• search

ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು

By ನಮ್ಮ ಪ್ರತಿನಿಧಿ
Subscribe to Oneindia Kannada
For ramanagara Updates
Allow Notification
For Daily Alerts
Keep youself updated with latest
ramanagara News

  ರಾಮನಗರ, ನವೆಂಬರ್ 05:ನನ್ನ ವಿರುದ್ಧ ಷಡ್ಯಂತ್ರ ಮಾಡುವ ಬದಲು ಡಿಕೆಶಿ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಅವರು ಬಹಿರಂಗ ಸವಾಲು ಹಾಕಿದ್ದಾರೆ.

  ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಸಿಪಿ ಯೋಗೇಶ್ವರ್

  ಕಾಂಗ್ರೆಸ್ ಹಾಗೂ ಜೆಡಿಎಸ್ಹೊಂದಾಣಿಕೆ ಮಾಡಿಕೊಳ್ಳುವ ಬದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಾಗಲಿ, ಸಚಿವ ಡಿ.ಕೆ.ಶಿವಕುಮಾರ್‌ಅವರಾಗಲಿ, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿರವರಾಗಲಿ ನೇರವಾಗಿ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಯೋಗೇಶ್ವರ್ ಹೇಳಿದರು.

  ಕೆಲದಿನಗಳ ಹಿಂದೆ ಜೆಡಿಎಸ್ ರಾಜ್ಯಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಇಂದನ ಸಚಿವ ಡಿ.ಕೆ.ಶಿವಕುಮಾರ ಭೇಟಿಯಾಗಿದ್ದರು.
  ಕೆಲ ಮಾದ್ಯಮಗಳಲ್ಲಿ ಚನ್ನಪಟ್ಟಣದಲ್ಲಿ ಸಿಪಿವೈ ಮಣಿಸಲು ಕಾಂಗೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಸುದ್ದಿ ಪ್ರಸಾರ ಮಾಡಿದ್ದವು.

  ಈ ಬಗ್ಗೆಪ್ರತಿಕ್ರಿಯಿಸಿದ ಶಾಸಕ ಸಿ.ಪಿ.ಯೋಗೇಶ್ವರ್ ತಾಲೂಕಿನಲ್ಲಿ ಹಲವು ವರ್ಷಗಳಿಂದ ಹೊಂದಾಣಿಕೆ ರಾಜಕಾರಣ ನಡೆಯುತ್ತಲೇ ಬಂದಿದೆ. ತಾವು ಕಾಂಗ್ರೆಸ್ ಬಿಟ್ಟು ಪಕ್ಷೇತರ, ಬಿಜೆಪಿ, ಸಮಾಜವಾದಿ ಪಕ್ಷದಿಂದ ಎದುರಿಸಿದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಇದಕ್ಕೆ ಉದಾಹರಣೆಯಾಗುತ್ತವೆ ಎಂದು ಹೇಳಿದರು.

  20 ವರ್ಷಗಳ ರಾಜಕಾರಣದಲ್ಲಿದ್ದೇನೆ

  20 ವರ್ಷಗಳ ರಾಜಕಾರಣದಲ್ಲಿದ್ದೇನೆ

  ಕಳೆದ 20 ವರ್ಷಗಳ ರಾಜಕಾರಣದಲ್ಲಿ ತಾಲೂಕಿನ ಅಭಿವೃದ್ಧಿಗೆ ಯಾರು ಶ್ರಮಿಸಿದ್ದಾರೆ. ಯಾರು ನಿಜವಾದ ಜನಸೇವಕ ಎಂಬುದು ತಾಲೂಕಿನ ಮತದಾರನಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ನನಗೆ ಯಾವುದೇ ಅಳುಕಿಲ್ಲ, ಯಾವುದೇ ಹೊಂದಾಣಿಕೆಯ ಭಯವಿಲ್ಲ ಡಿ.ಕೆ.ಶಿವಕುಮಾರ ಆಥವಾ ರಾಜ್ಯ ನಾಯಕರು ಬಂದು ಸ್ಪರ್ಧೆ ಮಾಡಿದರು ತಾಲೂಕಿನ ಜನ ನನ್ನನ್ನು ಕೈಬಿಡುವುದಿಲ್ಲ ಎಂದು ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

