Bengaluru-Mysuru expressway: ನಿಯಮ ಉಲ್ಲಂಘನೆಯಡಿ ಒಂದೇ ದಿನದಲ್ಲಿ ₹68,500 ದಂಡ ವಸೂಲಿ, ಪ್ರತಿಕ್ರಿಯೆಗಳು ಹೀಗಿವೆ

ರಾಮನಗರ, ಆಗಸ್ಟ್‌, 02: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ‌ NHAI ಹಾಗೂ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಆಗಸ್ಟ್‌ 1‌ರಿಂದ ದ್ವಿವಕ್ರ ಸೇರಿದಂತೆ ಹಲವು ಲಘು ವಾಹನ ಸಂಚಾರವನ್ನು ನಿಷೇಧ ಮಾಡಿದೆ. ಆದರೂ ಮೊದಲ ದಿನವೇ ನಿಯಮ ಮೀರಿ ಹೆದ್ದಾರಿಯಲ್ಲಿ ಸಂಚಾರ ಮಾಡಿದ ಲಘು ವಾಹನ ಸವಾರರಿಂದ 68,500 ರೂ. ದಂಡ ವಸೂಲಿ ಮಾಡಲಾಗಿದೆ. ಹಾಗಾದರೆ ಇದಕ್ಕೆ ಪ್ರತಿಕ್ರಿಯೆಗಳು ಹೇಗೆ ವ್ಯಕ್ತವಾಗಿವೆ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಸೇರಿದಂತ ಇತರ ಮಂದಗತಿಯ ವಾಹನಗಳಿಗೆ ಆಗಸ್ಟ್‌ 1 ರಿಂದ ನಿಷೇಧ ಹೇರಲಾಗಿದೆ. ನಿಷೇಧ ಆದೇಶವನ್ನು ಉಲ್ಲಂಘನೆ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದರು.

bengaluru-mysuru-expressway

ಆದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದ ತಪ್ಪಿಗೆ ಮೊದಲ ದಿನವೇ ಸುಮಾರು137 ಲಘು ವಾಹನಗಳ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ. ಹಾಗೆಯೇ ಅವರಿಂದ 68,500 ರೂಪಾಯಿ ದಂಡ ವಸೂಲಿ‌ ಮಾಡಿದ್ದಾರೆ. ಹೆದ್ದಾರಿಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಇನ್ನೂ ಒಂದು ವಾರ ಕಾರ್ಯಾಚರಣೆ ನಡೆಸಲಿದ್ದು, ಹೆದ್ದಾರಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿದವರೆಗೆ ದಂಡ ಬಿಳಲಿದೆ‌ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಇನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಲವು ಕಡೆ ಸರ್ವಿಸ್ ರಸ್ತೆಯನ್ನೇ ನಿರ್ಮಾಣ ಮಾಡದ ಗುತ್ತಿದಾರರಿಗೆ ದಂಡನೇ ನೀಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಹಾಗೂ ಪೊಲೀಸ್ ಇಲಾಖೆಯ ದಂಡ ವಸೂಲಿ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೇ ರೈಲ್ವೇ ಹಳಿ ಹಾದುಹೋಗಿರುವ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ಪ್ರಮುಖವಾಗಿ ಬಿಡದಿ ಹಾಗೂ ಚನ್ನಪಟ್ಟಣದ ಬಳಿ ರೈಲ್ವೆ ಮಾರ್ಗದ ಮೇಲೆ ಸರ್ವಿಸ್ ರಸ್ತೆ ರ್ನಿಮಾಣ ಮಾಡಿಲ್ಲ. ಮುಂದೆ ಸರ್ವಿಸ್ ರಸ್ತೆ ಕೊನೆಯಾಗುತ್ತದೆ ಎಂದು ಸೂಚನಾ ಫಲಕ ಅಳವಡಿಸದ ಹಿನ್ನಲೆಯಲ್ಲಿ ಲಘು ವಾಹನಗಳು ಅಗತ್ಯವಾಗಿ ಸುತ್ತು ಬಳಸಿನ ರಸ್ತೆ ಬಳಸಬೇಕಿದೆ.

ಹೆದ್ದಾರಿಯಲ್ಲಿ ಯಾವುದೇ ಸಮರ್ಪ ವ್ಯವಸ್ಥೆಯನ್ನೇ ನೀಡದೆ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಣ ಮಾಡುವ ದಂಧೆ ನಡೆಸುತ್ತಿದ್ದಾರೆ. ಹಲವು ರಾಜಕೀಯ ನಾಯಕರು, ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆ ಎರಡು ಬಾರಿ ಟೋಲ್ ಸುಂಕವನ್ನು ಹೆಚ್ಚಿಸಿ ದರೋಡೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+