ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಡಿ ತನಿಖೆಯಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ: ಡಿ.ಕೆ. ಶಿವಕುಮಾರ್

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಜುಲೈ 28: ಇಡಿ ತನಿಖೆಯಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ. ನಾನು ತಪ್ಪು ಮಾಡಿಲ್ಲ ಹಾಗಾಗಿ ತಾಯಿ ಚಾಮುಂಡೇಶ್ವರಿ ಕಾಪಾಡುತ್ತಾಳೆ. ನಾಳೆ ಶುಕ್ರವಾರ ಬೆಳಿಗ್ಗೆ ದೆಹಲಿಗೆ ಮರಳುತ್ತಿದ್ದೇನೆ. ಇಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದೇ 31 ರ ಭಾನುವಾರ ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ಐತಿಹಾಸಿಕ 68 ಅಡಿ ಪಂಚ ಲೋಹದ ಶ್ರೀ ಚಾಮುಂಡೇಶ್ವರಿ ತಾಯಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಹೋಮ ಪೂಜೆಯಲ್ಲಿ ಪಾಲ್ಗೊಂಡು, ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಡಿ ವಿಚಾರಣೆಯಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

6 ವರ್ಷಕ್ಕೆ ಒಂದನೇ ತರಗತಿ: ಸರ್ಕಾರದ ಗೊಂದಲದ ನಿರ್ಧಾರಕ್ಕೆ ಕಾಂಗ್ರೆಸ್ ಗರಂ 6 ವರ್ಷಕ್ಕೆ ಒಂದನೇ ತರಗತಿ: ಸರ್ಕಾರದ ಗೊಂದಲದ ನಿರ್ಧಾರಕ್ಕೆ ಕಾಂಗ್ರೆಸ್ ಗರಂ

ಜುಲೈ 30 ರಂದು ಇಡಿ ವಿಚಾರಣೆ ಇದೆ ಹಾಗಾಗಿ ನಾನು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ನನ್ನನ್ನು ಇಡಿ ತನಿಖೆಯಲ್ಲಿ ಸಿಲುಕಿಸಲು ಹಲವಾರು ಪ್ರಯತ್ನಿಸುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದರೆ ಈ ತಾಯಿ ನನ್ನನ್ನು ರಕ್ಷಿಸುತ್ತಾಳೆ. ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ. ನನ್ನನ್ನು ಸಿಲುಕಿಸಲು ಸಂಚು ಮಾಡುತ್ತಿದ್ದಾರೆ. ಆ ಬಗ್ಗೆ ನಿಧಾನವಾಗಿ ಮಾತನಾಡುತ್ತೇನೆ‌ ಎಂದರು.

ಪ್ರವೀಣ್ ಕೊಲೆ: ಪಿಎಫ್ಐ ಬ್ಯಾನ್ ಬಗ್ಗೆ ಕೇಂದ್ರದ ಜೊತೆ ಚರ್ಚೆ- ಜೋಶಿಪ್ರವೀಣ್ ಕೊಲೆ: ಪಿಎಫ್ಐ ಬ್ಯಾನ್ ಬಗ್ಗೆ ಕೇಂದ್ರದ ಜೊತೆ ಚರ್ಚೆ- ಜೋಶಿ

ಸೋನಿಯಾ ಗಾಂಧಿಯನ್ನೆ ಬಿಟ್ಟಿಲ್ಲ, ನನ್ನ ಬಿಡ್ತಾರಾ?

ಸೋನಿಯಾ ಗಾಂಧಿಯನ್ನೆ ಬಿಟ್ಟಿಲ್ಲ, ನನ್ನ ಬಿಡ್ತಾರಾ?

" ಕೆಲವರು ಕೆಲವನ್ನು ಆಸೆ ಪಡುತ್ತಿದ್ದಾರೆ, ಸ್ವಪಕ್ಷಿಯರೋ ವಿರೋಧ ಪಕ್ಷದವರೋ ಎಂಬುದನ್ನು ಮುಂದೆ ಮಾತನಾಡುತ್ತೇನೆ. ಆಗಸ್ಟ್ ತಿಂಗಳ ಮೊದಲೇ ನನಗೆ ಖೆಡ್ಡ ತೋಡುತ್ತಿದ್ದಾರೆ ಎಂದು ನೀವೇ ಹೇಳಿಕೆ ನೀಡಿರಿ ಎಂದ ಮಾಧ್ಯಮದವರ ಪ್ರಶ್ನೆಗೆ " ಹೌದು ಖೆಡ್ಡಕ್ಕೆ ಕೆಡವಲು ಎಲ್ಲಾ ರೀತಿ ಸಂಚು ನಡೆಯುತ್ತಿದೆ. ಇಡಿ ಸಂಚಿನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೇ ಬಿಡುತ್ತಿಲ್ಲ. ಇನ್ನು ನನ್ನನ್ನು ಬಿಡುತ್ತಾರೆಯೇ?" ಎಂದು ಮಾಧ್ಯಮದವರನ್ನೇ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ

ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ

" ಚಾಮುಂಡೇಶ್ವರಿ ತಾಯಿ, ಎಲ್ಲಾ ನನ್ನ ವೈರಿಗಳು ನನಗೆ ಮಾಡುತ್ತಿರುವ ತೊಂದರೆ ದೂರ ಮಾಡು. ಎಲ್ಲರ ದುಃಖ ದೂರ ಮಾಡು, ದುರ್ಗಾದೇವಿಯ ಸ್ವರೂಪಿಯಾದ ಚಾಮುಂಡೇಶ್ವರಿ ತಾಯಿ ಈ ಭಾಗದ ಜನರಿಗೆ ನೆಮ್ಮದಿ ಶಾಂತಿ ಸಿಗಲಿ. ಒಳ್ಳೆಯ ಮಳೆ, ಬೆಳೆ ಹಾಗೂ ಜ್ಞಾನ ಸಿಗಲಿ. ಯಾರಿಗೂ ಅನ್ಯಾಯ ಆಗಬಾರದು, ನ್ಯಾಯ ದೊರಕಿಸಿ ಕೊಡು ಎಂದು ಪ್ರಾರ್ಥಿಸಿದೆ"ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾನೂನು ಬಳಸಿ ಶಿಕ್ಷೆ ವಿಧಿಸಿ

ಕಾನೂನು ಬಳಸಿ ಶಿಕ್ಷೆ ವಿಧಿಸಿ

ಅವರು ಜನೋತ್ಸವ ಮಾಡುವ ಅಗತ್ಯ ಇಲ್ಲ ಎಂದು ಮೊದಲೇ ಹೇಳಿದ್ದೆ. ರದ್ದು ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಯಾವುದೇ ಪಕ್ಷದ ಯುವಕರಾದರೂ ಈ ರೀತಿ ಕಗ್ಗೊಲೆ ಆಗಬಾರದು. ಕಾರ್ಯಕರ್ತರ ನೋವಿನ ಬಗ್ಗೆ ನಮಗೆ ಅರಿವಿದೆ. ಈ ಪ್ರಕರಣ ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಎಲ್ಲಾ ಕಾನೂನು ಬಳಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಯಾವುದೇ ಪಕ್ಷ, ಯಾವುದೇ ಧರ್ಮದವರಾದರೂ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.

ಸಾವಿನ ವಿಚಾರದಲ್ಲಿ ರಾಜಕಾರಣ ಬೇಡ

ಸಾವಿನ ವಿಚಾರದಲ್ಲಿ ರಾಜಕಾರಣ ಬೇಡ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ನಾಯಕ ನಳಪಾಡ್ ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿಯವರಿಗೆ ಜನಪರ ಕೆಲಸ ಮಾಡೋಕೆ ಬರೋದಿಲ್ಲ. ಯುವಕರ ಜೀವನದ ಬಗ್ಗೆ ಕಾಳಜಿ ಇಲ್ಲ. ಅದು ಬಿಜೆಪಿಯವರಾಗಲಿ, ಕಾಂಗ್ರೆಸ್​ನವರಾಗಲಿ, ಎಸ್​ಡಿಪಿಐ ಆಗಲಿ. ಯಾವುದೇ ಯುವಕನ ಜೀವನ ಹಾಳು ಮಾಡಬಾರದು. ಯುವಕರ ಸಾವಿನಲ್ಲಿ ರಾಜಕಾರಣ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅವರನ್ನು ಬಂಧಿಸಿ ಒಳಗೆ ಹಾಕಬೇಕು ಎಂದರು.

ಆರೋಪಿಗಳನ್ನು ಎನ್‌ಕೌಂಟರ್ ಮಾಡುವ ವಿಚಾರವಾಗಿ ಅದರ ಬಗ್ಗೆ ನಾನೇನು ಮಾತನಾಡಲು ಬರುವುದಿಲ್ಲ. ಕಾನೂನು ಬದ್ಧವಾಗಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡಲಿ. ಯುವಕರ ಜೀವನ ಸೇಫ್ ಇಲ್ಲ. ಅಧಿಕಾರ ಇರುವ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಇನ್ನು ಸಾಮಾನ್ಯರಿಗೆ ರಕ್ಷಣೆ ಸಿಗುತ್ತಾ? ಎಂದು ನಲಪಾಡ್​ ಪ್ರಶ್ನಿಸಿದರು.

English summary
KPCC president DK Shivakumar has alleged that there is a conspiracy to fix him in a ED case. Ex Minister will be facing ED questioning on July 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X