  ಎಂ.ಎಲ್.ಸಿ ಪುಟ್ಟಣ್ಣ ಚಿತ್ತ ಬಿಜೆಪಿಯತ್ತ

  ಎಂ.ಎಲ್.ಸಿ ಪುಟ್ಟಣ್ಣ ಚಿತ್ತ ಬಿಜೆಪಿಯತ್ತ

  ಇನ್ನು ಚನ್ನಪಟ್ಟಣ ಹೂರಭಾಗದ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಬೇಟಿಯಾದ ಬಗ್ಗೆ ಮಾಹಿತಿ ನೀಡಿದ ಶಾಸಕ ಸಿ.ಪಿ.ಯೋಗೇಶ್ವರ್, ನಾನು ಪುಟ್ಟಣ್ಣ ಬಾಲ್ಯ ಸ್ನೇಹಿತರು ಈಗಾಗಲೇ ಪುಟ್ಟಣ್ಣ ಭಾವನಾತ್ಮಕವಾಗಿ ಜೆಡಿಎಸ್ ನಿಂದ ಹೊರಬಂದಿದ್ದಾರೆ. ನಾವಿಬ್ಬರು ಇಂದು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಾವು ಕೂಡ ತಂತ್ರಗಾರಿಕೆ ರೂಪಿಸಿದ್ದೇವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕೀಯಕ್ಕೆ ಪೆಟ್ಟು ನೀಡುತ್ತೇವೆ. ಪುಟ್ಟಣ್ಣ ನನ್ನೂಡನೆ ಸಂಪರ್ಕದಲ್ಲಿದ್ದಾರೆ ಸೂಕ್ತ ಸಮಯದಲ್ಲಿ ಬಿಜೆಪಿ ಸೇರುತ್ತಾರೆ ಎಂದರು

  ಪಕ್ಷಾಂತರ ಸುನಾಮಿ ಮುಂದಿದೆ

  ಪಕ್ಷಾಂತರ ಸುನಾಮಿ ಮುಂದಿದೆ

  ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬಲ ಕಡಿಮೆ ಇದೆ ನಿಜ ಆದರೆ ಚುನಾವಣೆ ವೇಳೆಗೆ ಸಂಘಟನೆ ಮಾಡಿ ಪಕ್ಷವನ್ನು ಬಲಿಷ್ಟಗೊಳಿಸುತ್ತೇವೆ. ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು. ಬಹುಶಃ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶಕ್ಕೆ ಹಲವರು ಕಾಯುತ್ತಿದ್ದಾರೆ. ಚುನಾವಣಾ ನಂತರ ಹಳೆ ಮೈಸೂರು ಭಾಗದ ಪ್ರಮುಖರು ಸುನಾಮಿ ರೀತಿಯಲ್ಲಿ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದರು.

  ಬಿಜೆಪಿಗೆ ಮತ್ತೆ ಮರಳಿರುವ ಯೋಗೇಶ್ವರ

  ಬಿಜೆಪಿಗೆ ಮತ್ತೆ ಮರಳಿರುವ ಯೋಗೇಶ್ವರ

  ನವಕರ್ನಾಟಕ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಯೋಗೇಶ್ವರ್ ಹಾಗೂ ಕುಡಚಿಯ ಬಿಎಸ್ಆರ್ ಕಾಂಗ್ರೆಸ್ಸಿನ ಶಾಸಕ ರಾಜೀವ್ ಅವರು ಬಿಜೆಪಿ ಸೇರಿದರು. 2013ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸಮಾಜವಾದಿ ಪಕ್ಷ ಸೇರಿ ಶಾಸಕರಾದರು. 2014ರಲ್ಲಿ ಸಮಾಜವಾದಿ ಪಕ್ಷ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಈಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಮತ್ತೆ ಮರಳಿದ್ದಾರೆ.

  ಇನ್ನಷ್ಟು ರಾಮನಗರ ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  BJP new joinee CP Yogeshwar has challenged Energy minister DK Shivakumar to contest against him in the upcoming Assembly Election. Channapatna MLA CP Yogeshwar said DK Shivakumar is doing conspiracy, instead he can directly enter the election battle field against me.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more