CP Yogeshwar: ಚನ್ನಪಟ್ಟಣ ಉಪಚುನಾವಣೆ ಬೆಟ್ಟಿಂಗ್: ಸಿಪಿ ಯೋಗೇಶ್ವರ್ ಸೋಲಿನ ಸಂಶಯದ ಹಿಂದೆ ಬೆಟ್ಟಿಂಗ್ ಸ್ಟ್ರಾಟಜಿ!
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್‌ಗೆ ಕಾಡುತ್ತಿದೆ ಸೋಲಿನ ಸಂಶಯ. ಚುನಾವಣೆ ನಡೆದ ದಿನ ಗೆಲುವು ನಮ್ಮದೇ ಅಂತಿದ್ದ ಸಿಪಿವೈ ಈಗ ಸಂಶಯ ವ್ಯಕ್ತಪಡಿಸಿದ್ದು ಯಾಕೆ? ಬೂತ್ ವೈಸ್ ಮಾಹಿತಿ ಪಡೆದುಕೊಂಡ್ರಾ ಸಿಪಿ ಯೋಗಿಶ್ವರ್? ಅಥವಾ ಬೆಟ್ಟಿಂಗ್ ಸ್ಟ್ರಾಟರ್ಜಿ ಮಾಡಿದ್ರಾ? ಜಮೀರ್ ಆ ಒಂದು ಹೇಳಿಕೆ ಡ್ಯಾಮೇಜ್ ಎಂಥದ್ದು?
ಚನ್ನಪಟ್ಟಣದಲ್ಲಿ ಮತದಾನ ಮುಗಿದೆ. ಮತಗಳ ಅಂದಾಜು ಸಿಕ್ಕಿದೆ. ಆದರೆ ಚನ್ನಪಟ್ಟಣದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಚನ್ನಪಟ್ಟದ ಗೊಂಬೆಯಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚನ್ನಪಟ್ಟದಲ್ಲಿ ಫಲಿತಾಂಶ 50-50 ಆಗಬಹುದು ಎನ್ನಲಾಗುತ್ತಿದೆ. ಯಾರು ಗೆಲ್ಲುತ್ತಾರೆ ಅಂತ ಹೇಳುವುದು ಕೂಡ ಕಷ್ಟ ಅಂತ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಆದರೆ ಸಿಪಿ ಯೋಗೇಶ್ವರ್ ಮಾತ್ರ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.

ಬುಧವಾರವಷ್ಟೇ ಚನ್ನಪಟ್ಟಣದಲ್ಲಿ ಮತದಾನ ಪೂರ್ಣಗೊಂಡ ನಂತರ ಈ ಬಾರಿ ಗೆಲುವು ನಮ್ಮದೇ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದ ಸಿಪಿ ಯೋಗೇಶ್ವರ್, ಗುರುವಾರ ದಿಢೀರ್ ಅಂತ ಪ್ರೆಸ್ ಪೀಟ್ ಮಾಡಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸಿಪಿ ಯೋಗೇಶ್ವರ್, ಮೈತ್ರಿ ಸರ್ಕಾರದಿಂದ ಒಂದಿಷ್ಟು ಅನುಕೂಲಗಳು ಆಗಿವೆ. ಟಫ್ ಫೈಟ್ ಇದೆ ಗೆಲ್ಲುವುದು ಕಷ್ಟ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ.
ಇದರಿಂದಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಮಂಕಾಗುವಂತೆ ಮಾಡಿದೆ. ಇನ್ನೂ ಚನ್ನಪಟ್ಟಣದಲ್ಲಿ ಯಾಕೆ ಹಿನ್ನಡೆಯಾಯ್ತು? ಎಲ್ಲಿ ಹಿನ್ನಡೆಯಾಯ್ತು? ಅನ್ನೋದರ ಬಗ್ಗೆ ವಿವರಣೆ ನೀಡಿರುವ ಸಿಪಿವೈ ಜಮೀರ್ ಅವರ ಹೇಳಿಕೆ ಸ್ವಲ್ಪ ಹೊಡೆತ ಕೊಟ್ಟಿತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟುದಿನ ಗೆಲುವಿನ ವಿಶ್ವಾಸದಲ್ಲಿದ್ದ ಸಿಪಿವೈ ಈಗ ಸಂಶಯವನ್ನು ವ್ಯಕ್ತಪಡಿಸಿರುವುದು ಸ್ವಪಕ್ಷದವರನ್ನ ಯೋಚಿಸುವಂತೆ ಮಾಡಿದೆ.

