Bengaluru-Mysuru Expressway: ವಾಹನ ಸವಾರರೇ ಹುಷಾರ್‌.. ಈ ನಿಯಮಗಳನ್ನ ಉಲ್ಲಂಘಿಸಿದ್ರೆ ದಂಡನೂ ಕಟ್ಬೇಕು, DL ಕೂಡ ರದ್ದು.!

ರಾಮನಗರ, ಜುಲೈ, 06: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಆದಾಗಿನಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇವೆ. ಇಲ್ಲಿ ಇಷ್ಟು ದಿನ ಸ್ಪೀಡ್‌ ಲಿಮಿಟ್‌ ಇಲ್ಲದ ಕಾರಣ ವಾಹನ ಸವಾರರ ಅಟ್ಟಹಾಸವೇ ಮುಂದುವರೆದಿತ್ತು. ಆದರೆ ಇದೀಗ ಎಚ್ಚೆತ್ತ ಪೊಲೀಸ್‌ ಇಲಾಖೆ ಸ್ಪೀಡ್ ಲಿಮಿಟ್‌ ಅಳವಡಿಸುವ ಮೂಲಕ ಅಪಘಾತಗಳ ತಡೆಗೆ ಮುಂದಾಗಿದೆ.

ಇದೀಗ ಹೆದ್ದಾರಿಯಲ್ಲಿ ಸ್ಪೀಡ್ ರೆಡಾರ್ ಗನ್ ಅಳವಡಿಸಲಾಗಿದೆ. ಇನ್ಮುಂದೆ ದಶಪಥ ಹೆದ್ದಾರಿಯಲ್ಲಿ ಸ್ಪೀಡ್ ಲಿಮಿಟ್ ಮೀರಿ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಮತ್ತು ವೇಗವಾಗಿ ವಾಹನ ಚಾಲನೆ ಮಾಡಿದವರ ಡಿಎಲ್ ಕೂಡ ರದ್ದುಗೊಳಿಸಲಾಗುತ್ತದೆ.

Bengaluru-Mysuru Expressway: New traffic rules Implementation fof prevent accidents

ವೇಗದ ಮಿತಿ 100ಕ್ಕಿಂತ ಹೆಚ್ಚಾಗಿದ್ದರೆ ಪ್ರಕರಣ ದಾಖಲಾಗಲಾಗಲಿದ್ದು, ನಂತರ ನಿಯಮ ಉಲ್ಲಂಘನೆಯ ಫೋಟೊ, ನೋಟಿಸ್ ವಾಹನ ವಾಹನ ಸವಾರರ ಮೊಬೈಲ್‌ಗೆ ಬರಲಿದೆ ಹುಷಾರ್‌ ಎನ್ನುವ ಸಂದೇಶವನ್ನು ಪೊಲೀಸ್‌ ಇಲಾಖೆ ರವಾನಿಸಿದೆ. ಈಗಾಗಲೇ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ರಾಮನಗರ ವ್ಯಾಪ್ತಿಯಲ್ಲಿ 5 ಸ್ಪೀಡ್ ರೆಡಾರ್ ಗನ್ ಮೂಲಕ ಕಾರ್ಯಾಚರಣೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ.

ಇನ್ನು ಹೆದ್ದಾರಿ ವೀಕ್ಷಣೆ ಬಳಿಕ ಈ ಬಗ್ಗೆ ಮಾತನಾಡಿದ ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ, ಈ ನಿಯಮವನ್ನು ಅಳವಡಿಸಲು ಎಡಿಜಿಪಿ ಅಲೋಕ್ ಕುಮಾರ್ ಅವರು ಈಗಾಗಲೇ ಹೆದ್ದಾರಿ ಪ್ರಾಧಿಕಾರದವರಿಗೆ ಜುಲೈ 31ಕ್ಕೆ ಡೆಡ್ಲೈನ್ ಕೊಟ್ಟಿದ್ದಾರೆ. ನಿನ್ನೆ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ಸ್ಪೀಡ್ ಲೈನ್‌ಗಳಲ್ಲಿ ಪರಿಶೀಲನೆ ಮಾಡಿದ್ದೇವೆ. ಈ ವೇಳೆ ವಾಹನ ಸವಾರರು ಗಂಟೆಗೆ 80, 90, 100 km ವೇಗದಲ್ಲಿ ವಾಹನ ಚಾಲನೆ ಮಾಡಿರುವ ಕುರಿತು ಪರಿಶೀಲನೆ ಮಾಡಿದ್ದೇವೆ ಎಂದರು.

ಅಲ್ಲದೆ ಯಾರು 100 ಕಿಲೋ ಮೀಟರ್‌ ವೇಗ ದಾಟಿದ್ದಾರೆಯೋ ಅಂತಹವರಿಗೆ ದಂಡವನ್ನೂ ಕೂಡ ಹಾಕಲಾಗಿದೆ. ಹಾಗಾಯೇ ನಾಳೆಯಿಂದ ಅಧಿಕೃತವಾಗಿ ವೇಗಮಿತಿ ಪರಿಶೀಲನೆ, ದಂಡ ಹಾಕುವುದು ಪ್ರಾರಂಭ ಆಗುತ್ತದೆ. ಯಾರೇ ಆಗಲಿ ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಬಹಳ ಮುಖ್ಯವಾಗಿ ಅತೀ ವೇಗ, ಲೈನ್ ಟ್ರ್ಯಾಕ್, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಕಡ್ಡಾಯ ಈ ನಾಲ್ಕು ನಿಯಮಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದರು.

ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘಸಿದರೆ ಅಂತಹವರಿಗೆ ಒಂದು ಸಾವಿರ ರೂಪಾಯಿ ದಂಡ ಅಷ್ಟೇ ಅಲ್ಲದೆ, ಡಿಎಲ್ ಸಹ ರದ್ದು ಮಾಡಲಾಗುತ್ತದೆ. ಹಾಗೆಯೇ ಹೆದ್ದಾರಿಯಲ್ಲಿ ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಒಟ್ಟು 28 ಸ್ಥಳಗಳಲ್ಲಿ ಕ್ಯಾಮರಾಗಳು ನಿಗಾವಹಿಸಿರುತ್ತವೆ. ಒಂದು ಬಾರಿ ರೂಲ್ಸ್ ಬ್ರೇಕ್ ಮಾಡಿದರೆ ಸಾಕು ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಆದ್ದರಿಂದ ದಯವಿಟ್ಟು ಯಾರೂ ಸಹ ಅತೀ ವೇಗೆದಲ್ಲಿ ಹೋಗಬೇಡಿ ಎಂದು ಮನವಿ ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+