ಬಿಜೆಪಿಯು ಜೆಡಿಎಸ್ ಶಾಸಕರಿಗೆ 10 ಕೋಟಿ ಆಮೀಷ ಒಡ್ಡಿದೆ: ಕುಮಾರಸ್ವಾಮಿ
Recommended Video
ರಾಮನಗರ, ಜೂನ್ 18: ಕರ್ನಾಟಕ ಬಿಜೆಪಿಯು ಜೆಡಿಎಸ್ ಶಾಸಕರಿಗೆ ಕರೆ ಮಾಡಿ 10 ಕೋಟಿ ರೂಪಾಯಿ ಆಮೀಷ ಒಡ್ಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿಯವರು ನಮ್ಮ ಜೆಡಿಎಸ್ ಶಾಸಕರಿಗೆ ಕರೆ ಮಾಡಿ, 'ನಮ್ಮ ಪಕ್ಷಕ್ಕೆ ಬನ್ನಿ ನಿಮಗೆ 10 ಕೋಟಿ ಕೊಡುತ್ತೇನೆ' ಎಂದು ಹೇಳಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಆರೋಪ ಮಾಡಿದ್ದು, ಬಿಜೆಪಿಯ ಆಪರೇಷನ್ ಕಮಲ ಇನ್ನೂ ನಿಂತಿಲ್ಲವೆಂಬುದ ಅನುಮಾನ ಮತ್ತೆ ಶುರುವಾಗಿದೆ.

ನಿನ್ನೆ ರಾತ್ರಿ ಜೆಡಿಎಸ್‌ನ ಶಾಸಕರಿಗೆ ಬಿಜೆಪಿ ಮುಖಂಡರು ಕರೆ ಮಾಡಿ, ಈಗಾಗಲೇ ಕಾಂಗ್ರೆಸ್-ಜೆಡಿಎಸ್‌ನ ಹತ್ತು ಶಾಸಕರು ನಮ್ಮ ಕಡೆ ಬಂದಿದ್ದಾರೆ, ನೀವು ಬರುವುದಾದರೆ 10 ಕೋಟಿ ಹಣವನ್ನು ನೀವು ಕೇಳಿದ ಕಡೆಗೆ ತಂದು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಗುಟ್ಟು ಬಯಲು ಮಾಡಿದ್ದಾರೆ.
ಹಣದ ಥೈಲಿ ಹಿಡಿದುಕೊಂಡು ಈ ಸರ್ಕಾರವನ್ನು ಉರುಳಿಸಲು ಕೂತಿದ್ದಾರೆ, ಆದರೆ ಜನರ ಮತ್ತು ದೇವರ ಆಶೀರ್ವಾದದಿಂದ ಸರ್ಕಾರ ಸುಭದ್ರವಾಗಿದೆ. ನಾವು ಐದು ವರ್ಷ ಪೂರೈಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಕೆಲವು ದಿನಗಳ ಹಿಂದಷ್ಟೆ ಹೈಕಮಾಂಡ್ ಅನ್ನು ಭೇಟಿ ಮಾಡಿ ಬಂದಿದ್ದ ಯಡಿಯೂರಪ್ಪ ಅವರು ನಾವು ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ ಎಂದಿದ್ದರು, ಆದರೆ ಕುಮಾರಸ್ವಾಮಿ ಹೇಳಿಕೆ ನೋಡಿದರೆ ಆಪರೇಷನ್ ಕಮಲ ತೆರೆ ಮರೆಯಲ್ಲಿ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ.












Click it and Unblock the Notifications