ಟಿಕೆಟ್ ಘೋಷಣೆಗೂ ಮುನ್ನವೇ ಚನ್ನಪಟ್ಟಣದಲ್ಲಿ ಅತಿ ಹೆಚ್ಚಾಗಿ ಕೇಳಿ ಬಂದಿದ್ದು ಸಿಪಿ ಯೋಗೇಶ್ವರ್ ಅವರ ಹೆಸರು. ಹೀಗಾಗಿ ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಟ್ಟರೆ ಚನ್ನಪಟ್ಟನದಲ್ಲಿ ಗೆಲುವುದು ಖಚಿತ ಅಂತ ಕಾಂಗ್ರೆಸ್ ಅಂದುಕೊಂಡಿತ್ತು. ಯಾವಾಗ ಸಿಪಿ ಯೋಗೇಶ್ವರ್ ಅವರಿಗೆ ಮೈತ್ರಿ ಪಕ್ಷದಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವ ವಿಚಾರ ಗೊತ್ತಾಗಿತ್ತೋ ಆಗ ಡಿಕೆ ಶಿವಕುಮಾರ್ ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷದತ್ತ ಕರೆತರುವಲ್ಲಿ ಯಶಸ್ವಿಯಾಗಿದರು. ಹಾಗೇ ಟಿಕೆಟ್ ಕೂಡ ನೀಡಿದರು. ಅತ್ತ ಮೈತ್ರಿ ಅಭ್ಯರ್ಥಿ ಯಾರೇ ನಿಲ್ಲಲ್ಲಿ ಗೆಲ್ಲುವುದು ಸಿಪಿ ಯೋಗೇಶ್ವರ್ ಅಂತ ನಂಬಲಾಗಿತ್ತು.
ಕೈತಪ್ಪಿದ ಒಕ್ಕಲಿಗ ಮತಗಳು..
ಸಿಪಿವೈ ಚನ್ನಪಟ್ಟಣದಲ್ಲಿ ಈಗಾಗಲೇ ಎರಡು ಬಾರಿ ಸೋತಿರುವುದರಿಂದ ಅನುಕಂಪದ ಅಲೆಯಲ್ಲಿ ಗೆಲ್ತಾರೆ ಅಂತ ಕ್ಷೇತ್ರದಲ್ಲಿ ಗುಲ್ಲೆಬ್ಬಿತ್ತು. ಇನ್ನೂ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆದ ನಂತರವಂತೋ ಸಿಪಿ ಯೋಗೇಶ್ವರ್ ಗೆಲುವು ಖಚಿತ ಅಂತಲೇ ಹೇಳಲಾಗಿತ್ತು. ಆದರೆ ಈಗ ಲೆಕ್ಕಾಚಾರಗಳೇ ತಲೆ ಕೆಳಗಾಗಿವೆ. ಸ್ವತ: ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೆಶ್ವರ್ ಅವರೇ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಜಮೀರ್ ಅವರು ಹೆಚ್‌ಡಿ ಕುಮಾರಸ್ವಾಮಿ ಅವರನ್ನು' ಕರಿಯಾ' ಎಂದಿದ್ದಕ್ಕೆ ಬರಬೇಕಿದ್ದ ಮತಗಳು ಕೈ ತಪ್ಪಿ ಹೋಗಿವೆ. ಚನ್ನಪಟ್ಟಣದಲ್ಲಿ ಹೆಚ್‌ಡಿ ದೇವೇಗೌಡ ದೈತ್ಯ ಶಕ್ತಿ. ಅವರನ್ನು ಬೈದರೆ ಅವರ ಸಮುದಾಯದವರು ಸಹಿಸುವುದಿಲ್ಲ. ಹೀಗಾಗಿ ಜಮೀರ್ ಹೇಳಿಕೆಯಿಂದ ಬರಬೇಕಿದ್ದ ಮತಗಳು ಕೈ ತಪ್ಪಿವೆ. ಹೀಗಾಗಿ ಒಕ್ಕಲಿಗ ಮತಗಳು ಛಿದ್ರವಾಗಿವೆ. ನಮ್ಮನ್ನು ಇನ್ನೂ ಕೂಡ ಜನ ಒಕ್ಕಲಿಗರು ಎಂದು ಒಪ್ಪಿಲ್ಲ. ಆದರೂ ಕೂಡ ನಾವು ಉತ್ತಮ ಹೋರಾಟ ಮಾಡಿದ್ದೇವೆ ಎಂದು ಸಿಪಿವೈ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಬೆಟ್ಟಿಂಗ್ ಭರಾಟೆ
ಆದರೆ ಸಿಪಿ ಯೋಗೇಶ್ವರ್ ಅವರು ಸೋಲಿನ ಸಂಶಯದ ಹಿಂದೆ ಬೇರೆಯದ್ದೇ ಕಾರಣ ಇದೆ ಎಂದು ಅವರನ್ನು ಬಲ್ಲವರು ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಚುನಾವಣೆ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದೆ. ಹೇಳಿ ಕೇಳಿ ಚನ್ನಪಟ್ಟಣದಲ್ಲಿ ಚುನಾವಣೆ ಬಂದರೆ ಬಾಜಿ ಕಟ್ಟುವುದು ಜೋರಾಗಿರುತ್ತದೆ. ತಮ್ಮ ನಾಯಕ ಗೆಲ್ತಾರೆ ಅಂತ ಮನೆ ಆಸ್ತಿಗಳನ್ನು ಅಡವಿಟ್ಟುಬಿಡ್ತಾರೆ ಜನ. ಲಕ್ಷ ಲಕ್ಷ ಬಾಜಿ ಕಟ್ಟುತ್ತಾರೆ. ಈಗಾಗಲೆ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಡುವೆ ಟಫ್ ಫೈಟ್ ಇರುವುದರಿಂದ ಮತದಾನ ಮುಗಿದಾಗಿನಿಂದಲೇ ಬೆಟ್ಟಿಂಗ್ ಶುರುವಾಗಿದೆ ಅನ್ನೋ ಮಾಹಿತಿ ಇದೆ.
ಕಾಂಗ್ರಸ್ ಕಾರ್ಯಕರ್ತರು ಬೆಟ್ಟಿಂಗ್ ಭರಾಟೆಯಲ್ಲಿ ಹಣ ಹಾಕುತ್ತಿದ್ದು ಮನೆ ಮನೆಗಳಲ್ಲಿ ಬಾಜಿ ಜೋರಾಗಿದೆ. ಡಿಕೆ ಎದುರಾಳಿಗಳೇ ಬೆಟ್ಟಿಂಗ್‌ಗೆ ಆಹ್ವಾನ ಮಾಡುತ್ತಿದ್ದಾರಂತೆ. ಹೀಗಾಗಿ ಬಾಜಿ ಕಟ್ಟಿ ಮನೆ ಆಸ್ತಿ ಕಳೆದುಕೊಳ್ಳಬಹುದು ಎನ್ನುವ ಕಾಳಜಿಯಿಂದ ಸಿಪಿ ಯೋಗೇಶ್ವರ್ ಅವರು ಮುಂಚಿತವಾಗಿ ಈ ಮಾತನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಬಾಜಿ ಕಟ್ಟಿ ಜನ ಆಸ್ತಿ ಮನೆ ಕಳೆದುಕೊಳ್ಳುವ ಕಾಳಜಿಯಿಂದ ಸಿಪಿ ಯೋಗೇಶ್ವರ್ ಅವರು ಸುದ್ದಿಗೋಷ್ಟಿಯಲ್ಲಿ ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ಹೇಳಿಕೊಂಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications