕೆಗಳಿಗೆ ನಿಷೇಧ ಹೇರುವ ಮೂಲಕ ಜಾನಪದ ಲೋಕ ದೇಶಿಕಲಾ ಸಾಂಸ್ಕೃತಿಕ ಕೇಂದ್ರವೆಂಬುದನ್ನು ಸಾಕ್ಷೀಕರಿಸಿದೆ.

ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಜತೆಗೆ ಸಾಂದರ್ಭಿಕ ಅಂಶಗಳನ್ನು ಬೊಂಬೆಗಳಲ್ಲಿ ವ್ಯಕ್ತಪಡಿಸಲಾಗಿದ್ದು, ಇಡೀ ಕುಟುಂಬವನ್ನು ಮನರಂಜಿಸುವುದರೊಂದಿಗೆ ಮರೆಯಾಗುತ್ತಿರುವ ನೈತಿಕ ಮೌಲ್ಯ ಮತ್ತು ದೇಶ ಪ್ರೇಮವನ್ನು ಪುನಶ್ಚೇತನಗೊಳಿಸುವ ನಿಟ್ಟಿಲ್ಲಿ ದಸರಾ ಗೊಂಬೆ ಹಬ್ಬವನ್ನು ಜಾನಪದಲೋಕದಲ್ಲಿ ಏರ್ಪಡಿಸಲಾಗಿದೆ.

ಮೈಸೂರು ಅರಮನೆ, ಕೀಲುಕುದುರೆ, ಹಾವಾಡಿಗ, ದಸರಾ ಗೊಂಬೆಗಳು, ಮದುವೆ, ವಧುವರ, ದಶಾವತಾರ, ರಾಮಾಯಣದ ವಿವಿಧ ದೃಶ್ಯಾವಳಿ, ಸಂಗೀತ ಕಛೇರಿ, ಮಧುಮಕ್ಕಳ ಮೆರವಣಿಗೆ, ಬ್ಯಾಂಡ್ಸೆಟ್, ದೇಶದ ವಿವಿಧ ಬುಡಕಟ್ಟುಗಳ ಮಾದರಿ, ದೇವಾಲಯ, ಲವಕುಶ, ರಾಮಲಕ್ಷ್ಮಣ, ವಿಶ್ವಾಮಿತ್ರ, ಅಹಲ್ಯಾ ಶಾಪ ವಿಮೋಚನೆ, ಆಶ್ರಮದಲ್ಲಿ ಸೀತಾದೇವಿ, ಗೋವರ್ಧನಗಿರಿ ಎತ್ತಿದ ಕೃಷ್ಣ ಮತ್ತು ಪರಿವಾರ, ರಾಮನ ಪಟ್ಟಾಭಿಷೇಕ, ಕರಗ, ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಷಣ್ಮುಗ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಹಣ್ಣು ತರಕಾರಿ, ಮಂತ್ರಾಲಯದ ಗುರುಗಳು ಹೀಗೆ ನಾನಾ ಬಗೆಯ ಗೊಂಬೆಗಳು ಪ್ರವಾಸಿಗರನ್ನು ವಿಶ್ವ ಪ್ರಸಿದ್ಧ ಜಾನಪದ ಲೋಕದತ್ತ ಸೆಳೆಯುತ್ತಿವೆ.

dasara-puppet-are-placed-in-ramanagara

ಇನ್ನು ಬೊಂಬೆ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಿರುವ ಬೊಂಬೆಗಳೆಲ್ಲವೂ ನಮ್ಮ ಪೂರ್ವಿಕರು ಬಳಸಿದ್ದ ಬೊಂಬೆಗಳು ಸಾರ್ವಜನಿಕರ ದೇಣಿಗೆ ರೂಪದಲ್ಲಿ ಬಂದಿರುವ ಅಪರೂಪದ ಕೊಡುಗೆಗಳಾಗಿದ್ದು, ನಮ್ಮ ಪೂರ್ವಿಕರ ಬದುಕಿನ ಜಾನಪದ ಸಂಸ್ಕೃತಿ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಯಶಸ್ವಿಯಾಗಿದೆ. ಪ್ರವಾಸಿಗರು ಜಾನಪದ ಲೋಕಕ್ಕೆ ಬೇಟಿ ನೀಡಿ ಬೊಂಬೆ ಪ್ರದರ್ಶನ ವೈಭವವನ್ನು ಇನ್ನೂ ಒಂದು ತಿಂಗಳ ಕಾಲ ಕಣ್ಣತುಂಬಿಕೊಳ್ಳಬಹುದು.

