ಡಿ.ಕೆ.ಶಿವಕುಮಾರ್ ಜೈಲು ವಾಸಕ್ಕೆ ಕಾರಣ ಬಿಚ್ಚಿಟ್ಟ ತಮ್ಮ ಡಿ.ಕೆ.ಸುರೇಶ್

ಬೆಂಗಳೂರು, ಸೆಪ್ಟೆಂಬರ್ 28: ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ (ಇಡಿ) ಇಂದ ಬಂಧಿತರಾಗಿ ಪ್ರಸ್ತುತ ತಿಹಾರ್ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ.

ಸೆಪ್ಟೆಂಬರ್ 3 ರಂದು ಬಂಧನಕ್ಕೆ ಒಳಗಾದ ಡಿ.ಕೆ.ಶಿವಕುಮಾರ್ ಅವರಿಗೆ ಈವರೆಗೆ ಜಾಮೀನು ದೊರೆತಿಲ್ಲ, ಇನ್ನೂ ಹಲವು ದಿನಗಳು ಜಾಮೀನು ದೊರೆಯುವುದು ಅನುಮಾನವೇ ಆಗಿದೆ. ಇಷ್ಟು ದಿನಗಳು ಅಣ್ಣನ ಜೊತೆಯಲ್ಲಿಯೇ ಇದ್ದ ಡಿ.ಕೆ.ಸುರೇಶ್ ಅಣ್ಣನ ಇಂದಿನ ಸ್ಥಿತಿಗೆ ಕಾರಣವೇನು ಎಂದು ಬಹಿರಂಗವಾಗಿ ಹೇಳಿದರು.

ಇಂದು ಕನಕಪುರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಸುರೇಶ್ ಅವರು, ''ಕೊನೆಯ ವಾರ್ನಿಂಗ್ ನಿನಗೆ ಬಿಜೆಪಿಗೆ ಬಾ'' ಎಂದು ಡಿ.ಕೆ.ಶಿವಕುಮಾರ್ ಗೆ ಎಚ್ಚರಿಕೆ ಬಂದಿತ್ತು, ಆದರೆ ಅವರು ಪಕ್ಷ ತೊರೆದು ಹೋಗಲಿಲ್ಲ, ಅದೇ ಅವರ ಇಂದಿನ ಸ್ಥಿತಿಗೆ ಕಾರಣವಾಯಿತು' ಎಂದು ಹೇಳಿದ್ದಾರೆ.

D.K.Shivakumar Is In Jail Becuase Of BJPs Bad Politics: DK Suresh

ಆ ಮೂಲಕ ಬಿಜೆಪಿಗರ ದ್ವೇಷ ರಾಜಕಾರಣದಿಂದಲೇ ಡಿ.ಕೆ.ಶಿವಕುಮಾರ್ ಅವರು ಜೈಲು ಸೇರಿದ್ದಾರೆಂದು, ಡಿ.ಕೆ.ಶಿವಕುಮಾರ್ ಜೈಲು ವಾಸದ ಹಿಂದೆ ಬಿಜೆಪಿ ಕೈವಾಡವಿದೆಯೆಂದು ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ಈ ಮಾತನ್ನು ಈ ಹಿಂದೆಯೂ ಅವರು ಹೇಳಿದ್ದರು.

'ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ವಿರುದ್ಧ ಊಹಾಪೋಹದ ಸುದ್ದಿಗಳನ್ನು ಪ್ರಕಟಿಸಿವೆ, ನಮ್ಮ ತೇಜೋವಧೆಗೆ ಪ್ರಯತ್ನಿಸಿವೆ ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ' ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

'ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರದ ಕಪಿಮುಷ್ಠಿಯಲ್ಲಿದೆ. ದೇಶವನ್ನೇ ಅದರ ಹಿಡಿತದಲ್ಲಿದೆ. ನಮಗೆ ನ್ಯಾಯಾಲಯದ ಮೇಲೆ ಮಾತ್ರವೇ ನಂಬಿಕೆ ಇದ್ದು ಶೀಘ್ರವೇ ಜಾಮೀನು ದೊರಕುವ ವಿಶ್ವಾಸವಿದೆ' ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+