ಎರಡನೇ ದಿನಕ್ಕೆ ಕಾಲಿಟ್ಟ ನೌಕರರ ಧರಣಿ; ಅನಿರ್ದಿಷ್ಟ ಕಾಲ ಲಾಕೌಟ್ ಘೋಷಿಸಿದ ಟೊಯೊಟಾ
ರಾಮನಗರ, ನವೆಂಬರ್ 11: ಬಿಡದಿ ಟೊಯೊಟಾ ಕಾರು ತಯಾರಿಕಾ ಕಂಪನಿ ಕಾರ್ಮಿಕರ ಅಹೋರಾತ್ರಿ ಧರಣಿ ಎರಡನೇ ದಿನವು ಮುಂದುವರೆದ ಹಿನ್ನೆಲೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಆಡಳಿತ ಮಂಡಳಿ ಲಾಕೌಟ್ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಸೌಹಾರ್ದಯುತ ಮತ್ತು ಆರೋಗ್ಯಕರ ಕೆಲಸದ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ಸ್ಥಾವರದಲ್ಲಿ ಅಪೇಕ್ಷಿತ ಮಟ್ಟದ ಶಿಸ್ತನ್ನು ಕಾಪಾಡಿಕೊಳ್ಳುವ ನಮ್ಮ ಪ್ರಯತ್ನದ ನಡುವೆ ಉದ್ಯೋಗಿಯೊಬ್ಬರು ಶಿಸ್ತು ಉಲ್ಲಂಘಿಸಿ, ಸ್ವೀಕಾರಾರ್ಹವಲ್ಲದ ನಡವಳಿಕೆ ತೋರಿದ್ದಾರೆ ಎಂದು ಕಂಪನಿ ಆರೋಪಿಸಿದೆ.
ಕಂಪನಿಯ ಕಾನೂನು ಮತ್ತು ಸೇವಾ ನೀತಿಯಂತೆ, ಆ ನೌಕರನನ್ನು ಅಮಾನತುಗೊಳಿಸಿ ವಿಚಾರಣೆಯಡಿ ಇರಿಸಲಾಗಿದೆ. ಟಿಕೆಎಂ ಯೂನಿಯನ್ ಅಕ್ರಮ ಧರಣಿ ನಡೆಸುತ್ತಿದೆ. ಸದಸ್ಯರು ಕಾನೂನುಬಾಹಿರವಾಗಿ ಕಂಪನಿಯ ಆವರಣದಲ್ಲಿ ಉಳಿದುಕೊಂಡಿದ್ದಾರೆ ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಿಂದ ಎದುರಾಗಿರುವ ವಾತಾವರಣದಲ್ಲಿ ನೌಕರರ ಸುರಕ್ಷತೆಯನ್ನು ಕಾಪಾಡಲು, ಟೊಯೋಟಾ ಕಿರ್ಲೋಸ್ಕರ್ ಮೋಟರ್ ಮುಂದಿನ ಸೂಚನೆ ಬರುವವರೆಗೂ "ಲಾಕೌಟ್" ಎಂದು ಘೋಷಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು, ನೌಕರರು ಸೇರಿದಂತೆ ತನ್ನೆಲ್ಲ ಪಾಲುದಾರರ ಯೋಗಕ್ಷೇಮ ಕಾಯಲು ಬದ್ಧವಾಗಿದೆ ಎಂದೂ ತಿಳಿಸಿದೆ.












Click it and Unblock the Notifications