ಹಿರಿಯ ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜು ವಿಧಿವಶ

ರಾಮನಗರ, ಡಿ. 03: ರಾಜಕಾರಣಿ ಹಾಗೂ ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷದ ಸಿಂ.ಲಿಂ.ನಾಗರಾಜು ಅವರಿಗೆ ವಜ್ರಮಹೋತ್ಸದ ತಯಾರಿಯಲ್ಲಿದ್ದ ಅಭಿಮಾನಿಗಳಿಗೆ ಇದು ಆಘಾತ ನೀಡಿದೆ.

ಮಾಜಿ ಪ್ರಧಾನಿ ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜು ಅವರು, ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದರು. 2011ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿದ್ದರು. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದ್ದರು. ಅವರು ನಿಕಟಪೂರ್ವ ಕಸಾಪ ಜಿಲ್ಲಾ ಅಧ್ಯಕ್ಷರಾಗಿದ್ದರು.

ಹಿರಿಯ ಜೆಡಿಎಸ್​ ನಾಯಕ ಸಿಂ.ಲಿಂ.ನಾಗರಾಜು ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

Channapatnas senior JDS leader Nagaraju died

"ಚನ್ನಪಟ್ಟಣದ ಜೆಡಿಎಸ್​ ಪಕ್ಷದ ಹಿರಿಯ ಮುಖಂಡರು, ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ಶ್ರೀ ಸಿಂ.ಲಿಂ.ನಾಗರಾಜು ಅವರು ವಿಧಿವಶರಾಗಿರುವುದು ಬಹಳ ದುಃಖ ಉಂಟು ಮಾಡಿದೆ. ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜು ಅವರು ಪಕ್ಷ ನಿಷ್ಠೆಯ ಪ್ರತೀಕವಾಗಿದ್ದರು" ಎಂದಿದ್ದಾರೆ.

"ಪಂಚರತ್ನ ರಥಯಾತ್ರೆಯಲ್ಲಿದ್ದ ನನಗೆ ವಿಷಯ ತಿಳಿಯಿತು. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂಡು ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಿಂ.ಲಿಂ.ನಾಗರಾಜು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಸಂತಾಪ‌ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+