ವ್ಯರ್ಥವಾಗದ ಜಾನಪದದ ಲೋಕದ ಪ್ರವಾಸ

ಜನಪದರ ಕಲೆ‌, ಸಾಹಿತ್ಯ, ಬದುಕು ಬವಣೆ ಪರಿಚಯಿಸುತ್ತಿರುವ ರಾಮನಗರ ಜಿಲ್ಲೆಯ ಹೆಮ್ಮೆಯ ಜಾನಪದ ಲೋಕ ಸುಮಾರು 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು ಸಂಪೂರ್ಣ ಗ್ರಾಮೀಣ ಪರಿಸರವನ್ನು ಪ್ರತಿಬಿಂಬಿಸುವ ವಸ್ತುಸಂಗ್ರಹಾಲಯ ಮತ್ತು ಸಾಂಸ್ಕ್ರತಿಕ ಲೋಕ. ನಾಗೇಗೌಡರ ಕಠಿಣ ಪರಿಶ್ರಮ, ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸಿ ಸಂರಕ್ಷಿಸಬೇಕೆನ್ನುವ ಮಹದಾಸೆಯಿಂದ 1994 ಮಾರ್ಚ್ 12 ರಂದು ಆರಂಭವಾಯಿತು.

ಕಳೆದ 28 ವರ್ಷಗಳಿಂದ ಜಾನಪದ ಲೋಕವು ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಮಹತ್ತರ ಕಾರ್ಯಗಳನ್ನು ಮಾಡುತ್ತಿದೆ.

ಹಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 56 ಕಿಮಿ. ರಾಮನಗರ ದಿಂದ ಕೇವಲ 6 ಕಿಮೀ ಹಾಗೆಯೆ ಬೊಂಬೆನಾಡು ಚನ್ನಪಟ್ಟಣ ದಿಂದ 6 ಕಿಮೀ ಸನಿಹದಲ್ಲಿರುವ ಜಾನಪದ ಲೋಕದಲ್ಲಿ 1996 ರಲ್ಲಿ ಪ್ರಾರಂಭವಾದ ಗೊಂಬೆ ಪ್ರದರ್ಶನವನ್ನು ನವರಾತ್ರಿಯ ಮೊದಲ ದಿನ ಪ್ರಾರಂಭವಾಗಿ ಒಂದು ತಿಂಗಳು ಬೊಂಬೆ ಪ್ರದರ್ಶನ ಇರುತ್ತದೆ. ಮೈಸೂರು ದಸರಾಗೆ ತೆರಳುವ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಜಾನಪದ ಲೋಕಕ್ಕೆ ಬೇಟಿ ನೀಡಿದರೆ ತಮ್ಮ ಪ್ರವಾಸ ಅವಿಸ್ಮರಣೀಯವಾಗುತ್ತದೆ.

ಜಾನಪದ ಲೋಕಕ್ಕೆ ಕಾಲಿಟ್ಟರೆ ಲೋಕ ಪರಿಸರ ಪ್ರವಾಸಿಗರ ಮನಸ್ಸು ಶಾಂತಗೊಳಿಸಿ ಎಲ್ಲಾ ಒತ್ತಡಗಳನ್ನು ದೂರ ಮಾಡುತ್ತದೆ . ಇನ್ನೂ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕೂಡ ಆಗುತ್ತದೆ. ಗ್ರಾಮೀಣ ಬದುಕಿನ ಸೂಗಡು, ಆಚಾರ, ವಿಚಾರ, ಜನಪದ ಸಂಸ್ಕ್ರತಿಯ ಪರಿಚಯವನ್ನು ಮಕ್ಕಳಿಗೆ ತಿಳಿಸುವ ಜಾನಪದ ಲೋಕದ ಪ್ರವಾಸ ವ್ಯರ್ಥವಾಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+